Advertisement

ವಿದ್ಯೆಯೊಂದಿಗೆ ಮೌಲ್ಯಗಳ ಸಂಸ್ಕಾರ ಅಗತ್ಯ

02:32 PM Feb 17, 2017 | |

ಧಾರವಾಡ: ವಿದ್ಯಾರ್ಥಿಗಳು ಕೇವಲ ವಿದ್ಯಾರ್ಜನೆ ಮಾಡಿ ರ್‍ಯಾಂಕ್‌ ಗಳಿಸಿದರೆ ಸಾಲದು. ಗಳಿಸಿದ ವಿದ್ಯೆಗೆ ಭೂಷಣವಾಗಿ ವಿದ್ಯೆಯೊಂದಿಗೆ ಜೀವನ ಮೌಲ್ಯಗಳ ಸಂಸ್ಕಾರವೂ ಅಗತ್ಯವಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ಎನ್‌.ಎಚ್‌. ನಾಗೂರ ಹೇಳಿದರು. 

Advertisement

ಇಲ್ಲಿಯ ವಿದ್ಯಾನಿಧಿ ಶಿಕ್ಷಣ ಸಂಸ್ಥೆಯ ವಸತಿ ಶಾಲೆಯ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಮಕ್ಕಳ ಸಾಂಸ್ಕೃತಿಕ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಸಮಯ ಪ್ರಜ್ಞೆ,  ಶಿಸ್ತು, ಸತ್ಯ-ಶುದ್ಧ ಬದುಕಿನ ಬದ್ಧತೆ, ದೇಶ ಪ್ರೇಮ, ಗುರು-ಹಿರಿಯರಲ್ಲಿ ಗೌರವ ಮುಂತಾದ ಜೀವನ ಮೌಲ್ಯಗಳನ್ನು ನಿರಂತರ ಪಾಲನೆ ಮಾಡಿದಾಗ ಕಲಿತ ವಿದ್ಯೆಗೆ ಗೌರವದ  ಸ್ಥಾನ-ಮಾನಗಳು ಪ್ರಾಪ್ತವಾಗುತ್ತವೆ ಎಂದರು. 

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಎಂ. ಹುಡೇದಮನಿ ಮಾತನಾಡಿ, ಜೀವನದಲ್ಲಿ ಎದುರಾಗುವ ಎಲ್ಲ ಸಮಸ್ಯೆ-ಸವಾಲುಗಳನ್ನು  ಎದುರಿಸಿ ಜಯಶೀಲರಾಗಲು ಮಾನವನಿಗೆ ವಿದ್ಯೆಯ ಬಲ ಅತೀ ಅಗತ್ಯವಾಗಿದೆ. ಮಕ್ಕಳಲ್ಲಿ ಕೇವಲ ಬೌದ್ಧಿಕ ಸಾಮರ್ಥ್ಯ ಬೆಳೆಯಲು ಗಮನಿಸದೇ ಅವರ ದೈಹಿಕ, ಮಾನಸಿಕ ವಿಕಾಸಕ್ಕೂ ವಿದ್ಯಾನಿಧಿ ಸಂಸ್ಥೆಯು ಕಾಳಜಿ ವಹಿಸಿದೆ ಎಂದರು. 

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕಿ ಉಮಾದೇವಿ ಬಸಾಪುರ ಮಾತನಾಡಿ, ಜ್ಞಾನದ ಬಲದಿಂದ ಅಜ್ಞಾನದ ಕೇಡು ಎಂಬ ಶರಣ ವಾಣಿಯನ್ನು ಸದಾ ಸ್ಮರಣೆಯಲ್ಲಿಟ್ಟುಕೊಂಡು ವಿದ್ಯಾರ್ಥಿಗಳಲ್ಲಿ ಜ್ಞಾನದ ಬಲವನ್ನು ತುಂಬುವಲ್ಲಿ ವಿದ್ಯಾನಿಧಿ ಶಿಕ್ಷಣ ಸಂಸ್ಥೆಯು ನಿರಂತರ ಶ್ರಮಿಸುತ್ತಿದೆ ಎಂದರು. ಸಂಸ್ಥೆ ಅಧ್ಯಕ್ಷೆ ಕಮಲಾ ಕೋಣಿ ಅಧ್ಯಕ್ಷತೆ ವಹಿಸಿದ್ದರು.

ಹಿರಿಯ ಪತ್ರಕರ್ತ ಗುರುಮೂರ್ತಿ ಯರಗಂಬಳಿಮಠ, ಪಾಲಕರ ಪ್ರತಿನಿಧಿ ಉಮೇಶ ಉಗಲಾಟ, ಸಂಸ್ಥೆಯ ಸಂಸ್ಥಾಪಕ ಜಗದೀಶ ಕೋಣಿ, ಅಶ್ವಿ‌ನಿ ಹಿರೇಮಠ, ಸುನೀತಾ ಪಾಟೀಲ, ವಿನೋದ ಪಾರ್ಕೆ ಇದ್ದರು. ಮಕ್ಕಳ ಸಾಂಸ್ಕೃತಿಕ ಸಮಾವೇಶದಲ್ಲಿ ಸಮೂಹಗಾನ, ಗುಂಪು ನೃತ್ಯ, ಕೋಲಾಟ, ಭರತನಾಟ್ಯ, ಏಕಪಾತ್ರಾಭಿನಯ, ನಗೆರೂಪಕ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು. 

Advertisement
Advertisement

Udayavani is now on Telegram. Click here to join our channel and stay updated with the latest news.

Next