Advertisement

ಟಿಕೆಟ್‌ ರಹಿತ ಹಾಗೂ ಮಹಿಳೆಯ ಆಸನದಲ್ಲಿ ಕುಳಿತು ಪ್ರಯಾಣ: 4.54 ಲಕ್ಷ ರೂ. ದಂಡ

01:01 PM May 14, 2022 | Team Udayavani |

ಬೆಂಗಳೂರು: ಪ್ರಯಾಣಿಕರ ಟಿಕೆಟ್‌ ಪಡೆಯದೇ ಪ್ರಯಾಣ ಹಾಗೂ ಮಹಿಳೆಯ ಆಸನದಲ್ಲಿ ಕುಳಿತು ಪ್ರಯಾಣಿಸುವ ಪ್ರಯಾಣಿಕರಿಗೆ ಬಿಸಿ ಮುಟ್ಟಿಸಿರುವ ಬಿಎಂಟಿಸಿಯ ತನಿಖಾ ತಂಡ ವಿಶೇಷ ಕಾರ್ಯಾಚರಣೆ ನಡೆಸಿ 4.54 ಲಕ್ಷ ರೂ. ದಂಡ ವಸೂಲಿ ಮಾಡಿದೆ.

Advertisement

ಏಪ್ರಿಲ್‌ನಲ್ಲಿ ಒಟ್ಟಾರೆ 2828 ಪ್ರಯಾಣಿಕರಿಂದ 4,54,650 ರೂ. ದಂಡ ಸಂಗ್ರಹಿಸಲಾಗಿದೆ. ಟಿಕೆಟ್‌ ರಹಿತ ಪ್ರಯಾಣ ಸಂಬಂಧ 22,395 ಟ್ರಿಪ್‌ಗಳನ್ನು ತಪಾಸಣೆ ನಡೆಸಿ, 2671 ಟಿಕೆಟ್‌ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿ, 4,38,950 ರೂ. ದಂಡ ಸಂಗ್ರಹಿಸಲಾಗಿದೆ.

ಇದನ್ನೂ ಓದಿ:

ಹಾಗೆಯೇ ಮಹಿಳಾ ಪ್ರಯಾಣಿಕರ ಆಸನದಲ್ಲಿ ಕುಳಿತು ಪ್ರಯಾಣಿಸುವ 157 ಪುರುಷ ಪ್ರಯಾಣಿಕರಿಂದ 15,700 ರೂ. ದಂಡ ಸಂಗ್ರಹಿಸಲಾಗಿದೆ ಎಂದು ಬಿಎಂಟಿಸಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next