Advertisement

ಒಂದೇ ದಿನ 3,500 ಹೊಸ ಪ್ರಕರಣ: ಭಾರತದಲ್ಲಿ 74ಸಾವಿರ ದಾಟಿದ ಕೋವಿಡ್ 19 ಸೋಂಕಿತರ ಸಂಖ್ಯೆ

08:37 AM May 14, 2020 | Mithun PG |

ನವದೆಹಲಿ: ಕಳೆದ 24 ಗಂಟೆಗಳ ಅವಧಿಯಲ್ಲಿ ಭಾರತದಲ್ಲಿ 3,500 ಕೋವಿಡ್-19 ಹೊಸ ಪ್ರಕರಣಗಳು ದಾಖಲಾಗಿದ್ದು ಒಟ್ಟಾರೆ ವೈರಾಣು ಪೀಡಿತರ ಸಂಖ್ಯೆ 74,281ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯದ ವರದಿ ತಿಳಿಸಿದೆ.

Advertisement

ಭಾರತದಲ್ಲಿ ಲಾಕ್ ಡೌನ್ ಜಾರಿಯಾಗಿ 50 ದಿನ ಕಳೆದಿದ್ದು ಸುಮಾರು 47,480 ಸಕ್ರಿಯ ಸೋಂಕಿತ ಪ್ರಕರಣಗಳಿದ್ದು, 24,385 ಜನರು ಗುಣಮುಖರಾಗಿದ್ದಾರೆ. ಸಾವಿನ ಪ್ರಮಾಣವೂ ಕೂಡ 2,415ಕ್ಕೆ ಜಿಗಿದಿದೆ ಎಂದು ಮಾಹಿತಿ ತಿಳಿಸಿದೆ.

ಗಮನಾರ್ಹ ಸಂಗತಿಯೆಂದರೇ ಇತರ ದೇಶಗಳಿಗಿಂತ ಭಾರತದಲ್ಲಿ ಗುಣಮುಖರಾಗುವವರ ಸಂಖ್ಯೆ 32.82% ರಷ್ಟು ಹೆಚ್ಚಿದೆ ಎಂದು ವರದಿ ತಿಳಿಸಿದೆ.

ಮಂಗಳವಾರ ರಾತ್ರಿ ದೂರದರ್ಶನದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ,  ಮುಂದಕ್ಕೆ ಬರುವ 4ನೇ ಹಂತದ ಲಾಕ್‌ಡೌನ್‌ ಹೊಸ ವಿಚಾರಗಳೊಂದಿಗೆ, ಹೊಸ ನಿಯಮಗಳೊಂದಿಗೆ ಅನುಷ್ಠಾನಗೊಳ್ಳಲಿದೆ ಎಂದಿದ್ದಾರೆ.

ಭಾರತದಲ್ಲಿ ಕೋವಿಡ್ -19 ಸೋಂಕು ಪತ್ತೆ ಪರೀಕ್ಷೆ ಕೂಡ ದ್ವಿಗುಣಗೊಂಡಿದ್ದು, ದಿನವೊಂದಕ್ಕೆ 1,00,000 ಜನರಿಗೆ ಪರೀಕ್ಷೆ ಮಾಡಲಾಗುತ್ತಿದೆ.   ಸರಿಸುಮಾರು 347 ಸರ್ಕಾರಿ ಲ್ಯಾಬ್ ಗಳು ಮತ್ತು 137 ಖಾಸಗಿ  ಲ್ಯಾಬ್ ಗಳು ಕಾರ್ಯನಿರ್ವಹಿಸುತ್ತಿದ್ದು,  ಈಗಾಗಲೇ 17,62,840 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

Advertisement

ಜಗತ್ತಿನಾದ್ಯಂತ ಕೋವಿಡ್ ಮಹಾಮಾರಿಗೆ 2.92,893 ಜನರು ಮೃತರಾಗಿದ್ದು, 43,42,734 ಜನರು ಸೋಂಕಿನಿಂದ ಬಳುತ್ತಿದ್ದಾರೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next