Advertisement
ಹೌದು, ಕನ್ನಡ ಮಾತ್ರವಲ್ಲ, ಇಡೀ ಜಗತ್ತಿಗೇ ಹೊಸತನದ ಸಿನಿಮಾ ಆಗಿ ಹೊರಹೊಮ್ಮಿದ “ತಿಥಿ ‘ ಸಿನಿಮಾದಲ್ಲಿ ಇದ್ದವರ್ಯಾರೂ ಕನ್ನಡ ಸಿನಿಮಾರಂಗಕ್ಕೆ ಗೊತ್ತಿದ್ದವರಲ್ಲ. ಆ ಮೂಲಕ ಒಂದಷ್ಟು ಹೊಸ ಪ್ರತಿಭೆಗಳು ಸಿನಿಮಾ ರಂಗಕ್ಕೆ ಪರಿಚಯಗೊಂಡವು. ಅದೊಂದು ಶ್ರೇಷ್ಠ ಸಿನಿಮಾ ಆಗಿ ಹೊರಹೊಮ್ಮಿತು. ಇನ್ನು, ಅದೇ ಸಾಲಿಗೆ ಸೇರಿದ “ರಾಮಾ ರಾಮಾ ರೇ ‘ ಸಿನಿಮಾ ಹೊರಬಂದಾಗಲಷ್ಟೇ ಅದರ ಮಹತ್ವ ಎಲ್ಲರಿಗೂ ತಿಳಿಯಿತು. ಅಲ್ಲೂ ಹೊಸಬರ ಕೈಚಳಕವಿತ್ತು. ಆದರೆ, ಯಾವ ಸ್ಟಾರ್ ಕೂಡ ಆ ಚಿತ್ರದಲ್ಲಿ ಇರಲಿಲ್ಲ. ಒಂದು ಬೋಳುತಲೆ ಕುರಿತ ಕಥೆ ಹೆಣೆದು ಹೀಗೂ ಸಿನಿಮಾ ಮಾಡಿ ಗೆಲ್ಲಬಹುದು ಅಂತ ತೋರಿಸಿಕೊಟ್ಟ ಸಿನಿಮಾ ಅಂದರೆ ಅದು “ಒಂದು ಮೊಟ್ಟೆಯ ಕಥೆ ‘ ಇಲ್ಲೂ ಹೊಸಬರೇ ಹೊರ ಬಂದರು. ಹಾಗೆಯೇ, ಪುನಃ ಸಾಬೀತುಪಡಿಸಿದ್ದು, “ಒಂದಲ್ಲಾ ಎರಡಲ್ಲಾ ‘, “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ- ಕಾಸರಗೋಡು ‘,”ನಡುವೆ ಅಂತರವಿರಲಿ ‘, “ಗೊಂಬೆಗಳ ಲವ್ ‘, “ಲೂಸಿಯಾ ‘ಹೀಗೆ ಕನ್ನಡದಲ್ಲಿ ಈ ರೀತಿಯ ನೂರಾರು ಚಿತ್ರಗಳೇ ಬಂದವು. ಗೆದ್ದು ಬೀಗಿದವು. ಆದರೆ, ಈ ಸಿನಿಮಾಗಳಲ್ಲಿ ಸ್ಟಾರ್‌ಗಿರಿ ಎಂಬುದೇ ಇರಲಿಲ್ಲ. ಅಲ್ಲಿ ಇದ್ದದ್ದು, ಬರೀ ಗಟ್ಟಿ ಕಥೆ. ಕಥೆ ನಂಬಿ ಬಂದವರು ಜನರ ಮನಸ್ಸನ್ನು ಗೆದ್ದರು. ಆ ಮೂಲಕ ಹೊಸ ಅಲೆಯ ಸಿನಿಮಾದ ಜರ್ನಿ ಹೆಚ್ಚಾಯಿತು. ಇತ್ತೀಚೆಗೆ ಪುನಃ ಅಂತಹ ಪ್ರಯತ್ನಗಳು ಸಾಲಾಗಿ ಕಾಣಿಸಿಕೊಂಡವು. “ದಿಯಾ ‘, “ಲವ್ ಮಾಕ್ಟೇಲ್ ‘ ಕೂಡ ನೋಡುಗರ ಗಮನ ಸೆಳೆದವು.
Advertisement
ಸ್ಟಾರ್ ಇಲ್ಲದೆ ಗೆದ್ದವರು.. ಇವರಿಗೆ ಕಥೆಯೇ ಹೀರೋ ಗುರು
01:42 PM May 11, 2020 | mahesh |
Advertisement
Udayavani is now on Telegram. Click here to join our channel and stay updated with the latest news.