Advertisement

Hindu rashtra; 82% ಹಿಂದೂಗಳಿರುವ ಭಾರತ ಈಗಾಗಲೇ ಹಿಂದೂ ರಾಷ್ಟ್ರವಾಗಿದೆ: ಕಮಲ್ ನಾಥ್

03:29 PM Aug 08, 2023 | Team Udayavani |

ಭೋಪಾಲ್: ಕಾಂಗ್ರೆಸ್ ಸಂಸದ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರು ಮಂಗಳವಾರ, ರಾಷ್ಟ್ರದ 82% ಜನರು ಹಿಂದೂಗಳಾಗಿರುವುದರಿಂದ ಭಾರತವು ಈಗಾಗಲೇ ಹಿಂದೂ ರಾಷ್ಟ್ರವಾಗಿದೆ ಎಂದು ಹೇಳಿದ್ದಾರೆ.

Advertisement

ಸ್ವಯಂ-ಘೋಷಿತ ದೇವಮಾನವ ಧೀರೇಂದ್ರ ಶಾಸ್ತ್ರಿ ಅವರ ಹಿಂದೂ ರಾಷ್ಟ್ರದ ಬೇಡಿಕೆಗಳನ್ನು ಉಲ್ಲೇಖಿಸುವಾಗ ಕಮಲ್ ನಾಥ್ ಈ ರೀತಿ ಹೇಳಿದರು. ಈ ವಿಷಯದ ಬಗ್ಗೆ ಯಾವುದೇ ಚರ್ಚೆಯೇ ಅಗತ್ಯವಿಲ್ಲ, ಏಕೆಂದರೆ ಇದು ದತ್ತಾಂಶದಿಂದ ಬೆಂಬಲಿತವಾಗಿದೆ ಎಂದರು.

“ನಮ್ಮ ದೇಶದಲ್ಲಿ ಶೇಕಡಾ 82 ರಷ್ಟು ಹಿಂದೂಗಳು ಇದ್ದಾರೆ ಎಂದು ಡೇಟಾ ತೋರಿಸುತ್ತದೆ. ಹೀಗಾಗಿ ನಮ್ಮದು ಹಿಂದೂ ರಾಷ್ಟ್ರವೇ ಎನ್ನುವ ಬಗ್ಗೆ ಇಲ್ಲಿ ಯಾವುದೇ ಚರ್ಚೆ ಬರುವುದಿಲ್ಲ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥರು ಹೇಳಿದ್ದಾರೆ.

ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕರೊಬ್ಬರು ಸಂಸದ ನಕುಲ್ ಕಮಲ್ ನಾಥ್ ಅವರ ವಿರುದ್ಧ ವಾಗ್ದಾಳಿ ನಡೆಸಿದ ಒಂದು ದಿನದ ನಂತರ ಕಮ್ ನಾಥ್ ಅವರ ಈ ಹೇಳಿಕೆ ಹೊರಬಿದ್ದಿದೆ.

ಇದನ್ನೂ ಓದಿ:ನನ್‌ ಕಾಸು ನನ್‌ ಕನಸು; ಸಂಜು ವೆಡ್ಸ್‌ ಗೀತಾ-2ಗೆ ನಾಗಶೇಖರ್‌ ರೆಡಿ

Advertisement

ಆರ್‌ಜೆಡಿ ಮತ್ತು ಕಾಂಗ್ರೆಸ್‌ ಎರಡೂ ವಿಪಕ್ಷಗಳ ಮೈತ್ರಿ ಇಂಡಿಯಾದ ಭಾಗವಾಗಿವೆ. ಈ ಟೀಕೆಯು ಹೊಸದಾಗಿ ರೂಪುಗೊಂಡ ವಿರೋಧ ಪಕ್ಷದ ಮೈತ್ರಿಯೊಳಗಿನ ಆಂತರಿಕ ಘರ್ಷಣೆಗಳ ಊಹಾಪೋಹವನ್ನು ಹೆಚ್ಚಿಸಿತು.

ಧೀರೇಂದ್ರ ಶಾಸ್ತ್ರಿ ಅವರಿಗೆ ಚಿಂದ್ವಾರದಲ್ಲಿ ಆತಿಥ್ಯ ನೀಡಿದ್ದಕ್ಕಾಗಿ ಕಾಂಗ್ರೆಸ್ ಸಂಸದ ನಕುಲ್ ಕಮಲ್ ನಾಥ್ ಅವರನ್ನು ಆರ್‌ಜೆಡಿ ಹಿರಿಯ ನಾಯಕ ಶಿವಾನಂದ್ ತಿವಾರಿ ಟೀಕಿಸಿದ್ದರು. ಬಾಗೇಶ್ವರ ಧಾಮದ ಮುಖ್ಯಸ್ಥರು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಬಹಿರಂಗವಾಗಿ ಪ್ರತಿಪಾದಿಸಿದ್ದಾರೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next