Advertisement

Congress;ಅದೃಷ್ಟವಿದ್ದರೆ ಸಿಎಂ ಆಗುವ ಆಸೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್

05:35 PM Nov 03, 2023 | Team Udayavani |

ಬೆಂಗಳೂರು: ‘ಐದು ವರ್ಷಗಳ ಅವಧಿಗೆ ಕರ್ನಾಟಕ ಮುಖ್ಯಮಂತ್ರಿಯಾಗಿ ಪೂರ್ಣಾವಧಿಯಲ್ಲಿ ಮುಂದುವರಿಯುತ್ತೇನೆ’ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದ ಮರುದಿನವೇ ನಾಯಕತ್ವದ ಮಧ್ಯಂತರ ಬದಲಾವಣೆಯ ಮಾತುಗಳನ್ನು ತಳ್ಳಿಹಾಕಿರುವ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಶುಕ್ರವಾರ ಉನ್ನತ ಹುದ್ದೆಯನ್ನು ಅಲಂಕರಿಸುವ ಬಯಕೆಯನ್ನು ರಹಸ್ಯವಾಗಿಡದೇ ”ಅದೃಷ್ಟವಿದ್ದರೆ ಸಿಎಂ ಆಗುವ ಆಸೆ ಇದೆ” ಎಂದು ಹೇಳಿದ್ದಾರೆ.

Advertisement

ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ‘ಮುಂದೊಂದು ದಿನ ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ನೋಡುವ ಇಚ್ಛೆ ಇದೆ’ ಎನ್ನುವ ಹೇಳಿಕೆ ಕುರಿತು ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದರು.

”ರಾಜಣ್ಣ ಅವರಿಗೆ ನಾನು ಆಭಾರಿಯಾಗಿದ್ದೇನೆ. ನನಗೂ ಆ ಭಾಗ್ಯ ಸಿಗಲಿ ಎಂದು ಆಶಿಸುತ್ತೇನೆ. ಆದರೆ ಯಾವಾಗ ಆಗಬಹುದೋ ಗೊತ್ತಿಲ್ಲ” ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ, ಮಾಜಿ ಡಿಸಿಎಂ 72ರ ಹರೆಯದ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ತುಮಕೂರು ಜಿಲ್ಲೆಯ ಒಬ್ಬರು ಮುಖ್ಯಮಂತ್ರಿಯಾದರೆ ಜಿಲ್ಲೆಯ ಜನರಿಗೆ ಸಂತೋಷವಾಗುತ್ತದೆ ಎಂದು ಹೇಳಿದ ರಾಜಣ್ಣ,ಪರಮೇಶ್ವರ ಅವರಾದರೆ ನಮಗೆಲ್ಲ ಮುಖ್ಯಮಂತ್ರಿಯಾದ ಭಾವನೆ ಬರುತ್ತದೆ ಎಂದು ಹೇಳಿಕೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next