ಶುಕ್ರವಾರ ಹರಾರೆಯಲ್ಲಿ ನಡೆದ ಈ ಪಂದ್ಯ ವೆಸ್ಟ್ ಇಂಡೀಸ್ ಪಾಲಿಗೆ ಔಪಚಾರಿಕವಾಗಿದ್ದರೂ ಪ್ರತಿಷ್ಠೆಯದ್ದಾಗಿತ್ತು.
Advertisement
ವಿಶ್ವಕಪ್ ಪ್ರಧಾನ ಸುತ್ತು ತಲುಪಿದ ಶ್ರೀಲಂಕಾವನ್ನು ಮಣಿಸಿ ಅಷ್ಟರ ಮಟ್ಟಿಗೆ ಗೌರವ ಉಳಿಸಿ ಕೊಳ್ಳುವ ಅವಕಾಶ ಇಲ್ಲಿತ್ತು. ಆದರೆ ಹೋಪ್ ಬಳಗ ಇಲ್ಲಿಯೂ ಭರವಸೆ ಕಳೆದುಕೊಂಡಿತು. ಮೊದಲು ಬ್ಯಾಟಿಂಗ್ ನಡೆಸಿ 48.1 ಓವರ್‌ಗಳಲ್ಲಿ 243ಕ್ಕೆ ಆಲೌಟಾಯಿತು. ಲಂಕಾ 44.2 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 244 ರನ್ ಬಾರಿಸಿತು; ಸೂಪರ್ ಸಿಕ್ಸ್ ವಿಭಾಗದ ಐದೂ ಪಂದ್ಯಗಳನ್ನು ಗೆದ್ದು ಮೆರೆದಾಡಿತು. ವಿಂಡೀಸ್ ಜಯಿ ಸಿದ್ದು ಒಂದರಲ್ಲಿ ಮಾತ್ರ. ರವಿವಾರ ಶ್ರೀಲಂಕಾ-ನೆದರ್ಲೆಂಡ್ಸ್ ಫೈನಲ್‌ನಲ್ಲಿ ಎದುರಾಗಲಿವೆ.
ಆರಂಭಕಾರ ಪಥುಮ್ ನಿಸ್ಸಂಕ ಶತಕ ಬಾರಿಸಿ ಚೇಸಿಂಗ್ ಹೀರೋ ಎನಿಸಿದರು. ಅವರ ಕೊಡುಗೆ 104 ರನ್ (113 ಎಸೆತ, 14 ಬೌಂಡರಿ). ದಿಮುತ್ ಕರುಣಾರತ್ನೆ 83 ರನ್ ಮಾಡಿದರು. ಮೊದಲ ವಿಕೆಟಿಗೆ 33.3 ಓವರ್‌ಗಳಿಂದ 190 ರನ್ ಹರಿದು ಬಂತು. ಮಹೀಶ್ ತೀಕ್ಷಣ ಬೌಲಿಂಗ್‌ನಲ್ಲಿ ಮಿಂಚಿ 4 ವಿಕೆಟ್ ಕೆಡವಿದರು.
ತೀವ್ರ ಬ್ಯಾಟಿಂಗ್ ಕುಸಿತ ಅನುಭ ವಿಸಿದ ವೆಸ್ಟ್ ಇಂಡೀಸ್, ಕೇಸಿ ಕಾರ್ಟಿ ಅವರ 87 ರನ್ ಪ್ರಯತ್ನದಿಂದ ಗೌರವಯುತ ಮೊತ್ತ ದಾಖಲಿಸಿತು. ಆರಂಭಕಾರ ಜಾನ್ಸನ್ ಚಾರ್ಲ್ಸ್ 39, ಕೆಳ ಕ್ರಮಾಂಕದ ಆಟಗಾರರಾದ ರೊಮಾರಿಯೊ ಶೆಫರ್ಡ್ 26, ಕೆವಿನ್ ಸಿಂಕ್ಲೇರ್ 25 ರನ್ ಹೊಡೆದರು. ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್-48.1 ಓವರ್‌ಗಳಲ್ಲಿ 243 (ಕಾರ್ಟಿ 87, ಚಾರ್ಲ್ಸ್ 39, ತೀಕ್ಷಣ 34ಕ್ಕೆ 4, ಹೇಮಂತ 49ಕ್ಕೆ 2). ಶ್ರೀಲಂಕಾ-44.2 ಓವರ್‌ಗಳಲ್ಲಿ 2 ವಿಕೆಟಿಗೆ 244 (ನಿಸ್ಸಂಕ 104, ಕರುಣಾರತ್ನೆ 83, ಮೆಂಡಿಸ್ ಔಟಾಗದೆ 34). ಪಂದ್ಯಶ್ರೇಷ್ಠ: ಮಹೀಶ್ ತೀಕ್ಷಣ.