Advertisement

WMO: 2025ರಲ್ಲೂ ದಾಖಲೆಯ ತಾಪಮಾನ: 10 ವರ್ಷಗಳಿಂದ ಹೆಚ್ಚುತ್ತಿದೆ ಬಿಸಿಯ ಮಾಪಕ

11:24 PM Dec 31, 2024 | Team Udayavani |

ಹೊಸದಿಲ್ಲಿ: 2024ರಲ್ಲಿ ದಾಖಲಾದ ಅತ್ಯಧಿಕ ತಾಪಮಾನವು 2025ರಲ್ಲೂ ಮುಂದು­ವರಿಯಲಿದ್ದು, ಇಡೀ ಜಗತ್ತು ಬಿಸಿಲಿನ ಬೇಗೆಯಿಂದ ಬಳಲಿದೆ ಎಂದು ವಿಶ್ವ ಹವಾಮಾನ ಸಂಸ್ಥೆ(ಡಬ್ಲ್ಯುಎಂಒ) ಭವಿಷ್ಯ ನುಡಿದಿದೆ.

Advertisement

ಹಸುರುಮನೆ ಅನಿಲದ ಪ್ರಮಾಣವು ದಾಖಲೆ ಮಟ್ಟಕ್ಕೆ ಏರಿಕೆಯಾಗಲಿದ್ದು, ಜಾಗತಿಕ ಸರಾಸರಿ ತಾಪಮಾನದ ಲೆಕ್ಕಾಚಾರದಲ್ಲಿ 2023 ಮತ್ತು 2024ರ ಬಳಿಕ 2025ರಲ್ಲೂ “ಅತ್ಯಧಿಕ ತಾಪದ ವರ್ಷ’ ವಾಗಿ ದಾಖಲೆ ಬರೆಯಲಿದೆ ಎಂದು ಡಬ್ಲ್ಯುಎಂಒ ಹೇಳಿದೆ.

ಈವರೆಗಿನ ಅತ್ಯಧಿಕ ತಾಪದ ವರ್ಷಗಳ ಪಟ್ಟಿಯನ್ನು ನೋಡಿದರೆ ಕಳೆದ 10 ವರ್ಷಗಳೇ ಟಾಪ್‌ 10 ಸ್ಥಾನ ಪಡೆದಿವೆ. ಕೈಗಾರಿಕಪೂರ್ವ ಮಟ್ಟ (1850- 1900) ಕ್ಕಿಂತ ತಾಪವು 1.5 ಡಿ.ಸೆ. ಮೀರಬಾರದು ಎಂದು ಪ್ಯಾರಿಸ್‌ ಒಪ್ಪಂದದಲ್ಲಿ ಮಿತಿ ಹೇರಲಾಗಿದ್ದರೂ, 2024ರಲ್ಲಿ ತಾಪ ಮಾನವು ಅದನ್ನೂ ದಾಟಿದೆ. 2025 ಕೂಡ ಭಾರೀ ಉಷ್ಣತೆಗೆ ಸಾಕ್ಷಿಯಾಗಲಿದ್ದು, ಎಲ್ಲ ದೇಶಗಳೂ ಇಂಗಾಲ ಹೊರಸೂಸುವಿಕೆ ಪ್ರಮಾಣ ತಗ್ಗಿಸದಿದ್ದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಬಹುದು. ಜತೆಗೆ ಹವಾಮಾನ ವೈಪರೀತ್ಯದಿಂದಾಗಿ 2024ರಲ್ಲಿ 3,700 ಮಂದಿ ಮೃತಪಟ್ಟಿದ್ದು, ಲಕ್ಷಾಂತರ ಜನರು ಸಂಕಷ್ಟಕ್ಕೀಡಾಗಿದ್ದಾರೆ ಎಂದೂ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next