Advertisement

ವಿಪ್ರೋಗೆ 134.2 ಶತ ಕೋಟಿ ರೂ. ಗಳಿಕೆ

01:01 PM Oct 19, 2017 | Team Udayavani |

ಬೆಂಗಳೂರು: ವಿಪ್ರೋ ಕಂಪನಿಯು ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ತೈಮಾಸಿಕ ಅವಧಿಯಲ್ಲಿ 134.2 ಶತಕೋಟಿ ರೂ. ಆದಾಯ ಗಳಿಸಿದ್ದು, ಐಟಿ ಸೇವೆಗಳಿಂದ 22.8 ಶತಕೋಟಿ ರೂ. ಲಾಭ ಗಳಿಸುವ ಮೂಲಕ ಶೇ.4ರಷ್ಟು ಹೆಚ್ಚಳ ಕಂಡಿದೆ.

Advertisement

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವರದಿ ಬಿಡುಗಡೆಗೊಳಿಸಿ ವಿಪ್ರೋ ಕಂಪನಿ ಸಿಇಒ ಅಬಿದಾಲಿ ಜಡ್‌. ನೀಮುಚ್‌ವಾಲಾ ಮಾತನಾಡಿ, “ಕಂಪನಿಯು 2017-18ನೇ ಸಾಲಿನ ಎರಡನೇ ತ್ತೈಮಾಸಿಕದಲ್ಲಿ 21.9 ಶತಕೋಟಿ ರೂ. ನಿವ್ವಳ ಆದಾಯ ಗಳಿಸಿದೆ.

ಐಟಿ ಸಂಬಂಧಿತ ಸೇವೆಗಳಿಂದ 2,013 ದಶಲಕ್ಷ ಡಾಲರ್‌ ಆದಾಯ ಗಳಿಸಿದ್ದು, ಕಳೆದ ತ್ತೈಮಾಸಿಕಕ್ಕೆ ಹೋಲಿಸಿದ್ದರೆ ಶೇ.2.1ರಷ್ಟು ಹೆಚ್ಚಳ ಕಂಡಿದೆ ಎಂದರು. ಇದೇ ಅವಧಿಯಲ್ಲಿ ಗಳಿಸಿರುವ ನಿವ್ವಳ ಆದಾಯವು ತ್ತೈಮಾಸಿಕ ಅವಧಿಗಿಂತ ಶೇ.5.5ರಷ್ಟು ಹೆಚ್ಚಳ ಕಂಡಿದ್ದು, ಉತ್ತಮ ಸಾಧನೆ ತೋರಿದೆ.

ಮೂರನೇ ತ್ತೈಮಾಸಿಕದಲ್ಲಿ ಐಟಿ ಸೇವಾ ವಲಯದಿಂದ 2,014 ದಶಲಕ್ಷ ಡಾಲರ್‌ನಿಂದ 2,054 ದಶಲಕ್ಷ ಡಾಲರ್‌ ಆದಾಯ ಗಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು. ವಿಪ್ರೋ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಜತಿನ್‌ ದಲಾಲ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next