Advertisement
ಇದೇ ವೇಳೆ ರಾಜ್ಯಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಧ್ಯಮ ಲೋಕದ ದೈತ್ಯ ಉದ್ಯಮಿ ಸುಭಾಷ್ ಚಂದ್ರ ಅವರಿಗೆ ಬಿಜೆಪಿ, ಆರ್‌ಎಲ್‌ಪಿ ಪಕ್ಷಗಳು ಬೆಂಬಲ ಘೋಷಿಸಿದ್ದವು. ಅದರ ಹೊರತಾಗಿಯೂ, ಸುಭಾಷ್ ಚಂದ್ರ ಅವರಿಗೆ ಗೆಲುವು ಪಡೆಯಲು 8 ಮತಗಳ ಆವಶ್ಯಕತೆಯಿತ್ತು.
Related Articles
Advertisement
ಮತದಾನದ ವೇಳೆ ಬಿಎಸ್‌ಪಿಯಿಂದ ಶಾಸಕ ರಾಗಿ ಆಯ್ಕೆಯಾಗಿ 2019ರಲ್ಲಿ ಕಾಂಗ್ರೆಸ್ ಸೇರ್ಪಡೆ ಗೊಂಡಿದ್ದ ನಾಲ್ವರು ಶಾಸಕರು ಕಾಂಗ್ರೆಸಿಗೆ ಮತ ಚಲಾಯಿಸಿದರು. ಇವರೊಂದಿಗೆ ಗುರುತಿಸಿಕೊಂಡಿ ರುವ ಇನ್ನಿಬ್ಬರು ಬಿಎಸ್‌ಪಿ ಶಾಸಕರೂ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮತ ಹಾಕಿದರು.
ಮತದಾನದಿಂದ ದೂರ ಉಳಿದ ಬಲರಾಜ್ ಕುಂದು: ಹರಿಯಾಣದಿಂದ ಎರಡು ರಾಜ್ಯಸಭಾ ಸ್ಥಾನಗಳಿಗೆ ಆಯ್ಕೆಗಳು ನಡೆಯಬೇಕಿತ್ತು. ಬಿಜೆಪಿ ಯಿಂದ ಕ್ರಿಶನ್ ಲಾಲ್ ಪನ್ವಾರ್, ಕಾಂಗ್ರೆಸ್‌ನಿಂದ ಅಜಯ್ ಮಾಕನ್ ಕಣದಲ್ಲಿದ್ದರೆ, ಕಾರ್ತಿಕೇಯ ಶರ್ಮಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ನಿರ್ಣಾಯಕ ಎನಿಸಿದ್ದ ಹರಿಯಾಣ ವಿಧಾನಸಭೆಯ ಏಳು ಪಕ್ಷೇತರ ಶಾಸಕರಲ್ಲಿ ಆರು ಮತಗಳು ಬಿಜೆಪಿಗೆ ಹರಿದು ಬಂದಿವೆ ಎಂದು ಬಿಜೆಪಿ ನಾಯಕ ರಣಬೀರ್ ಸಿಂಗ್ ತಿಳಿಸಿದರು. ಮತ್ತೊಬ್ಬ ಪಕ್ಷೇತರ ಶಾಸಕ ಬಲರಾಜ್ ಕುಂದು ಅವರು ಮತದಾನದಿಂದ ದೂರ ಉಳಿದಿದ್ದರು.
ಹರಿಯಾಣ, ಮಹಾರಾಷ್ಟ್ರದಲ್ಲಿ ಎಣಿಕೆ ವಿಳಂಬ ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮೂವರು ಶಾಸಕರು, ಹರಿಯಾಣದ ಇಬ್ಬರು ಕಾಂಗ್ರೆಸ್ ಶಾಸಕರು, ತಮ್ಮ ಮತಪತ್ರಗಳನ್ನು ಬಹಿರಂಗವಾಗಿ ಪ್ರದರ್ಶಿಸುವ ಮೂಲಕ ಮತದಾನದ ನಿಯಮಗ ಳನ್ನು ಗಾಳಿಗೆ ತೂರಿದ್ದಾರೆಂದು ಬಿಜೆಪಿ ಆರೋಪಿ ಸಿತು. ಈ ಗೊಂದಲದಲ್ಲಿ ಈ ಎರಡೂ ರಾಜ್ಯಗಳಲ್ಲಿ ಮತ ಎಣಿಕೆ ಗೊಂದಲ ಮುಂದುವರಿದಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಹೊತ್ತಿಗೆ ಚುನಾವಣ ಆಯುಕ್ತರನ್ನು ಭೇಟಿ ಮಾಡಿದ ಬಿಜೆಪಿಯ ಕೇಂದ್ರ ಸಚಿವ ಮುಕ್ತಾರ್ ಅಬ್ಟಾಸ್ ನಖೀÌ, ಗಜೇಂದ್ರ ಸಿಂಗ್ ಶೆಖಾವತ್, ಜಿತೇಂದ್ರ ಸಿಂಗ್ ಹಾಗೂ ಅರ್ಜುನ್ ರಾಮ್ ಮೇಘವಾಲ್ ಅವರ ನಿಯೋಗ, ತಮ್ಮ ಆರೋಪವನ್ನು ಆಯು ಕ್ತರ ಗಮನಕ್ಕೆ ತಂದಿತಲ್ಲದೆ, ನಿಯಮ ಮೀರಿದ ಶಾಸಕರ ಮತಗಳನ್ನು ಅಸಿಂಧುಗೊಳಿಸಬೇಕೆಂದು ಮನವಿ ಮಾಡಿದರು. ಹರಿಯಾಣ ಕಾಂಗ್ರೆಸ್ ಶಾಸಕರ ಪರವಾಗಿ ಮನವಿ ಸಲ್ಲಿಸಿದ ಕಾಂಗ್ರೆಸ್ ನಾಯಕ ಅಜಯ್ ಮಾಕನ್, ಬಿಜೆಪಿ ಆರೋಪದಲ್ಲಿ ಹುರುಳಿಲ್ಲ ಎಂದು ಆಯೋಗಕ್ಕೆ ಮನವರಿಕೆ ಮಾಡಲು ಯತ್ನಿಸಿದರು.