Advertisement

ಜಿಲ್ಲೆಯ 8 ಸ್ಥಾನಗಳಲ್ಲೂ ಕಾಂಗ್ರೆಸ್ಸನ್ನು ಗೆಲ್ಲಿಸಿ

04:05 PM May 03, 2017 | Team Udayavani |

ಮಂಗಳೂರು: ದ.ಕ. ಜಿಲ್ಲೆಯ ಕಾಂಗ್ರೆಸ್‌ನಲ್ಲಿ ನಿಷ್ಠಾವಂತ ಕಾರ್ಯಕರ್ತರು ಹೆಚ್ಚಿದ್ದು, ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಎಂಟೂ ಸ್ಥಾನಗಳನ್ನು ಗೆಲ್ಲಿಸುವ ಪ್ರಯತ್ನ ಮಾಡಬೇಕು. ಕಳೆದ ಬಾರಿ ಕೆಪಿಸಿಸಿ ವತಿಯಿಂದ ಮಂಗಳೂರಿನಲ್ಲಿ ನಡೆದ ಇಂದಿರಾಗಾಂಧಿ ಜನ್ಮ ಶತಾಬ್ದ ಸಮಾರಂಭವನ್ನು ಇಲ್ಲಿನ ನಾಯಕರು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟಿದ್ದು, ಈ ಕುರಿತು ಎಐಸಿಸಿ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿ ಹೆಚ್ಚಿನ ವಿಶ್ವಾಸವಿರಿಸಿದ್ದಾರೆ ಎಂದು ರಾಜ್ಯ ಗೃಹ ಸಚಿವ, ಕೆಪಿಸಿಸಿ ಅಧ್ಯಕ್ಷ ಡಾ|ಜಿ.ಪರಮೇಶ್ವರ್‌ ಹೇಳಿದರು. 

Advertisement

ಅವರು ಮಂಗಳವಾರ ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಭೆ ಯನ್ನುದ್ದೇಶಿಸಿ ಮಾತನಾಡಿದರು.

ಕಾಂಗ್ರೆಸ್‌ ರಾಜ್ಯದ ಎಲ್ಲ 224 ಕ್ಷೇತ್ರಗಳನ್ನೂ ಗೆಲ್ಲುವ ಪ್ರಯತ್ನ ಮಾಡಲಿದ್ದು, ಅದಕ್ಕಾಗಿ ಬೂತ್‌ ಮಟ್ಟದಿಂದಲೇ ಪಕ್ಷವನ್ನು ಬಲಪಡಿಸುವ ಕಾರ್ಯ ಮಾಡಬೇಕು. ಒಂದು ವೇಳೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಇಲ್ಲಿನ ಶಾಂತಿ-ಸುವ್ಯವಸ್ಥೆ ಹದಗೆಡಲಿದೆ. ನಾವು ಎಲ್ಲರೂ ಒಗ್ಗಟ್ಟಾಗಿ ಪಕ್ಷವನ್ನು ಗೆಲ್ಲಿಸದೇ ಇದ್ದರೆ ಕಾಂಗ್ರೆಸ್‌ ಯಾವ ಸ್ಥಿತಿಗೆ ತಲುಪ
ಬಹುದು ಎಂಬುದನ್ನು ಕಾರ್ಯಕರ್ತರು ಆಲೋಚಿಸಬೇಕು. ಎಐಸಿಸಿ ಅ ಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಕರ್ನಾಟಕದ ಮೇಲೆ ಹೆಚ್ಚಿನ ವಿಶ್ವಾಸವಿರಿಸಿದ್ದಾರೆ. ನಾವು ಅವರ ವಿಶ್ವಾಸವನ್ನು ಉಳಿಸುವ ಪ್ರಯತ್ನ ಮಾಡಬೇಕು ಎಂದರು.

ರೈ ಅಪೂರ್ವ ನಾಯಕ
ಪ್ರತಿ ದಿನವೂ ಪಕ್ಷಕ್ಕಾಗಿ ಚಿಂತಿಸುವ ಅಪರೂಪದ ನಾಯಕರಲ್ಲಿ ರಮಾನಾಥ ರೈ ಮೊದಲಿಗರು. ಪಕ್ಷ ಯಾವುದೇ ಕೆಲಸ ಹೇಳಿದರೂ ಅದನ್ನು ನಿಷ್ಠೆಯಿಂದ ಮಾಡುತ್ತಾರೆ. ಜಿಲ್ಲಾ ಕಾಂಗ್ರೆಸ್‌ ಕಚೇರಿ ಕಾಮಗಾರಿ ಗಳನ್ನು ವಿಶೇಷ ಮುತುವರ್ಜಿಯಿಂದ ನಿರ್ವಹಿಸಿ ಜಿಲ್ಲಾ ಕಾಂಗ್ರೆಸ್‌ಗೆ ಸುಸಜ್ಜಿತ ಕಚೇರಿ ನೀಡಿದ್ದಾರೆ ಎಂದು ಡಾ| ಪರಮೇಶ್ವರ್‌ ಹೇಳಿದರು.

ನಾನೆಂದೂ ಗ್ರಾಮನಾಯಕ: ರೈ
ಸಚಿವ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಬಿ. ರಮಾನಾಥ ರೈ ಪ್ರಸ್ತಾವನೆಗೈದು, ಭೂ ಮಸೂದೆ ಕಾನೂನು, ವಸತಿ ಯೋಜನೆ, ಬ್ಯಾಂಕ್‌ ರಾಷ್ಟ್ರೀಕರಣ ಮೊದಲಾದ ಪ್ರಧಾನಿ ಇಂದಿರಾ ಗಾಂಧಿ ಯೋಜನೆಗಳಿಂದ ಜಿಲ್ಲೆಯ ಜನತೆ ಹೆಚ್ಚಿನ ಲಾಭ ಪಡೆದಿದೆ. ಆದರೆ ಇಂದು ಜಿಲ್ಲೆಯ ಮತೀಯವಾದಿ ಶಕ್ತಿಗಳು ಕಾಂಗ್ರೆಸ್‌ಗೆ ತೊಂದರೆ ನೀಡುತ್ತಿದ್ದಾರೆ ಎಂದರು. 

Advertisement

ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ, ಶಾಸಕರಾದ ಶಕುಂತಳಾ ಟಿ. ಶೆಟ್ಟಿ, ಅಭಯಚಂದ್ರ ಜೈನ್‌, ಪ್ರಮುಖರಾದ ವಿಜಯ ಕುಮಾರ್‌ ಶೆಟ್ಟಿ, ದಿವ್ಯಪ್ರಭಾ ಚಿಲ್ತಡ್ಕ, ಬಿ.ಎಚ್‌. ಖಾದರ್‌, ಎಂ.ಎ. ಗಫೂರ್‌, ಶ್ಯಾಲೆಟ್‌ ಪಿಂಟೊ, ಯು.ಕೆ. ಮೋನು,ಸುರೇಶ್‌ ಬಲ್ಲಾಳ್‌, ಪದ್ಮನಾಭ ನರಿಂಗಾನ, ವಿಶ್ವಾಸ್‌ಕುಮಾರ್‌ ದಾಸ್‌ ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್‌ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್‌ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next