ಮೋತಿಹಾರ್: “ಒಂದು ವೇಳೆ ಡಾ| ಅಂಬೇಡ್ಕರ್ ಇಲ್ಲದೆ ಇರುತ್ತಿದ್ದರೆ ಜವಾಹರ್ ಲಾಲ್ ನೆಹರೂ ಅವರು ಮೀಸಲಾತಿ ಸೌಲಭ್ಯವನ್ನೇ ನೀಡುತ್ತಿರ ಲಿಲ್ಲ’ ಎಂದು ಪ್ರಧಾನಿ ಮೋದಿ ಗಂಭೀರ ಆರೋಪ ಮಾಡಿದ್ದಾರೆ.
ಮಂಗಳವಾರ ಬಿಹಾರದ ಪೂರ್ವ ಚಂಪಾರಣ್ ಲೋಕಸಭಾ ಕ್ಷೇತ್ರದಲ್ಲಿ ಚುನಾವಣ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, “ದೇಶದ ಅಂದಿನ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ನೆಹರೂ ಬರೆದ ಪತ್ರಗಳಲ್ಲಿ ಈ ವಿಷಯ ಸ್ಪಷ್ಟವಾಗಿದೆ’ ಎಂದು ಆರೋಪಿಸಿದರು.
ಮೀಸಲಾತಿ ಕುರಿತಾದ ಈ ಕೀಳು ಮನಃಸ್ಥಿತಿ ಕಾಂಗ್ರೆಸ್‌ನ ಎಲ್ಲ ಪ್ರಧಾನಿಗಳ ಕಾಲದಲ್ಲೂ ಇತ್ತು. ಇಂದಿರಾ ಗಾಂಧಿಯಾಗಲಿ, ರಾಜೀವ್ ಆಗಲಿ; ಎಲ್ಲರೂ ಮೀಸಲಾತಿಯನ್ನು ವಿರೋಧಿಸಿದವರೇ. ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ವರ್ಗಗಳನ್ನು ಕಾಂಗ್ರೆಸ್ ಎಂದಿಗೂ ಗೌರವಿಸಲೇ ಇಲ್ಲ ಎಂದು ಮೋದಿ ಆರೋ ಪಿ ಸಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಗುತ್ತದೆ ಎಂಬ ವಿಪಕ್ಷಗಳು ಮಾಡುತ್ತಿರುವ ಆರೋಪದ ವಿರುದ್ಧ ಕಿಡಿಕಾರಿದ ಮೋದಿ, “ಸತ್ಯ ಏನೆಂದರೆ ವಂಚಿತ ವರ್ಗಗಳ ಜನರ ಹಿತರಕ್ಷಣೆಯನ್ನು ಬಿಜೆಪಿ ಮಾಡುತ್ತಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮಾತ್ರವೇ ಎಸ್‌ಸಿ, ಎಸ್‌ಟಿ, ಒಬಿಸಿ ಗಳ ಹಕ್ಕನ್ನು ಸಂರಕ್ಷಿಸುತ್ತಿದೆ’ ಎಂದರು.
ಸ್ವಿಸ್ ಬ್ಯಾಂಕುಗಳಲ್ಲಿ ವಿಪಕ್ಷ ನಾಯಕರ ಖಾತೆ: ಐಎನ್‌ಡಿಐಎ ಒಕ್ಕೂಟವು ಕೋಮು, ಜಾತೀಯತೆ ಮತ್ತು ಜನಾಂಗೀಯ ನಿಂದನೆ ಮಾಡುತ್ತಿದೆ ಎಂದು ಆರೋಪಿಸಿದ ಮೋದಿ, ವಿಪಕ್ಷದ ನಾಯಕರು ಸ್ವಿಸ್ ಬ್ಯಾಂಕುಗಳಲ್ಲಿ ಹಣ ಇಡುತ್ತಿದ್ದಾರೆ. ಆದರೆ ಬಡವರ ಕಷ್ಟವನ್ನು ಅರಿತುಕೊಳ್ಳುತ್ತಿಲ್ಲ. ಭಾರತದ ಬಡವರು ಹಸಿವಿನಿಂದ ಸಾಯುತ್ತಿದ್ದರೆ ಅವರು ಸ್ವಿಸ್ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯುತ್ತಿದ್ದಾರೆ ಎಂದು ಮಹಾರಾಜ್‌ಗಂಜ್‌ನಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಆರೋಪಿಸಿದರು.
ಐಎನ್‌ಡಿಐಎಯಿಂದ ಅಭಿವೃದ್ಧಿ ಅಸಾಧ್ಯ
ಭ್ರಷ್ಟಾಚಾರ, ತುಷ್ಟೀಕರಣ ರಾಜಕಾರಣ, ತುಕೆx ತುಕೆx ಗ್ಯಾಂಗ್ ಹೊಂದಿರುವ ಮತ್ತು ಸನಾತನ ಧರ್ಮ ವನ್ನು ವಿರೋಧಿಸುವ ಐಎನ್‌ಡಿಐಎ ಒಕ್ಕೂಟವು ತನ್ನ ಪಾಪಗಳ ಮೂಲಕ ದೇಶವನ್ನು ಮುಂದಕ್ಕೆ ಕೊಂಡೊಯ್ಯ ಲಾರದು. ಕಾಂಗ್ರೆಸ್ ಮಾಡಿದ ತಪ್ಪು ಗಳನ್ನು ಸರಿಪಡಿಸಲು ಹತ್ತು ವರ್ಷ ಗಳು ಬೇಕಾದವು. ಮುಂದಿನ ಅವಧಿಯಲ್ಲಿ ಪ್ರಗತಿಯ ವೇಗ ವನ್ನು ಹೆಚ್ಚಿಸಬೇಕಿದೆ ಎಂದು ಮೋದಿ ಹೇಳಿದರು.