ಪಾಟ್ನಾ: ಅಕ್ರಮ ಸಂಬಂಧವನ್ನು ಹೊಂದಿರುವ ಪತಿಯನ್ನು ಪತ್ನಿಯೊಬ್ಬಳು ಚಪ್ಪಲಿಯಿಂದ ಥಳಿಸಿರುವ ಘಟನೆ ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.
ಪತಿ ಕಚೇರಿಯಲ್ಲಿನ ಮಹಿಳೆಯೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿರುವ ವಿಚಾರವನ್ನು ತಿಳಿದು ಪತ್ನಿ ನೇರವಾಗಿ ಕಚೇರಿಗೆ ಬಂದು ಪತಿಯ ಮೇಲೆ ಚಪ್ಪಲಿಯನ್ನು ಎಸೆದಿದ್ದಾರೆ. ಪತ್ನಿಯ ರೌದ್ರಾವತಾರ ನೋಡಿ ತನ್ನನ್ನು ತಾನು ರಕ್ಷಿಸಲು ಪತಿ ಯತ್ನಿಸಿದ್ದಾರೆ.
ಕುಟುಂಬ ನಿಭಾಯಿಸಲು ಹಾಗೂ ಮಕ್ಕಳನ್ನು ಬೆಳೆಸಲು ಆರ್ಥಿಕವಾಗಿ ನೆರವಾಗಿಲ್ಲ ಎಂದು ಪತ್ನಿ ಆರೋಪಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಮಹಿಳೆಯ ಪತಿ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪತಿ ಕುಟುಂಬ ನಿಭಾಯಿಸಲು ಆರ್ಥಿಕ ಸಹಾಯ ನೀಡಿದ ಕಾರಣ ನಾನು ಕಳೆದ ವರ್ಷದಿಂದ ನಮ್ಮ ಮನೆಯಲ್ಲಿಯೇ ವಾಸಿಸುತ್ತಿದ್ದೇನೆ. ಪತಿ ತನ್ನ ಅಕ್ರಮ ಸಂಬಂಧಕ್ಕಾಗಿ ತನ್ನೆಲ್ಲ ಹಣವನ್ನು ಪೋಲು ಮಾಡುತ್ತಿದ್ದಾನೆ, ತನಗೆ ಮತ್ತು ಮಕ್ಕಳಿಗೆ ಆರ್ಥಿಕ ಬೆಂಬಲವನ್ನು ನೀಡಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ.
ಇದಲ್ಲದೆ ತನ್ನ ತಂದೆ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಮಗಳು ಆರೋಪಿಸಿದ್ದಾರೆ. ಸದ್ಯ ಕಚೇರಿಗೆ ನುಗ್ಗಿ ಪತಿಗೆ ಚಪ್ಪಲಿಯಲ್ಲಿ ಥಳಿಸಿರುವ ಮಹಿಳೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.