Advertisement

ದಾರಿತಪ್ಪಿ ಸ್ಯಾನ್‌ಫ್ರಾನ್ಸಿಸ್ಕೋ ತಲುಪಿದ ಮಹಿಳೆ

01:23 AM May 08, 2017 | Team Udayavani |

ನ್ಯೂಯಾರ್ಕ್‌: ಪ್ಯಾರಿಸ್‌ಗೆ ಹೋಗಲು ವಿಮಾನವೇರಿದ ಮಹಿಳೆ ಇಳಿದದ್ದು ಮಾತ್ರ ಸ್ಯಾನ್‌ ಫ್ರಾನ್ಸಿಸ್ಕೋ ನಿಲ್ದಾಣದಲ್ಲಿ! ಕಾರಣ, ಕಡೇ ಕ್ಷಣದಲ್ಲಾದ ಪ್ರವೇಶ ದ್ವಾರ ಬದಲಾವಣೆ. ಅಚಾತುರ್ಯ ನಡೆದಿರುವುದು ಯುನೈಟೆಡ್‌ ಏರ್‌ಲೈನ್ಸ್‌ನಲ್ಲಿ. ಲೂಸಿ ಬಹೆಟೌಕಿಲೇ ಎಂಬ ಫ್ರೆಂಚ್‌ ಮಹಿಳೆ ನ್ಯೂಯಾರ್ಕ್‌ ವಿಮಾನ ನಿಲ್ದಾಣದಲ್ಲಿ, ಅಲ್ಲಿನ ಸಿಬ್ಬಂದಿ ಸೂಚಿಸಿದ ಗೇಟ್‌ಗೆ ತೆರಳಿ ವಿಮಾನ ಏರಿ ಕುಳಿತಿದ್ದಾರೆ. ವಿಮಾನ ಟೇಕಾಫ್ ಆಗಿ ಸುಮಾರು 4828 ಕಿ.ಮೀ ಕ್ರಮಿಸಿ ಸ್ಯಾನ್‌ಫ್ರಾನ್ಸಿಸ್ಕೋ ನಿಲ್ದಾಣದಲ್ಲಿ ಲ್ಯಾಂಡ್‌ ಆಗಿದೆ. ತಾನು ಪ್ಯಾರಿಸ್‌ ಬದಲು ಬೇರೊಂದು ಸ್ಥಳಕ್ಕೆ ಬಂದಿರುವುದು ತಿಳಿದು ಲೂಸಿ ಹೌಹಾರಿದ್ದಾರೆ. ತಮ್ಮ ತಪ್ಪು ಅರಿತ, ಏರ್‌ಲೈನ್ಸ್‌ ಸಿಬ್ಬಂದಿ ಮಹಿಳೆ ಪ್ಯಾರಿಸ್‌ ತಲುಪಿಸಲು ವ್ಯವಸ್ಥೆ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next