Advertisement
ಇಂದಿನ ಬ್ಯುಸಿ ಟೈಮ್‌ನಲ್ಲಿ ಕಿಸೆಯಲ್ಲಿದ್ದ ಮೊಬೈಲ್‌ಫೋನ್ ತೆಗೆದು ಕಾಲ್ ರಿಸೀವ್ ಮಾಡಲು ಸಮಯವಿಲ್ಲ. ಹೀಗಿರುವಾಗ ಕಿವಿಯಲ್ಲೊಂದು ಬ್ಲೂಟೂಥ್ ಹೆಡ್‌ಸೆಟ್ ಇದ್ದರೆ ಹೇಗೆ ಎಂದು ಯೋಚನೆ ಮಾಡೋರೆ ಹೆಚ್ಚು. 3.5 ಎಂ.ಎಂ. ಆಡಿಯೋ ಜಾಕ್ ಹೊಂದಿರುವ ವೈರ್‌ಗಳಿರುವ ಇಯರ್‌ಫೋನ್‌ಗಳು ನಿಧಾನವಾಗಿ ತೆರೆಮರೆಗೆ ಸರಿಯುತ್ತಿವೆ. ಈ ಜಾಗಕ್ಕೆ ಈಗ ವಯರ್‌ಲೆಸ್ ಬ್ಲೂಟೂಥ್ ಹೆಡ್‌ಸೆಟ್‌ಗಳು ಕಾಲಿಡುತ್ತಿವೆ.
ಆಡಿಯೋ ಜಾಕ್ ಇಲ್ಲದೆ ಎರಡೂ ಕಿವಿಗೆ ಹಾಕುವಂತಹ ಹೆಡ್‌ಸೆಟ್‌ಗಳು ಮತ್ತೂಂದೆಡೆ ಟ್ರೆಂಡ್ ಆಗಿವೆ. ಎರಡೂ ಬದಿಯಲ್ಲಿ ಕಿವಿಗಳಿಗೆ ಸಿಕ್ಕಿಸಿಕೊಳ್ಳಲು ಸ್ಪೀಕರ್ ಇರುತ್ತದೆ. ಮೊಬೈಲ್ ಬ್ಲೂಟೂಥ್ ಮುಖೇನ ಇದು ಕಾರ್ಯನಿರ್ವಹಿಸುತ್ತದೆ. ಸುಮಾರು 15 ಮೀ. ಅಂತರದಲ್ಲಿದ್ದರೂ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಈ ಇಯರ್‌ಫೋನ್‌ಗಳು ಹೊಂದಿರುತ್ತವೆ.
Related Articles
Advertisement
ಪ್ರಮುಖ ಕಂಪೆನಿಗಳ ಇಯರ್ಫೋನ್ಮಾರುಕಟ್ಟೆಯಲ್ಲಿ ಸದ್ಯ ಸ್ಯಾಮ್‌ಸಂಗ್ ಸಂಸ್ಥೆಯ ಎಚ್‌ಎಂ1100 ಬ್ಲೂಟೂಥ್ ಹೆಡ್‌ಸೆಟ್ ಟ್ರೆಂಡ್ ಆಗಿದ್ದು, 7 ಗಂಟೆ ಟಾಕ್‌ಟೈಮ್ ಹಾಗೂ 400 ಗಂಟೆಗಳ ಸ್ಟಾಂಡ್ ಬೈ ಇದೆ ಸುಮಾರು 980 ರೂ. ಇದೆ. ಜಬ್ರಾ ಸಂಸ್ಥೆಯ ಹೆಡ್‌ಸೆಟ್ 6 ಗಂಟೆ ಟಾಕ್‌ಟೈಂ ಮತ್ತು 8 ದಿನಗಳ ಸ್ಟಾಂಡ್ ಬೈ ಸಾಮರ್ಥ್ಯವಿದ್ದು, 2,000 ರೂ. ಬೆಲೆ ಹೊಂದಿದೆ. ಪ್ಯಾನಸೋನಿಕ್ ವೊಯಾಗರ್ ಪ್ರೊ ಹೆಡ್‌ಸೆಟ್ 6 ಗಂಟೆ ಟಾಕ್‌ಟೈಮ್, 12 ದಿನ ಸ್ಟಾಂಡ್ ಬೈ ಇದ್ದು 8,000 ರೂ. ಬೆಲೆ ಹೊಂದಿದೆ. ಪ್ರಮುಖ ಎಲೆಕ್ಟ್ರಾನಿಕ್ ಉತ್ಪನ್ನಗಳ ಬ್ರ್ಯಾಂಡ್ ಆದಂತಹ ಟ್ಯಾಗ್ ಝೀರೊಜಿ ಎಂಬ ಬ್ಲೂಟೂಥ್ ಹೆಡ್‌ಸೆಟ್ ಇತ್ತೀಚೆಗೆಯಷ್ಟೇ ಮಾರುಕಟ್ಟೆಗೆ ಪರಿಚಯಿಸಿದೆ. ಹೈಡೆಫಿನೇಶನ್ ಶಬ್ದದ ನಿಖರತೆಯೊಂದಿಗೆ 6.11 ಎಂಎಂಗಳ ಅವಳಿ ಸಾಧನವನ್ನು ಹೊಂದಿದೆ. ಇದು ಕ್ವಾಲ್‌ಕಾಮ್ 2020 ಚಿಪ್‌ಸೆಟ್ ಮತ್ತು ವಿ.5.0 ಬ್ಲೂಟೂಥ್ ವರ್ಷನ್ ಹೊಂದಿದ್ದು, ಸುಮಾರು 4,999 ರೂ. ಹೊಂದಿದೆ. ಮೊಬೈಲ್ ಜತೆ ಹೆಡ್‌ಸೆಟ್ ಉಚಿತ
ಕೆಲವೊಂದು ಮೊಬೈಲ್ ಬ್ರ್ಯಾಂಡ್ ಕಂಪೆನಿಯು ಮೊಬೈಲ್ ಖರೀದಿಗೆ ಗ್ರಾಹಕರಿಗೆ ಬ್ಲೂಟೂಥ್ ಹೆಡ್‌ಸೆಟ್ ಉಚಿತವಾಗಿ ನೀಡುತ್ತದೆ. ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಮಂಗಳೂರಿನ ಕೆಲವೊಂದು ಶಾಪ್‌ಗ್ಳಲ್ಲಿಯೂ ಈ ಆಫರ್‌ಗಳಿವೆ. ಸೂಕ್ತ ಆಫರ್
ಬ್ಲೂಟೂಥ್ ವಯರ್‌ಲೆಸ್ ಹೆಡ್‌ಸೆಟ್‌ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ. ಇತ್ತೀಚಿನ ದಿನಗಳಲ್ಲಿ ಮಾಮೂಲಿ ಹಗ್ಗದಂತಿರುವ ಇಯರ್ ಫೋನ್ ಖರೀದಿ ಮಾಡುವವರು ಕಡಿಮೆ. ಇದೇ ಕಾರಣಕ್ಕೆ ವಯರ್‌ಲೆಸ್ ಬ್ಲೂಟೂಥ್‌ಗಳಿಗೆ ಆಫರ್‌ಗಳು ಕೂಡ ಇವೆ. ಕಡಿಮೆ ಬೆಲೆಯಿಂದ ಹಿಡಿದು ಸಾವಿರಾರು ರೂ. ದರದ ಹೆಡ್‌ಸೆಟ್ ಮಾರುಕಟ್ಟೆಯಲ್ಲಿವೆೆ.
– ಮದನ್, ಉದ್ಯಮಿ - ನವೀನ್ ಭಟ್ ಇಳಂತಿಲ