Advertisement

ಉನ್ನತಮಟ್ಟದ ಅಧಿಕಾರಿಗಳೊಂದಿಗೆ ಇಂದು ಸಭೆ

03:45 AM Feb 13, 2017 | Team Udayavani |

ಬೆಂಗಳೂರು: ಕೇಂದ್ರ ಬರ ಅಧ್ಯಯನ ತಂಡದ ಸದಸ್ಯರು ಭಾನುವಾರ ಕೊಪ್ಪಳ, ಚಿಕ್ಕಮಗಳೂರು, ಧಾರವಾಡ, ಹಾವೇರಿ ಜಿಲ್ಲೆಯ ವಿವಿಧೆಡೆ ಮೂರು ತಂಡಗಳಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಬನ್ನಿಕೊಪ್ಪ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಬರ ಅಧ್ಯಯನ ತಂಡದ ಮುಖ್ಯಸ್ಥ ಡಾ|ಕೆ.ಪೊನ್ನಸ್ವಾಮಿ, ಕೇಂದ್ರಕ್ಕೆ ಬರ ಅಧ್ಯಯನ ವರದಿ ಶೀಘ್ರ ಸಲ್ಲಿಸಲಾಗುವುದು. ಕಳೆದ 16
ವರ್ಷದಲ್ಲಿ 10 ವರ್ಷ ಬರ ಪರಿಸ್ಥಿತಿಯನ್ನು ಕೊಪ್ಪಳ ಜಿಲ್ಲೆ ಎದುರಿಸುತ್ತಿದೆ ಎಂದು ಅಧಿಧಿಕಾರಿಗಳು ಮಾಹಿತಿ ನೀಡಿದ್ದಾರೆ. ಫೆ.13ರಂದು ಬೆಂಗಳೂರಿನಲ್ಲಿ ಉನ್ನತ ಮಟ್ಟದ ಅಧಿಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದರು.

ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಎಸ್‌.ಬಿ.ತಿವಾರಿ, ಕೇಂದ್ರ ಇಂಧನ ಇಲಾಖೆ ಉಪನಿರ್ದೇಶಕ ಕಮಲ್‌ ಚವ್ಹಾಣ ಹಾಗೂ ಸಲೀಂ ಹೈದರ್‌ ಅವರನ್ನೊಳಗೊಂಡ ಕೇಂದ್ರ ಬರ ಅಧ್ಯಯನ ತಂಡ ಹುಬ್ಬಳ್ಳಿ, ನವಲಗುಂದ ಹಾಗೂ ಕುಂದಗೋಳ ತಾಲೂಕಿನ ಕೆಲ ಗ್ರಾಮಗಳಿಗೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿ ಮಾಹಿತಿ ಪಡೆಯಿತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಲೀಂ ಹೈದರ್‌, ಧಾರವಾಡ ಜಿಲ್ಲೆಯಲ್ಲಿ ಭೀಕರ ಬರ ಸ್ಥಿತಿಯಿದ್ದು, ಈ ಕುರಿತು ವಾರದಲ್ಲಿ ವರದಿ ನೀಡಲಾಗುವುದು. ನೀರಿನ ಸಮಸ್ಯೆ ಹೆಚ್ಚಾಗಿದೆ. ಬರದ ಸ್ಥಿತಿ ಅವಲೋಕಿಸಿ ವರದಿ ನೀಡಲಾಗುವುದು ಎಂದರು.

ಕೈ-ಬಾಯಿ ಸನ್ನೆ ಮೂಲಕವೇ ಬರ ದರ್ಶನ
ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಬನ್ನಿಕೊಪ್ಪ ರೈತ ಚನ್ನಪ್ಪ ಗೊಂಡಬಾಳ ಅವರ ಜಮೀನಿಗೆ ಭೇಟಿ ನೀಡಿದ ಕೇಂದ್ರ ತಂಡಕ್ಕೆ ರೈತರೊಂದಿಗೆ ಮಾತನಾಡಲು ಭಾಷೆ ಸಮಸ್ಯೆ ಅಡ್ಡಿಯಾಯಿತು. ಈ ಹಿನ್ನೆಲೆಯಲ್ಲಿ ಜಂಟಿ ಕೃಷಿ ನಿರ್ದೇಶಕರು, ಜಿಲ್ಲಾಧಿಕಾರಿ ಸೇರಿ ಇತರೆ ಅಧಿಕಾರಿಗಳಿಂದಲೇ ಕೇಂದ್ರ ತಂಡ ಬೆಳೆಹಾನಿ ಮಾಹಿತಿ ಪಡೆಯಿತು. ರೈತರು ತಮ್ಮ ಕೈಯಲ್ಲಿ ಒಣಗಿದ ಬೆಳೆ ಹಿಡಿದು, ಇಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು ತಂಡಕ್ಕೆ ಕೈ-ಬಾಯಿ ಸನ್ನೆ ಮೂಲಕವೇ ಬರದ ಭೀಕರತೆ ದರ್ಶನ ಮಾಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next