Advertisement

Agra; ಬಲವಂತವಾಗಿ ಮದ್ಯ ಕುಡಿಸಿ ಹೋಂಸ್ಟೇಯಲ್ಲಿ ಮಹಿಳೆಗೆ ಸಾಮೂಹಿಕ ಅತ್ಯಾಚಾರ; ಐವರ ಬಂಧನ

12:31 PM Nov 13, 2023 | Team Udayavani |

ಹೊಸದಿಲ್ಲಿ: ಆಗ್ರಾದ ಹೋಂಸ್ಟೇಯಲ್ಲಿ ಮಹಿಳೆಯೊಬ್ಬರಿಗೆ ಬಲವಂತವಾಗಿ ಮದ್ಯ ಸೇವಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ.

Advertisement

ತನ್ನ ಸ್ನೇಹಿತೆ ಮತ್ತು ಇತರ ಕೆಲವರು ತನಗೆ ಬಲವಂತವಾಗಿ ಕುಡಿಯಲು ಒತ್ತಾಯಿಸಿದರು ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದು, ಆಕೆ ಪ್ರತಿಭಟಿಸಲು ಪ್ರಯತ್ನಿಸಿದಾಗ ಕೆಲವು ಪುರುಷರು ಕೊಠಡಿಯೊಳಗೆ ಎಳೆದೊಯ್ದು ಥಳಿಸಿದ್ದಾರೆ. ಆಕೆಯ ತಲೆಯ ಮೇಲೆ ಗಾಜಿನ ಬಾಟಲಿ ಒಡೆಯಲಾಗಿದೆ ಎಂದು ಆಕೆ ಹೇಳಿದ್ದಾಳೆ ಎಂದು ಪಿಟಿಐ ವರದಿ ಮಾಡಿದೆ.

ಈ ಸಂಬಂಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಅತ್ಯಾಚಾರ, ಹಲ್ಲೆ ಮತ್ತು ಇತರ ಸಂಬಂಧಿತ ಸೆಕ್ಷನ್‌ ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪುರುಷರು ಹಾಗೂ ಓರ್ವ ಮಹಿಳೆಯನ್ನು ಬಂಧಿಸಲಾಗಿದೆ.

ಜಿತೇಂದ್ರ ರಾಥೋಡ್, ರವಿ ರಾಥೋಡ್, ಮನೀಶ್ ಕುಮಾರ್ ಮತ್ತು ದೇವಕಿಶೋರ್ ಬಂಧಿತ ಪುರುಷರು. ಅತ್ಯಾಚಾರ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.

ಇದನ್ನೂ ಓದಿ:Fraud: ಸಚಿವ ಪರಮೇಶ್ವರ್‌ ಆಪ್ತ ಎಂದು ಹೇಳಿಕೊಂಡು 4.5 ಲಕ್ಷ ರೂ. ವಂಚನೆ

Advertisement

ಹೋಂಸ್ಟೇಯಲ್ಲಿ ಉದ್ಯೋಗಿಯಾಗಿದ್ದ ಆಕೆ ಒಂದೂವರೆ ವರ್ಷದಿಂದ ಅಲ್ಲೇ ಕೆಲಸ ಮಾಡುತ್ತಿದ್ದಳು. ಈಗ ವೈರಲ್ ಆಗಿರುವ ವೀಡಿಯೊದಲ್ಲಿ ವ್ಯಕ್ತಿಯೊಬ್ಬರು ಕೋಣೆಯೊಳಗೆ ಎಳೆದುಕೊಂಡು ಹೋಗುವಾಗ ಸಹಾಯಕ್ಕಾಗಿ ಮನವಿ ಮಾಡುವುದನ್ನು ತೋರಿಸಿದೆ.

‘ದಯವಿಟ್ಟು ನನಗೆ ಸಹಾಯ ಮಾಡಿ!’, ಎಂದು ಆಕೆ ಹೇಳುತ್ತಿರುವುದು ವೀಡಿಯೊದಲ್ಲಿ ಕೇಳಿಬರುತ್ತಿದೆ, ಒಬ್ಬ ವ್ಯಕ್ತಿ ಅವಳನ್ನು ಕೋಣೆಯೊಳಗೆ ಎಳೆದೊಯ್ದಿದ್ದಾನೆ.

ತನ್ನ ಆಕ್ಷೇಪಾರ್ಹ ವೀಡಿಯೋವನ್ನು ಈ ಹಿಂದೆಯೇ ಮಾಡಲಾಗಿತ್ತು ಎಂಬ ಕಾರಣಕ್ಕೆ ತನಗೆ ಬ್ಲ್ಯಾಕ್‌ ಮೇಲ್ ಮಾಡಲಾಗುತ್ತಿದೆ ಎಂದು ಮಹಿಳೆ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next