Advertisement

Ankola : ಸಿಡಿಲು ಬಡಿದು ಮಹಿಳೆ ಅಸ್ವಸ್ಥ, ಆಸ್ಪತ್ರೆಗೆ ದಾಖಲು

09:52 PM Oct 17, 2023 | Team Udayavani |

ಅಂಕೋಲಾ : ತಾಲೂಕಿನಲ್ಲಿ ಸುರಿದ ಭಾರೀ ಗುಡುಗು ಸಹಿತ ಭಾರಿ ಮಳೆಯ ಸಂದರ್ಭದಲ್ಲಿ ಸಿಡಿಲು ಬಡಿದು ಮಹಿಳೆಯೋರ್ವಳು ಆಸ್ವಸ್ಥಗೊಂಡ ಘಟನೆ ತಾಲೂಕಿನ ಅಗಸೂರಿನಲ್ಲಿ ನಡೆದಿದೆ.

Advertisement

ಅಗಸೂರು ಗ್ರಾಮದ ಹಿತ್ತಲಗದ್ದೆ ನಿವಾಸಿ ರಂಜಿತಾ ಜಗದೀಶ ಗೌಡ ಇವರೇ ಸಿಡಿಲಿನ ಆಘಾತಕ್ಕೆ ಒಳಗಾದ ಮಹಿಳೆಯಾಗಿದ್ದು ಇವರನ್ನು ಕೂಡಲೇ ಅಂಕೋಲಾ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸೋಮವಾರ ಸಂಜೆ 7.30 ರ ಸುಮಾರಿಗೆ ಇದ್ದಕ್ಕಿದ್ದಂತೆ ಗುಡುಗು ಸಿಡಿಲು ಸಹಿತ ಮಳೆ ಸುರಿಯತೊಡಗಿದ್ದು ಅದೇ ವೇಳೆ ಒಂದೂವರೆ ತಿಂಗಳ ಹಸುಗೂಸಿನೊಂದಿಗೆ ಮನೆಯಲ್ಲಿ ಮಲಗಿದ್ದ ರಂಜಿತಾ ಮನೆಗೇ ಸಿಡಿಲು ಬಡಿದಿದೆ. ಅದೃಷ್ಟವಶಾತ್ ಮಗು ಬಚಾವಾಗಿದ್ದು ಸಿಡಿಲಿನ ಆಘಾತಕ್ಕೆ ರಂಜಿತಾ ಅಸ್ವಸ್ಥಗೊಂಡಿದ್ದಾಳೆ. ಸಿಡಿಲಿಗೆ ಮನೆಯ ಗೋಡೆಯೂ ಬಿರುಕು ಬಿಟ್ಟಿದ್ದು ವಿದ್ಯುತ್ ಉಪಕರಣಗಳು, ಟಿವಿ ಮುಂತಾದವು ಗಳಿಗೆ ಹಾನಿಯಾಗಿದೆ.

ಕಂದಾಯ ನಿರೀಕ್ಷಕ ಭಾರ್ಗವ ನಾಯಕ ಸ್ಥಳ ಪರಿಶೀಲನೆ ನಡೆಸಿದ್ದಾರೆ. ತಹಶೀಲ್ದಾರ ಅಶೋಕ ಭಟ್‌ ತಾಲೂಕಾಸ್ಪತ್ರೆಗೆ ಭೇಟಿ ನೀಡಿ ಮಹಿಳೆಯ ಆರೋಗ್ಯ ವಿಚಾರಿಸಿ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿ ಎಲ್ಲ ರೀತಿಯ ಸಹಾಯ ಸಹಕಾರ ನೀಡುವ ಭರವಸೆ ನೀಡಿದರು.

ಇದನ್ನೂ ಓದಿ: Rahul Gandhi: ಗೌರಿ ಲಂಕೇಶ್‌ ಹತ್ಯೆ: ಹೈಕೋರ್ಟ್‌ಗೆ ರಾಹುಲ್‌ ಮೇಲ್ಮನವಿ

Advertisement
Advertisement

Udayavani is now on Telegram. Click here to join our channel and stay updated with the latest news.

Next