ಬೆಂಗಳೂರು: ಸ್ಯಾಂಡಲ್‌ವುಡ್‌ನ ಖ್ಯಾತ ಖಳನಟ ಧರ್ಮ ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನಲ್ಲೇನಿದೆ?
ಧರ್ಮ ಮೂರು ತಿಂಗಳ ಹಿಂದೆ ಕಾರು ಚಾಲಕ ನವೀನ್ ಮೂಲಕ ಶೂಟಿಂಗ್ ಇದೆ ಎಂದು ಆರ್.ಆರ್.ನಗರಕ್ಕೆ ಮಹಿಳೆಯೊಬ್ಬಳನ್ನು ಕರೆಸಿಕೊಂಡಿದ್ದಾರೆ. ಬಳಿಕ ಶೂಟಿಂಗ್ ಇಲ್ಲ ಎಂದು ಊಟಕ್ಕೆಂದು ಕರೆದೊಯ್ದು, ಅಲ್ಲಿ ಅಮಲು ಬರುವ ಪಾನೀಯ ನೀಡಿ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ್ದಾರೆ. ಬಳಿಕ ಆ ವಿಡಿಯೋ ತೋರಿಸಿ ಬ್ಲ್ಯಾಕ್ ಮೇಲ್ ಮಾಡಿ 16 ಲಕ್ಷ ರೂಪಾಯಿ ಪಡೆದಿದ್ದಾರೆ ಎಂದು ಮಹಿಳೆ ದೂರಿದ್ದಾರೆ.
ಮಹಿಳೆ 2 ತಿಂಗಳ ಹಿಂದೆ ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರು ಇದುವರೆಗೆ ಆರೋಪಿಗಳಾದ ಧರ್ಮ ಮತ್ತು ಕಾರು ಚಾಲಕ ನವೀನ್‌ರನ್ನು ಬಂಧಿಸಿಲ್ಲ . ಕೇಳಿದರೆ ತಲೆ ಮರೆಸಿಕೊಂಡಿದ್ದಾರೆ ಎಂದಿದ್ದಾರೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ.
ದೂರು ನೀಡಿದ ಮಹಿಳೆ ವಿವಾಹಿತೆಯಾಗಿದ್ದು, ಮಕ್ಕಳೂ ಇದ್ದಾರೆ .ಘಟನೆ ಬೆಳಕಿಗೆ ಬರುತ್ತಿದ್ದಂತೆ ಆಕೆಯ ಮನೆಯಲ್ಲಿ ಕಲಹ ಆರಂಭವಾಗಿದೆ ಎಂದು ತಿಳಿದು ಬಂದಿದೆ.
ಧರ್ಮ ವಿರುದ್ಧ ಐಪಿಸಿ ಸೆಕ್ಷನ್ 506 ಮತ್ತು 384 ರ ಅಡಿ ಕೇಸು ದಾಖಲಾಗಿದೆ.