Advertisement

ವಿಡಿಯೋ…: ಸಾಕು ನಾಯಿಗೆ ಸೀಮಂತ ಮಾಡಿದ ಮಹಿಳೆ: ಮನೆಯಲ್ಲಿ ಸಂಭ್ರಮದ ಛಾಯೆ

04:17 PM Dec 12, 2022 | Team Udayavani |

ನವದೆಹಲಿ : ಇತ್ತೀಚಿನ ದಿನಗಳಲ್ಲಿ ಜನರಿಗೆ ಸಾಕು ಪ್ರಾಣಿಗಳ ಮೇಲೆ ಪ್ರೀತಿ ಹೆಚ್ಚಾಗತೊಡಗಿದೆ, ಸಾಮಾಜಿಕ ಜಾಲತಾಣದಲ್ಲಿ ದಿನವೊಂದಕ್ಕೆ ಹತ್ತಾರು ಸಾಕು ಪ್ರಾಣಿಗಳ ವಿಡಿಯೋ ನಮ್ಮ ಮನ ಮುಟ್ಟುವಂತೆ ಇರುತ್ತೆ..

Advertisement

ಅದೇ ರೀತಿ ಕೆಲವೊಂದು ಮನೆಯಲ್ಲಿ ಸಾಕು ಪ್ರಾಣಿಗಳನ್ನು ಮನೆಯ ಸದಸ್ಯರಂತೆ ಕಾಣುತ್ತಾರೆ, ಹಾಗೆಯೇ ಇಲ್ಲೊಬ್ಬರು ಮಹಿಳೆ ತನ್ನ ಮನೆಯ ಶ್ವಾನಕ್ಕೆ ಸೀಮಂತ ಮಾಡಿಸಿ ಜನರ ಮನಗೆದ್ದಿದ್ದಾರೆ.

ತನ್ನ ಮನೆಯ ಮುದ್ದಿನ ಸ್ವಾನಕ್ಕೆ ಸೀಮಂತ ಮಾಡಿದ ವಿಡಿಯೋ ಅನ್ನು ಇನ್ಸ್ಟಾ ಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದು ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಸುಜಾ ಹೌಸ್ ಮೇಟ್ ಎಂಬ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಹಾಕಿರುವ ವಿಡಿಯೋದಲ್ಲಿ ಮನೆಯೊಳಗೇ ಗರ್ಭಿಣಿ ಶ್ವಾನಕ್ಕೆ ಮಹಿಳೆ ಇಷ್ಟವಾದ ತಿಂಡಿಗಳನ್ನು ಎದುರಿಗೆ ಇಟ್ಟು ಕುತ್ತಿಗೆಗೆ ಹೂವಿನ ಹಾರ ಹಾಕಿ, ಹಣೆಗೆ ತಿಲಕ ಇಟ್ಟು ಆರತಿ ಮಾಡಿದ್ದಾರೆ ಇದೆಲ್ಲವೂ ವಿಡಿಯೋ ದಲ್ಲಿ ಕಾಣಬಹುದು ಹಾಗೂ ಮನೆಯ ಬಳಿ ಇರುವ ಇತರ ಶ್ವಾನಗಳಿಗೂ ಆಹಾರ ನೀಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ನವೆಂಬರ್ 20 ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಾಗಿನಿಂದ, ವೀಡಿಯೊವನ್ನು 4.9 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

Advertisement

ಇದನ್ನೂ ಓದಿ: ಇಡಿ ಮುಖ್ಯಸ್ಥರಿಗೆ ಮೂರನೇ ಅವಧಿಯ ವಿಸ್ತರಣೆ: ಕೇಂದ್ರದ ಬಳಿ ಪ್ರತಿಕ್ರಿಯೆ ಕೇಳಿದ ಸುಪ್ರೀಂ

Advertisement

Udayavani is now on Telegram. Click here to join our channel and stay updated with the latest news.

Next