Advertisement

ಉತ್ತಮ ವ್ಯಕ್ತಿತ್ವದೊಂದಿಗೆ ಅಭಿವೃದ್ಧಿಪರ ಚಿಂತನೆ ಹರಿಸಿ: ಗಣಪತಿ ಭಟ್

02:17 PM Mar 31, 2017 | Team Udayavani |

ಮಡಿಕೇರಿ: ವಿದ್ಯಾರ್ಥಿಗಳು ಸ್ವತಂತ್ರ ವ್ಯಕ್ತಿತ್ವ ಬೆಳೆಸಿಕೊಳ್ಳುವ ಮೂಲಕ ಅಭಿವೃದ್ಧಿಪರ ಚಿಂತನೆ ಹರಿಸಬೇಕು. ಆ ಮೂಲಕ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಯಾಗಿ, ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಬೇಕು ಎಂದು ಆಲೂರು ಸಿದ್ದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕರಾದ ಜಿ.ಟಿ.ಗಣಪತಿ ಭಟ್‌ ಕರೆ ನೀಡಿದ್ದಾರೆ. 
 
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ವಾರ್ಷಿಕೊತ್ಸವ ಸಮಾರಂಭ ಮತ್ತು ದಶ ಸಂಗಮ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

Advertisement

ಶಿಕ್ಷಣವೆಂಬುವುದು ದೇವಾಲಯದಂತೆ, ವ್ಯಕ್ತಿತ್ವ ದೊಡ್ಡದಿದ್ದಾಗ ಕಲ್ಲಿನಲ್ಲೂ ದೇವರನ್ನು ಕಾಣಬಹುದು.  ಶಿಕ್ಷಣದಿಂದ ವ್ಯಕ್ತಿತ್ವ ಅಭಿವೃದ್ದಿ ಸಾಧ್ಯ. ದೋಷವೆಂಬುವುದು ನಮ್ಮ ಅಂತರಾಳದಲ್ಲಿಯೇ ಇರುತ್ತದೆ. ಅದನ್ನು ಸರಿಪಡಿಸಿಕೊಂಡು ಮುಂದೆ ಸಾಗಬೇಕಾಗುತ್ತದೆ. ಜೀವನದಲ್ಲಿ ಬದ್ಧತೆ, ನೈತಿಕತೆ, ಶ್ರಮ, ತಾಳ್ಮೆ ಜೊತೆಗೆ ಸಾಮಾನ್ಯ ಜ್ಞಾನವಿದ್ದಾಗ ಎಂತಹ ಕಠಿನ ಪರಿಸ್ಥಿತಿಯಲ್ಲೂ ಜಯ ಗಳಿಸಬಹುದು ಎಂದರು. ಬದುಕಿನ ಯಾವುದೇ ಪರಿಸ್ಥಿತಿಯಲ್ಲಿ ಎಲ್ಲಿಯೂ ಎದೆಗುಂದದೇ ಮುಂದೆ ಸಾಗಬೇಕು. ಯಶಸ್ಸಿಗಾಗಿ ಸದಾ ಪ್ರಯತ್ನಪಡಬೇಕು ಎಂದು ಜಿ.ಟಿ.ಗಣಪತಿ ಭಟ್‌ ತಿಳಿಸಿದರು. 
 
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಚಿತ್ರಾ ವೈ, ನಗರದ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ದಯಾನಂದ ಇತರರು ಹಾಜರಿದ್ದರು.     

ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಅಂತಿಮ ಬಿ.ಬಿ.ಎಂ. ವಿದ್ಯಾರ್ಥಿನಿ ಶ್ವೇತಾ ಸಹಕರಿಸಿದರು. ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಕುಸುಮಾ ಸ್ವಾಗತಿಸಿದರು. ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶಶಿಧರ್‌ ಅವರು ವರದಿ ವಾಚನ ಮಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next