Advertisement

ಮಹಿಳೆಯನ್ನು ಕಾರಿನಿಂದ ಹೊರಗೆಳೆದು ಪತಿಯ ಎದುರೇ ರೇಪ್‌

11:03 AM Jan 23, 2018 | udayavani editorial |

ಗುರುಗ್ರಾಮ : ಬಂದೂಕು ತೋರಿಸಿ ಪ್ರಾಣ ಬೆದರಿಕೆ ಒಡ್ಡಿ 22 ವರ್ಷದ ವಿವಾಹಿತೆಯನ್ನು ಕಾರಿನಿಂದ ಹೊರಗೆಳೆದು ಆಕೆಯ ಪತಿ ಮತ್ತು ಮನೆಯವರ ಎದುರೇ ಅತ್ಯಾಚಾರ ಮಾಡಿದ ಘಟನೆ ಗುರುಗ್ರಾಮದ ಸೆಕ್ಟರ್‌ 56ರಲ್ಲಿ ನಡೆದಿದ್ದು ಈ ಪ್ರಕರಣದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಪೊಲೀಸರು ಆರೋಪಿಗಳನ್ನು ಗುರುಗ್ರಾದ ಸೊಹಾ° ಸಮೀಪದ  ಜೊಹಾಲ್ಕಾ ಗ್ರಾಮದಲ್ಲಿನ ಅವರ ಮನೆಯಲ್ಲೇ ಬಂಧಿಸಿದರು,

ಮಹಿಳೆಯ ತನ್ನ ಪತಿ, ಭಾವ ಮತ್ತು ಕುಟುಂಬದ ಇತರರೊಂದಿಗೆ ಕಾರಿನಲ್ಲಿ ಮನೆಗೆ ಮರಳುತ್ತಿದ್ದರು. ಸೆಕ್ಟರ್‌ 56ರಲ್ಲಿನ ಬ್ಯುಸಿನೆಸ್‌ ಪಾರ್ಕ್‌ ಸಮಿಪ ಕಾರನ್ನು ನಿಲ್ಲಿಸಿ ಪತಿ ಮೂತ್ರ ವಿಸರ್ಜನೆಗೆಂದು ಹೋದರು.

ಆಗ ಎರಡು ಕಾರು ಅವರ ಕಾರಿನ ಬಳಿ ಬಂದು ನಿಂತವು. ಅದರೊಳಗಿಂದ ಕೆಳಗಿಳಿದ ನಾಲ್ವರು ಬಂದೂಕು ತೋರಿಸಿ ಮಹಿಳೆಯನ್ನು ಹೊರಗಳೆದು ಆಕೆಯ ಮೇಲೆ ಅತ್ಯಾಚಾರ ಎಸಗಿದರು ಎಂದು ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಮತ್ತು ಮುಖ್ಯ ಪಿಆರ್‌ಓ ಆಗಿರುವ ಮನೀಶ್‌ ಸೆಹಗಲ್‌ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next