ಉದ್ಯೋಗ ಎಂಬುದು ಇಂದು ಎಲ್ಲೆಡೆ ಎಲ್ಲರಿಗೂ ಅನಿವಾರ್ಯ. ಅದಕ್ಕಾಗಿ ಉತ್ತಮ ಶಿಕ್ಷಣ ಪಡೆಯಬೇಕಾಗುತ್ತದೆ. ಅದನ್ನು ಇಂದಿನ ಪೀಳಿಗೆ ಬಯಸುತ್ತಿದೆ ಕೂಡ. ಒಳ್ಳೆ ಶಿಕ್ಷಣ ಸಿಕ್ಕರೆ ಉದ್ಯೋಗ ಸಿಗದೇ ಇರಲು ಸಾಧ್ಯವೇ? ಎಂಬ ಪ್ರಶ್ನೆ ಇಂದಿನ ವಿದ್ಯಾರ್ಥಿಗಳ ಮನದಾಳದಲ್ಲಿ ನಾಟಿದರೆ, ಉತ್ತಮ ಕಲಿಕೆ ಹಾಗೂ ಉಜ್ವಲ ಭವಿಷ್ಯದತ್ತ ಹುಡುಕಾಟ ನಡೆಸುತ್ತಾರೆ. ಇಂದಿನ ಆಧುನಿಕ ಯುಗದಲ್ಲಿ ಅಂತಹ ಉಜ್ವಲ ಭವಿಷ್ಯವುಳ್ಳ ಕ್ಷೇತ್ರವೆಂದರೆ ಆ್ಯನಿಮೇಶನ್ ಮತ್ತು ಮಲ್ಟಿಮೀಡಿಯಾ ಕಲಿಕೆ.
Advertisement
ಇಂತಹ ಆ್ಯನಿಮೇಶನ್ ಮತ್ತು ಮಲ್ಟಿಮೀಡಿಯಾವನ್ನು ಬೋಧಿಸುತ್ತಿರುವ ಅಪರೂಪದ ಹಾಗೂ ಅಪಾರ ಅನುಭವವುಳ್ಳ ಸಂಸ್ಥೆ ವಿಜ್‌ಟೋನ್ ಅಕಾಡೆಮಿ. ಇಲ್ಲಿ ಕಲಿತವರಿಗೆ ಉದ್ಯೋಗ ಖಾತ್ರಿಯಿದೆ. ಇದಕ್ಕಿಂತ ಮುಖ್ಯವಾಗಿ ನುರಿತ ಶಿಕ್ಷಕರಿಂದ ಸಿಗುವ ನೇರ ಶಿಕ್ಷಣ ವಿದ್ಯಾರ್ಥಿಗಳಿಗೆ ಜಾnನವನ್ನು, ಕ್ರಿಯಾಶೀಲತೆಯನ್ನು ಹಾಗೂ ಕ್ಷಿಪ್ರ ಕಲಿಕೆಯನ್ನು ದೊರಕುವಂತೆ ಮಾಡಿದೆ.
Related Articles
Advertisement
ವಿಜ್‌ಟೋನ್ ಅಕಾಡೆಮಿಯಲ್ಲಿ ಪೆನ್ಸಿಲ್ ಹಿಡಿಯುವುದರಿಂದ ಚಿತ್ರ ಬಿಡಿಸುವವರೆಗೆ ಎಲ್ಲವನ್ನೂ ಕಲಿಸಲಾಗುತ್ತದೆ. ಅದರೆ, ಮುಂದೆ ಏನಾಗ ಬಯಸುತ್ತೀರಿ ಎನ್ನುವುದರ ಮೇಲೆ ಕಲಿಕೆ ಇರುತ್ತದೆ. ವಿದ್ಯಾರ್ಥಿಗಳಲ್ಲಿರುವ ಸೃಜನಶೀಲತೆಯನ್ನು ಒರೆಗೆ ಹಚ್ಚಲು ಈ ಕ್ಷೇತ್ರ ಅತ್ಯಂತ ಸೂಕ್ತ ಎನಿಸಿದರೂ, ಪ್ರತಿಭೆ ಯಾವ ರೀತಿಯದ್ದು ಅನ್ನುವುದನ್ನು ಆಧರಿಸಿ ಸೂಕ್ತ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವ ಅವಕಾಶ ಯುವಕ, ಯುವತಿಯರಿಗೆ ಬಿಟ್ಟಿದ್ದು. ಆಯ್ಕೆ ಬಗ್ಗೆಯೂ ವಿಜ್‌ಟೋನ್j ಸಲಹೆ ನೀಡುತ್ತದೆ.
ಆ್ಯನಿಮೇಷನ್, ಮಲ್ಟಿಮೀಡಿಯಾ ಮನರಂಜನಾ ಜಗತ್ತನ್ನು ಆಳುವ ಮಟ್ಟಕ್ಕೆ ಬೆಳೆಯುತ್ತಿದೆ: ಸಿಇಒ ಶ್ರೀಧರ್ ಇಂದು ಆ್ಯನಿಮೇಶನ್ ಹಾಗೂ ಮಲ್ಟಿಮೀಡಿಯಾ ಇಂಡಸ್ಟ್ರಿಯ ಬೆಳವಣಿಗೆ ಅದ್ಭುತವಾಗಿದ್ದು, ಈ ಕ್ಷೇತ್ರದಲ್ಲಿ ಹೇರಳ ಅವಕಾಶಗಳಿವೆ. ಪ್ರತಿಯೊಂದು ಕ್ಷೇತ್ರಕ್ಕೂ ಒಂದಲ್ಲ ಒಂದು ವಿಧದಲ್ಲಿ ಇದರ ಸಂಪರ್ಕ ಇದ್ದೇ ಇರುತ್ತದೆ. ಜಾಗತಿಕ ಹಾಗೂ ರಾಷ್ಟ್ರೀಯ ಆ್ಯನಿಮೇಷನ್ ಮಾರುಕಟ್ಟೆ ಭಾರಿ ಸಂಖ್ಯೆಯಲ್ಲಿ ಆದಾಯ ಗಳಿಸುತ್ತಿದ್ದು ಜಾಗತಿಕವಾಗಿ ಆದಾಯ ಪ್ರಮಾಣ ವರ್ಷದಿಂದ ವರ್ಷ ಹೆಚ್ಚಳವಾಗುತ್ತಿದೆ. ಭಾರತೀಯ ಕಂಪನಿಗಳು ಮುಖ್ಯವಾಗಿ ಡೊಮೆಸ್ಟಿಕ್ ಕ್ಷೇತ್ರದ ಪೂರೈಕೆಗಾಗಿ ಸಾಕಷ್ಟು ಕಾರ್ಯ ನಿರ್ವಹಿಸುತ್ತಿವೆ.
ಪ್ರತಿ ಹಂತದಲ್ಲೂ ಆ್ಯನಿಮೇಷನ್, ಹಾಗೂ ಮಲ್ಟಿಮೀಡಿಯಾ ತಂತ್ರಜಾnನದ ಬಳಕೆಯಾಗುತ್ತಿದ್ದು, ಮನರಂಜನಾ ಜಗತ್ತನ್ನು ಆಳುವ ಮಟ್ಟಕ್ಕೆ ಆ್ಯನಿಮೇಷನ್ ಹಾಗೂ ಮಲ್ಟಿಮೀಡಿಯಾ ಬೆಳೆಯುತ್ತಿದೆ. ಎಳೆಯರಿಂದ ವಯೋವೃದ್ಧರವರೆಗೆ ಎಲ್ಲರ ಮೆಚ್ಚುಗೆ ಗಳಿಸುತ್ತಿರುವ ಈ ಕ್ಷೇತ್ರ ಮನರಂಜನೆ ಮಾತ್ರವಲ್ಲ ಉದ್ಯೋಗದ ಸೃಷ್ಟಿ ಹಾಗೂ ದೃಷ್ಟಿಯಲ್ಲಿ ಸೂಕ್ತ ಆಯ್ಕೆ ಎನಿಸಿದೆ ಎನ್ನುತ್ತಾರೆ ವಿಜ್‌ಟೋನ್j ಅಕಾಡೆಮಿ ಸಂಸ್ಥಾಪಕ ಹಾಗೂ ಸಿಇಒ ಶ್ರೀಧರ್ ವಿ.ಟಿ.
ವಿಜ್‌ಟೋನ್j ಅಕಾಡೆಮಿಯಲ್ಲಿ ಕಲಿತ ಕೆಲವರ ಅಭಿಪ್ರಾಯಗಳು ಹೀಗಿವೆ..
ತರಬೇತಿ ಅವಧಿಯಲ್ಲೇ ಉದ್ಯೋಗಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ನನಗೆ ಆ್ಯನಿಮೇಷನ್ ಕ್ಷೇತ್ರ ಹೊಸದಾಗಿರಲಿಲ್ಲ. ತಂದೆಯ ಜೊತೆ ಜುರಾಸಿಕ್ ಪಾರ್ಕ್ ಚಿತ್ರ ನೋಡಿದ ನಂತರ ನಾನೂ ಒಬ್ಬ ಆ್ಯನಿಮೇಟರ್ ಆಗಬೇಕೆಂಬ ಕನಸು ಕಂಡೆ. ಪಿಯುಸಿಯಲ್ಲಿ ಇದ್ದಾಗ ಬೆಳೆದ ಆಸೆ ಮುಂದೆ ಹೆಮ್ಮರವಾಗಿ ಇಂದು ಬಯಸಿದ ಕ್ಷೇತ್ರದಲ್ಲೇ ಒಳ್ಳೆ ಉದ್ಯೋಗ ಪಡೆದಿದ್ದೇನೆ. ಸಹೃದಯರೊಬ್ಬರ ಸಲಹೆ ಮೇರೆಗೆ ವಿಜ್‌ಟೂನ್jಗೆ ಬಂದು ಆ್ಯನಿಮೇಷನ್ ತರಬೇತಿ ಪಡೆದೆ. ತರಬೇತಿ ಅವಧಿಯಲ್ಲೇ ಉದ್ಯೋಗ ಸಿಕ್ಕಿತು.
-ಅಜಿತ್ ಪಿ. ಬೆಂಗಳೂರು ಕಲಿಕೆಯ ಪ್ರಭಾವ ಸಾಕಷ್ಟು
ಶಿವಮೊಗ್ಗ ಜಿಲ್ಲೆಯ ಹಳ್ಳಿಯೊಂದರಲ್ಲಿ ಹುಟ್ಟಿ ಇಂದು ಈ ಎತ್ತರಕ್ಕೆ ಏರುವಲ್ಲಿ ವಿಜ್‌ಟೋನ್j ಕಲಿಕೆಯ ಪ್ರಭಾವ ಸಾಕಷ್ಟಿದೆ. ಹವ್ಯಾಸಕ್ಕಾಗಿ ಕಲಿತ ಚಿತ್ರಕಲೆ ಇಂದು ಉದ್ಯೋಗ ನೀಡಿದೆ. ಕಲಿಯುವಾಗ ಸಿಕ್ಕ ಉತ್ತಮ ವಾತಾವರಣ ಇಂದು ಈ ಹಂತ ತಲುಪಲು ಸಹಕಾರಿಯಾಗಿದೆ.
-ಪಲ್ಲವಿ, ಶಿವಮೊಗ್ಗ
ವಿಜ್‌ಟೂನ್‌ನಿಂದ ಉದ್ಯೋಗ
ಆ್ಯನಿಮೇಷನ್ ಕೋರ್ಸ್‌ಗಾಗಿ ಬೆಂಗಳೂರಿಗೆ ಬಂದೆ. ಬಂದಾಗ ಎಲ್ಲಿ, ಏನು ಎಂದು ಗೊತ್ತಿರಲಿಲ್ಲ. ಪತ್ರಿಕೆಯಲ್ಲಿ ಜಾಹೀರಾತು ನೋಡಿ ಇಲ್ಲಿಗೆ ಬಂದೆ. ನಿಜಕ್ಕೂ ನನಗೆ ಅಗತ್ಯ ಇದ್ದ ತರಬೇತಿ ಸಿಕ್ಕಿತು. ಇಂದು ಉದ್ಯೋಗ ಕ್ಷೇತ್ರಕ್ಕೆ ಕಾಲಿರಿಸುವ ಅವಕಾಶ ಸಹ ವಿಜ್‌ಟೋನ್jನಿಂದ ಸಿಕ್ಕಿದೆ. ಡ್ರಾಯಿಂಗ್ ಕಲಿಕೆ ತಂದೆಯಿಂದ ಬಳುವಳಿಯಾಗಿ ಲಭಿಸಿತು. ಉದ್ಯೋಗ ವಿಜ್‌ಟೋನ್jನಿಂದ ಲಭಿಸಿದೆ.
-ಅನುದೀಪ್ ಆರ್.ಬಿ. ಪುತ್ತೂರು
ವಿಳಾಸ: ವಿಜ್‌ಟೋನ್j ಆ್ಯನಿಮೇಶನ್ ಅಕಾಡೆಮಿ,
ನಂ.64, 13ನೇ ಕ್ರಾಸ್, 3ನೇ ಹಂತ, ಜೆ.ಪಿ.ನಗರ, ಬೆಂಗಳೂರು-78.
ವೆಬ್‌ಸೈಟ್: www.wiztoonz.com
ಮೊಬೈಲ್: 90198 84884.
– ಗೋಪಾಲ್‌ತಿಮ್ಮಯ್ಯ