Advertisement
ಸಾಂಪ್ರದಾಯಿಕವಾಗಿ ಬಿಹಾರ ಚುನಾವಣೆಯಲ್ಲಿ ಮಹಿಳೆಯರು ಸ್ಪರ್ಧಿಸುವುದು ತುಂಬಾ ಕಡಿಮೆಯಾಗಿತ್ತು. ಆದರೆ ಈಗ ಎಲ್ಲಾ ವಿಷಯ, ಲೆಕ್ಕಾಚಾರವೂ ಬದಲಾಗಿದೆ. ಬಿಹಾರ ವಿಧಾನಸಭೆಯಲ್ಲಿ ಅವರ ಸಂಖ್ಯೆ ಸೀಮಿತವಾಗಿದ್ದರೂ ಕೂಡಾ ಇತ್ತೀಚೆಗಿನ ಚುನಾವಣೆಗಳಲ್ಲಿ ಮಹಿಳೆಯರು ಪುರುಷರನ್ನು ಮೀರಿಸಿದ್ದಾರೆ.
Related Articles
Advertisement
ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತ ಅಕ್ಟೋಬರ್ 28ರಿಂದ ಆರಂಭವಾಗಲಿದ್ದು, 71 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ನಾಮಪತ್ರ ಪರಿಶೀಲನೆ ಮತ್ತು ನಾಮಪತ್ರ ಹಿಂಪಡೆದ ನಂತರವೂ ಅಖಾಡದಲ್ಲಿ ಒಂದು ಸಾವಿರಕ್ಕೂ ಅಧಿಕ ಅಭ್ಯರ್ಥಿಗಳಿರಲಿದ್ದಾರೆ. ಇದರಲ್ಲಿ 113 ಮಹಿಳಾ ಅಭ್ಯರ್ಥಿಗಳಿದ್ದಾರೆ. ಬಹುತೇಕ ಮಹಿಳೆಯರು ಸ್ವತಂತ್ರವಾಗಿ ಅಥವಾ ಪ್ರಾದೇಶಿಕ ಪಕ್ಷಗಳ ಟಿಕೆಟ್ ನಿಂದ ಸ್ಪರ್ಧಿಸುತ್ತಿದ್ದಾರೆ. ಮೊದಲ ಹಂತದ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳು 27 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ರಾಷ್ಟ್ರೀಯ ಜನತಾದಳ ಮೊದಲ ಹಂತದ ಚುನಾವಣೆಯಲ್ಲಿ ಹತ್ತು ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಜೆಡಿಯು, ಬಿಜೆಪಿ ಹಾಗೂ ಎಲ್ ಜೆಪಿ ತಲಾ ಐದು ಮಹಿಳಾ ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಿದೆ. ಕಾಂಗ್ರೆಸ್ ಮತ್ತು ಹಿಂದೂಸ್ಥಾನಿ ಅವಾಮ್ ಮೋರ್ಚಾ (ಸೆಕ್ಯುಲರ್) ತಲಾ ಒಬ್ಬ ಮಹಿಳಾ ಅಭ್ಯರ್ಥಿಗೆ ಟಿಕೆಟ್ ನೀಡಿದೆ.
ಇದನ್ನೂ ಓದಿ:ಬಿಹಾರ ಚುನಾವಣೆ: ನಿತೀಶ್ ಗೆ ಮುಳುವಾಗಲಿದೆಯಾ ವಲಸೆ ಕಾರ್ಮಿಕರ, ಯುವ ಮತದಾರರ ಆಕ್ರೋಶ?
ಇವರು…ಬಿಹಾರ ಚುನಾವಣೆಯ ಪ್ರಮುಖ ಮಹಿಳಾ ಅಭ್ಯರ್ಥಿಗಳು:
ಉತ್ತರಪ್ರದೇಶ, ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಈಗಾಗಲೇ ಪ್ರಾದೇಶಿಕ ಪಕ್ಷಗಳ ನೆಲೆಗಟ್ಟಿನಲ್ಲಿ ಮಹಿಳಾ ಅಭ್ಯರ್ಥಿಗಳು ಮುಖ್ಯಮಂತ್ರಿಗಳಾಗಿದ್ದರು. ಮೇವು ಹಗರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರನ್ನು ಬಲವಂತಾಗಿ ರಾಜೀನಾಮೆ ಕೊಡಿಸಿದಾಗ ಆರ್ ಜೆಡಿ ನಾಯಕಿ ರಾಬ್ರಿ ದೇವಿ ರಾಜಕೀಯದಲ್ಲಿ ಇರಲಿಲ್ಲವಾಗಿತ್ತು. ಕೊನೆಗೆ ರಾಬ್ರಿ ಬಿಹಾರ ಮುಖ್ಯಮಂತ್ರಿಯಾಗಿದ್ದು ಕಣ್ಣ ಮುಂದಿರುವ ಇತಿಹಾಸವಾಗಿದೆ. ಈ ಬಾರಿಯ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಹಲವು ಮಹಿಳಾ ಅಭ್ಯರ್ಥಿಗಳು ಸದ್ದು ಮಾಡುತ್ತಿದ್ದಾರೆ.
ಪುಷ್ಪಂ ಪ್ರಿಯಾ:
ಪುಷ್ಪಂ ಪ್ರಿಯಾ ಬಿಹಾರ ವಿಧಾನಸಭಾ ಚುನಾವಣೆಯ ಅಭ್ಯರ್ಥಿ. ಪುಷ್ಪಂ ಅವರು ಜೆಡಿಯು ಮಾಜಿ ಎಂಎಲ್ ಸಿ ವಿನೋದ್ ಚೌಧರಿ ಅವರ ಮಗಳು. ದರ್ಬಾಂಗ್ ನಲ್ಲಿ ಶಿಕ್ಷಣ ಪಡೆದ ನಂತರ ಈಕೆ ಲಂಡನ್ ನಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪಡೆದಿದ್ದರು. ವಿದೇಶದಿಂದ ವಾಪಸ್ ಆದ ನಂತರ ತಮ್ಮದೇ ಪಕ್ಷವನ್ನು ಸ್ಥಾಪಿಸಿದ್ದಾರೆ. ಪುಷ್ಪಂ ಬಿಹಾರದ ಮಧುಬನಿಯ ಬಿಸ್ಫಿ ಮತ್ತು ಪಾಟ್ನಾದ ಬಂಕಿಪುರ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಶ್ರೇಯಸಿ ಸಿಂಗ್:
ಕಾಮನ್ ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ, ಅರ್ಜುನ ಪ್ರಶಸ್ತಿ ವಿಜೇತೆ ಶ್ರೇಯಸಿ ಸಿಂಗ್, ಜೆಡಿಯು ಮಾಜಿ ಮುಖಂಡ ದಿಗ್ವಿಜಯ್ ಸಿಂಗ್ ಪುತ್ರಿ. ಬಿಹಾರ ರಾಜಕೀಯ ಪಡಸಾಲೆಯಲ್ಲಿ ದಿಗ್ವಿಜಯ್ “ದಾದಾ” ಎಂದೇ ಪರಿಚಿತರಾಗಿದ್ದಾರೆ. ಶ್ರೇಯಸಿ ಬಿಹಾರದ ಜಾಮುಯಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಇದನ್ನೂ ಓದಿ:ನಿತೀಶ್ ತುಂಬಾ ಆಯಾಸಗೊಂಡಿದ್ದಾರೆ, ಇನ್ನು ಬಿಹಾರದ ಆಡಳಿತ ನಡೆಸಲು ಅಸಾಧ್ಯ: ತೇಜಸ್ವಿ
ಕುತೂಹಲಕಾರಿ ವಿಷಯವೆಂದರೆ ಎಲ್ ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಜಾಮುಯಿ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. ಶ್ರೇಯಸಿ ಸಿಂಗ್ ಅವರನ್ನು ಬೆಂಬಲಿಸುವಂತೆ ತನ್ನ ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮತ್ತೊಬ್ಬರು ಈ ಹಿಂದಿನ ಕಳಂಕಿತ ಮಹಿಳಾ ಅಭ್ಯರ್ಥಿ ಮನೋರಮಾ ದೇವಿ. ಪ್ರಸ್ತುತ ಗಯಾ ಜಿಲ್ಲೆಯ ಎಂಎಲ್ ಸಿಯಾಗಿದ್ದಾರೆ. ರಸ್ತೆ ಅಪಘಾತ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈಕೆಯ ಮಗನ ಕಮೆಂಟ್ ನಿಂದಾಗಿ ವಿವಾದಕ್ಕೆ ಕಾರಣವಾಗಿದ್ದು, ನಂತರ ಮನೋರಮಾ ದೇವಿ ಸರ್ಕಾರಿ ಕೆಲಸದಿಂದ ಅಮಾನತುಗೊಂಡಿದ್ದು, ಈ ಬಾರಿ ಬಿಹಾರದ ಗಯಾ ಜಿಲ್ಲೆಯ ಅಟ್ರಿ ಕ್ಷೇತ್ರದ ಜೆಡಿಯು ಅಭ್ಯರ್ಥಿಯಾಗಿದ್ದಾರೆ.
ಬಿಹಾರದ ಬಕ್ಸರ್ ಜಿಲ್ಲೆಯ ದುರ್ಮಾಂವ್ ಕ್ಷೇತ್ರದಿಂದ ಅಂಜುಂ ಅರಾ ಎಂಬ ಮಹಿಳಾ ಅಭ್ಯರ್ಥಿ ಕಣಕ್ಕಿಳಿದಿದ್ದಾರೆ. ಹಾಲಿ ಜೆಡಿಯು ಎಂಎಲ್ ಎ ದಡಾನ್ ಸಿಂಗ್ ಪೆಹಲ್ವಾನ್. ಈತ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದರಿಂದ ಈ ಬಾರಿ ಜೆಡಿಯು ಟಿಕೆಟ್ ನಿರಾಕರಿಸಿದ್ದು, ಈ ಸ್ಥಾನಕ್ಕೆ ಅಂಜುಂ ಅರಾ ಅವರನ್ನು ಜೆಡಿಯು ಗುರುತಿಸಿ ಕಣಕ್ಕಿಳಿಸಿದೆ.