Advertisement

ಗೋವಾ ಸರಕಾರ ರಚನೆಗೆ ಕಾಂಗ್ರೆಸ್‌ ಯತ್ನ

07:06 AM Sep 18, 2018 | Team Udayavani |

ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ ಪಾರೀಕರ್‌ (62)  ಹೊಸದಿಲ್ಲಿಯ ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌ ) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಂತೆಯೇ, ಗೋವಾ ಕಾಂಗ್ರೆಸ್‌ ಸರಕಾರ ರಚನೆಯ ಹಕ್ಕು ಮಂಡಿಸಿದೆ. ಪ್ರತಿಪಕ್ಷ ನಾಯಕ ಚಂದ್ರಕಾಂತ ಕವೆಲೇಕರ್‌ ನೇತೃತ್ವದ ನಿಯೋಗ ಸೋಮವಾರ ರಾಜಭವನಕ್ಕೆ ತೆರಳಿ ಮನವಿ ಸಲ್ಲಿಸಿದೆ. ಇನ್ನೊಂದೆಡೆ ತ್ರಿಸದಸ್ಯ ಬಿಜೆಪಿ ನಿಯೋಗ ಗೋವಾ ಸರಕಾರ ಭದ್ರವಾಗಿದೆ ಎಂದು ಹೇಳಿದೆ.

Advertisement

ಕಾಂಗ್ರೆಸ್‌ ನಿಯೋಗವು ರಾಜಭವನಕ್ಕೆ ತೆರಳಿ ಮನವಿ ಸಲ್ಲಿಸಿದೆ. ವಿಧಾನಸಭೆಯಲ್ಲಿರುವ ಎಲ್ಲ 16 ಶಾಸಕರು ಇದಕ್ಕೆ ಸಹಿ ಮಾಡಿದ್ದಾರೆ. ಬಿಜೆಪಿ ನೇತೃತ್ವದ ಮೈತ್ರಿಕೂಟ ಸರಕಾರ ಅಭದ್ರವಾದರೆ ವಿಧಾನಸಭೆ ವಿಸರ್ಜನೆ ಬೇಡ. ಕಾಂಗ್ರೆಸ್‌ಗೆ ಸರಕಾರ ರಚನೆಗೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದ್ದಾರೆ. ಜತೆಗೆ, ಮಂಗಳವಾರ ಮತ್ತೆ ರಾಜ್ಯಪಾಲರನ್ನು ಸಂಪರ್ಕಿಸುವುದಾಗಿ ಕವೆÉàಕರ್‌ ಹೇಳಿದ್ದಾರೆ. ರಾಜ್ಯಪಾಲೆ ಮೃದುಲಾ ಸಿನ್ಹ ಸದ್ಯ ಪ್ರವಾಸದಲ್ಲಿರುವುದರಿಂದ ನಿಯೋಗಕ್ಕೆ ಅವರ ಭೇಟಿ ಸಾಧ್ಯವಾಗಿಲ್ಲ.

“ಬಿಜೆಪಿ ಗೋವಾದಲ್ಲಿ ರಾಜ್ಯಪಾಲರ ಆಡಳಿತ ಹೇರಲು ಬಯಸುತ್ತಿದೆ. ಅದಕ್ಕೆ ನಾವು ಅವಕಾಶ ನೀಡುವುದಿಲ್ಲ. ಸದ್ಯ ರಾಜ್ಯದಲ್ಲಿ ಸರಕಾರವೇ ಇಲ್ಲ. ವಿಧಾನಸಭೆಯಲ್ಲಿ ನಮ್ಮದೇ ಅತ್ಯಂತ ದೊಡ್ಡ ಪಕ್ಷ. ಹೀಗಾಗಿ ಸರಕಾರ ರಚನೆಗೆ ಹಕ್ಕು ಮಂಡಿಸುವುದು ನಮ್ಮ ಹಕ್ಕು’ ಎಂದು ಕಾಂಗ್ರೆಸ್‌ ಶಾಸಕ ಲೂಸಿನೋ ಫೆಲಿರೋ ಹೇಳಿದ್ದಾರೆ. 

ಸರಕಾರ ಭದ್ರವಾಗಿದೆ: ಇದೇ ವೇಳೆ ಬಿಜೆಪಿ ವರಿಷ್ಠರಿಂದ ಪ್ರೇಷಿತಗೊಂಡ ಬಿ.ಎಲ್‌.ಸಂತೋಷ್‌, ರಾಮ್‌ ಲಾಲ್‌ ಮತ್ತು ವಿನಯ ಪುರಾಣಿಕ್‌ ನೇತೃತ್ವದ ಸಮಿತಿ ಗೋವಾ ಬಿಜೆಪಿ ನಾಯಕರ ಜತೆಗೆ ಸಮಾಲೋಚನೆ ನಡೆಸಿದೆ. ಬಳಿಕ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್‌ ಲಾಲ್‌, “ರಾಜ್ಯ ಸರಕಾರ ಭದ್ರವಾಗಿದೆ’ ಎಂದು ಹೇಳಿದ್ದಾರೆ. ಈ ನಡುವೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹಾಗೂ ಪಕ್ಷದ ಇತರೆ ಕೆಲವು ನಾಯಕರು ಸೋಮವಾರ ಏಮ್ಸ್‌ಗೆ ಭೇಟಿ ನೀಡಿ ಪಾರೀಕರ್‌ ಆರೋಗ್ಯ ವಿಚಾರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next