ಯಲಹಂಕ: ಇಲ್ಲಿಗೆ ಸಮೀಪದ ರಾಜಾನುಕುಂಟೆಯಲ್ಲಿ ಹಳಿ ದಾಟಲು ಮುಂದಾದ ಮಹಿಳೆ ರೈಲು ಚಲಿಸಲು ಪ್ರಾರಂಭವಾದ ತಕ್ಷಣೆ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಹಳಿಯ ಮಧ್ಯದಲ್ಲಿ ಮಲಗಿ ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೋ ವೈರಲ್ ಆಗಿದೆ.
ರಾಜಾನುಕಂಟೆಯ ಪಾರ್ವತಿ ಪುರ ಅದ್ದಿಗಾನಹಳ್ಳಿ, ತರಹುಣಸೆ, ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನರು, ಕಾರ್ಮಿ ಕರು ಕೆಲಸಕ್ಕೆ ರಾಜಾನುಕುಂಟೆ ರೈಲನ್ನು ಆಶ್ರಯಿ ಸಿದ್ದು, ರೈಲಿಗೆ ಹೋಗಲು ಹಳಿಗಳನ್ನು ದಾಟಬೇಕಿದೆ.
ರೈಲ್ವೆ ಕ್ರಾಸಿಂಗ್ ಸಮಯದಲ್ಲಿ 2-3 ರೈಲುಗಳು ಗೂಡ್ಸ್ ಗಾಡಿಗಳು ಇಲ್ಲಿ ಯಾವಾಗಲು ಚಲಿಸುತ್ತಿ ರುತ್ತವೆ. ಅದ್ದಿಗಾನಹಳ್ಳಿಯಲ್ಲಿ ವಾಸವಾಗಿರುವ ಮಹಿಳೆ ತನ್ನ ದಿನನಿತ್ಯದ ಕೆಲಸಕ್ಕೆ ರಾಜಾನುಕುಂಟೆಗೆ ಹೋಗಲು ಹೋಗಿದ್ದು ಒಂದು ರೈಲು ಕೆಳಗಡೆ ನುಗ್ಗಿ ಬಂದು ಮತ್ತೂಂದು ಗೂಡ್ಸ್ ಗಾಡಿಯ ಕೆಳಗಡೆ ಬರುವಟ್ಟರಲ್ಲಿ ರೈಲು ಚಲಿಸಲಾರಂಭಿಸಿದೆ. ಇದರಿಂದ ಎಚ್ಚೆತ್ತ ಮಹಿಳೆ ರೈಲು ಹಳಿಯ ಮಧ್ಯೆ ಉದ್ದವಾಗಿ ಸುಮಾರು ಒಂದು ನಿಮಿಷ ಮಲಗಿದ್ದಾರೆ. ಬೋಗಿಗಳು ಹೊದನಂತರ ಎದ್ದು ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿತ ವಿಡಿಯೋ ಸೇರೆ ಮಾಡಿದವರು ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಈ ವಿಡಿಯೋ ವೈರಲ್ ಆಗಿದೆ.
ಆರು ತಿಂಗಳ ಹಿಂದೆ ವ್ಯಕ್ತಿಯೊಬ್ಬರು ರೈಲು ಹತ್ತಿ ಇಳಿಯುವಾಗ ಕಾಲು ಮುರಿದು ಆಸ್ವತ್ರೆಗೆ ಸೇರಿದ ಘಟನೆ ಒಂದಾದರೆ ಎರಡು ವರ್ಷಗಳ ಹಿಂದೆ ಹಳಿಕೆಳಗೆ ನುಗ್ಗಲು ಹೋಗಿ ರೈಲು ಸಂಚರಿಸಿ ಒಬ್ಬರು ಸಾವಿಗೀಡಾಗಿದ್ದರು. ಪ್ರತಿದಿನ ಇಲ್ಲಿ ಸಾವಿರಾರು ಮಂದಿ ಸಂಚರಿಸುತ್ತಿದ್ದು, ಕೆಳಸೇತುವೆ ನಿರ್ಮಾಣ ಮಾಡಿ ಈ ಅವ್ಯವಸ್ಥೆಗೆ ಮುಕ್ತಿ ನೀಡಬೇಕೆಂದು ಸ್ಥಳೀಯ ನಿವಾಸಿ ಮುನಿರಾಜು ಸರ್ಕಾರವನ್ನು ಒತ್ತಾಯಿಸಿದ್ದಾರೆ.