ಬ್ಯಾಂಕಾಕ್: ಕೋಪಗೊಂಡ ಮಹಿಳೆಯೊಬ್ಬಳು ಇಬ್ಬರು ಪೇಂಟರ್‌ಗಳ ಜೀವದೊಂದಿಗೆ ಚೆಲ್ಲಾಟ ಆಡಿದ ಘಟನೆ ಥಾಯ್ಲೆಂಡ್‌ನ ಬಹುಮಹಡಿ ಕಟ್ಟಡವೊಂದರಲ್ಲಿ ನಡೆದಿದೆ.
ತನಗೆ ತಿಳಿಸದೇ ಕೆಲಸ ಮಾಡಿದ್ದರಿಂದ ಕೋಪಗೊಂಡ ಮಹಿಳೆ ,ಇಬ್ಬರು ಪೇಂಟರ್‌ಗಳು ಹಾಕಿಕೊಂಡಿದ್ದ ಬೆಂಬಲ ಹಗ್ಗವನ್ನು ಕತ್ತರಿಸಿ ಮಹಿಳೆ ಆಕ್ರೋಶ ಹೊರಹಾಕಿದ್ದಾಳೆ .
26 ನೇ ಮಹಡಿಯಲ್ಲಿ ಹಗ್ಗದ ಸಹಾಯವಿಲ್ಲದೆ ನೇತಾಡುತ್ತಾ ಪರದಾಡಿದ ಪೆಂಟರ್ ಗಳನ್ನು ದಂಪತಿಗಳಿಬ್ಬರು ರಕ್ಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ವಿರುದ್ಧ ಕೊಲೆ ಯತ್ನ ಮತ್ತು ಆಸ್ತಿ ನಾಶದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಥಾಯ್ ರಾಜಧಾನಿಯ ಉತ್ತರದಲ್ಲಿರುವ ಪಾಕ್ ಕ್ರೆಟ್ ಪೊಲೀಸ್ ಠಾಣೆಯ ಮುಖ್ಯಸ್ಥ ಕರ್ನಲ್ ಪೊಂಗ್‌ಜಾಕ್ ಪ್ರೀಚಕರುನ್‌ಪಾಂಗ್ ತಿಳಿಸಿದ್ದಾರೆ.
34 ವರ್ಷದ ಮಹಿಳೆ ಮೊದಲು ತನ್ನ ಕೃತ್ಯವನ್ನು ನಿರಾಕರಿಸಿದ್ದಳು, ಆದರೆ ಪೊಲೀಸರು ಕತ್ತರಿಸಿದ ಹಗ್ಗದ ಫಿಂಗರ್‌ಪ್ರಿಂಟ್ ಮತ್ತು ಡಿಎನ್‌ಎ ವಿಶ್ಲೇಷಣೆಗಾಗಿ ಕಳುಹಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.