Advertisement

ಗಂಡನಿಗೆ ವಿಷ ಉಣಿಸಿ ಕೊಂದು ಪ್ರಿಯಕರನೊಂದಿಗೆ ಪತ್ನಿ ಪರಾರಿ

12:12 PM Jul 18, 2018 | Team Udayavani |

ಮುಜಫ‌ರನಗರ : ಗಂಡನಿಗೆ ವಿಷ ಉಣಿಸಿ ಕೊಂದು ಪ್ರಿಯಕರನೊಂದಿಗೆ ಪರಾರಿಯಾಗಿರುವ ಪತ್ನಿಯ ವಿರುದ್ಧ  ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Advertisement

ಪತ್ನಿಗೆ ಬೇರೊಬ್ಬ ವ್ಯಕ್ತಿಯೊಂದಿಗೆ ಅಫೇರ್‌ ಇರುವುದು 30ರ ಹರೆಯದ ಪತಿ ಅಫ್ಸರ್‌ ಅಲಿಗೆ ಗೊತ್ತಾಗಿತ್ತು. ಇದನ್ನು ಆತ ತೀವ್ರವಾಗಿ ಪ್ರತಿಭಟಿಸಿ ಆಕ್ಷೇಪಿಸಿದ್ದ. ತನ್ನ ಹಾದಿಗೆ ಅಡ್ಡಬಂದಿರುವ ಪತಿಗೆ ವಿಷ ಉಣಿಸಿ ಕೊಂದ ಬಳಿಕ ಪತ್ನಿ ಪ್ರಿಯಕರ ಜತೆಗೆ ಪಲಾಯನ ಮಾಡಿದ್ದಳು. ಘಟನೆಗೆ ಸಂಬಂಧಿಸಿ ಅಲಿ ಅವರ ಸಹೋದರ ನವಾಬ್‌ ಪೊಲೀಸರಿಗೆ ದೂರು ನೀಡಿದ್ದರು. 

ಅಫ್ಸರ್‌ ಅಲಿ ಕಳೆದ ಜು.9ರಂದು ತನ್ನ ಮನೆಯಲ್ಲಿ ಸತ್ತು ಬಿದ್ದಿರುವುದು ಪತ್ತೆಯಾಗಿತ್ತು. ಆತನ ಪತ್ನಿಯು ತನ್ನ ಗಂಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಳು. ಕೊಲೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ಈಗ ಪರಾರಿಯಾಗಿರುವ ಜೋಡಿಯನ್ನು ಹುಡುಕುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next