Advertisement

Lausanne Diamond League Trophy: ನೀರಜ್‌ ಮೇಲೆ ದೊಡ್ಡ ನಿರೀಕ್ಷೆ

10:04 AM Aug 22, 2024 | Team Udayavani |

ಲಾಸೆನ್‌ (ಸ್ವಿಜರ್ಲೆಂಡ್‌): ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ನೀರಜ್‌ ಚೋಪ್ರಾ, ಗುರುವಾರ ಲಾಸೆನ್‌ ಡೈಮಂಡ್‌ ಲೀಗ್‌ನಲ್ಲಿ ಸ್ಪರ್ಧೆಗೆ ಇಳಿಯಲಿದ್ದಾರೆ. ಸಹಜವಾಗಿಯೇ ಭಾರತದ ಸ್ಟಾರ್‌ ಜಾವೆಲಿನ್‌ ಎಸೆತಗಾರನ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿದೆ. ಮುಂದಿನ ತಿಂಗಳ ಡೈಮಂಡ್‌ ಲೀಗ್‌ ಫೈನಲ್‌ನಲ್ಲಿ ಟ್ರೋಫಿಯನ್ನು ಮರಳಿ ಗಳಿಸಲು ಲಾಸೆನ್‌ ಡೈಮಂಡ್‌ ಲೀಗ್‌ ನೀರಜ್‌ ಪಾಲಿಗೊಂದು ವೇದಿಕೆಯಾಗಲಿದೆ.

Advertisement

ಪ್ಯಾರಿಸ್‌ ಒಲಿಂಪಿಕ್ಸ್‌ ವೇಳೆ ತೊಡೆಯ ನೋವಿಗೆ ಸಿಲುಕಿದ್ದ ನೀರಜ್‌ ಚೋಪ್ರಾ, ಆ. 8ರ ಫೈನಲ್‌ನಲ್ಲಿ 89.45 ಮೀ. ದೂರದ ಸಾಧನೆಯೊಂದಿಗೆ ಬೆಳ್ಳಿ ಪದಕವನ್ನು ತಮ್ಮ ದಾಗಿಸಿ ಕೊಂಡಿದ್ದರು. ಟೋಕಿಯೊ ದಲ್ಲಿ ಗೆದ್ದ ಚಿನ್ನವನ್ನು ಉಳಿಸಿಕೊಳ್ಳಲು ಸಾಧ್ಯ ವಾಗಿರಲಿಲ್ಲ. ಇದೀಗ ಡೈಮಂಡ್‌ ಲೀಗ್‌ ಟ್ರೋಫಿಯನ್ನು ಮರಳಿ ತಮ್ಮದಾಗಿಸಿಕೊಳ್ಳುವ ಯೋಜನೆ ಯಲ್ಲಿದ್ದಾರೆ.

ಕಳೆದ ಸಲ ದ್ವಿತೀಯ ಸ್ಥಾನ
ನೀರಜ್‌ ಚೋಪ್ರಾ 2022ರ ಡೈಮಂಡ್‌ ಲೀಗ್‌ನಲ್ಲಿ ಚಾಂಪಿಯನ್‌ ಆಗಿದ್ದರು. ಆದರೆ ಕಳೆದ ವರ್ಷ ಯೂಜಿನ್‌ ಡೈಮಂಡ್‌ ಲೀಗ್‌ ಫೈನಲ್‌ನಲ್ಲಿ ದ್ವಿತೀಯ ಸ್ಥಾನಿಯಾದರು. ಇಲ್ಲಿ ಜೆಕ್‌ ಗಣರಾಜ್ಯದ ಜಾಕುಬ್‌ ವಾದೆÉಶ್‌ ಚಾಂಪಿಯನ್‌ ಆಗಿ ಮೂಡಿಬಂದಿದ್ದರು.

ಈ ಬಾರಿಯ ಡೈಮಂಡ್‌ ಲೀಗ್‌ ಫೈನಲ್‌ ಸೆ. 14ರಂದು ಬ್ರುಸೆಲ್ಸ್‌ನಲ್ಲಿ ನಡೆಯಲಿದೆ. ಇಲ್ಲಿ ಪಾಲ್ಗೊಳ್ಳುವ ಅರ್ಹತೆ ಲಭಿಸಬೇಕಾದರೆ, ಡೈಮಂಡ್‌ ಲೀಗ್‌ ಸರಣಿಯ ಅಗ್ರ ಆರರಲ್ಲಿ ಸ್ಥಾನ ಸಂಪಾದಿಸಬೇಕಿದೆ. ಸೆ. 5ರಂದು ಜ್ಯೂರಿಚ್‌ನಲ್ಲಿ ಮತ್ತೂಂದು ಡೈಮಂಡ್‌ ಲೀಗ್‌ ಸ್ಪರ್ಧೆ ನಡೆಯಲಿದೆ.

ಪಾಕಿಸ್ಥಾನದ ಚಾಂಪಿಯನ್‌ ತ್ರೋವರ್‌ ಅರ್ಶದ್‌ ನದೀಮ್‌ ಹೊರತುಪಡಿಸಿ, ಪ್ಯಾರಿಸ್‌ ಒಲಿಂಪಿಕ್ಸ್‌ ಫೈನಲ್‌ನಲ್ಲಿದ್ದ ಅಗ್ರ 6 ಜಾವೆಲಿನ್‌ ಎಸೆತಗಾರರಲ್ಲಿ ಐವರು ಲಾಸೆನ್‌ ಡೈಮಂಡ್‌ ಲೀಗ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ.

Advertisement

ಗಾಯ ಉಲ್ಬಣಗೊಂಡಿಲ್ಲ
ಸದ್ಯ ನೀರಜ್‌ ಚೋಪ್ರಾ 7 ಅಂಕ ಗಳೊಂ ದಿಗೆ 4ನೇ ಸ್ಥಾನದಲ್ಲಿದ್ದಾರೆ. “ಡೈಮಂಡ್‌ ಲೀಗ್‌ ತರಬೇತಿಗೆಂದೇ ನಾನು ಸ್ವಿಜರ್ಲೆಂಡ್‌ಗೆ ಬಂದಿದ್ದೆ. ಗಾಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದರಿಂದ ಇದು ಉಲ್ಬಣಗೊಳ್ಳಲಿಲ್ಲ.’ ಎಂದರು.

ಇದನ್ನೂ ಓದಿ: ವಿದ್ಯಾರ್ಥಿನಿ ಅಸ್ವಸ್ಥ… ಬಸ್ಸನ್ನೇ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಿದ ಚಾಲಕ

Advertisement

Udayavani is now on Telegram. Click here to join our channel and stay updated with the latest news.

Next