Advertisement

ದಾಖಲೆ ಅಂತರದಿಂದ ನಿರಾಣಿ ಗೆಲ್ಲಿಸಿ

08:58 AM Apr 28, 2023 | Team Udayavani |

ಬಾಗಲಕೋಟೆ: ಮುರುಗೇಶ ನಿರಾಣಿ ಮಾಡಿದ ಅಭಿವೃದ್ದಿಯ ಸಂಪೂರ್ಣ ವಿವರವನ್ನು ಮತದಾರರ ಕೈಯಲ್ಲಿಟ್ಟು ಜನರ ಬಳಿಗೆ ಬಂದಿದ್ದಾರೆ. ಅವರು ಅಭಿವೃದ್ಧಿ ಪರವಾದ ನಿಲುವು ಹೊಂದಿದ ದೂರದೃಷ್ಟಿಯ ನಾಯಕ. ಜನತೆ ಇದನ್ನು ಅರಿತು ಈ ಬಾರಿ ಅವರನ್ನು ದಾಖಲೆ ಮತಗಳ ಅಂತರದಿಂದ ಗೆಲ್ಲಿಸುತ್ತಾರೆ ಎಂದು ವಿಧಾನ ಪರಿಷತ್‌ ಸದಸ್ಯ ಪಿ.ಎಚ್‌. ಪೂಜಾರ ಹೇಳಿದರು.

Advertisement

ಬೀಳಗಿ ಕ್ಷೇತ್ರದ ಬಾವಲತ್ತಿ ಕೊವಳ್ಳಿ ಬೂದಿಹಾಳ ಎಸ್‌.ಎಚ್‌. ತುಮ್ಮರಮಟ್ಟಿ ಗ್ರಾಮಗಳಲ್ಲಿ ಮುರುಗೇಶ ನಿರಾಣಿ ಅವರೊಂದಿಗೆ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬೀಳಗಿ ಮತಕ್ಷೇತ್ರದ ನೀರಾವರಿ, ವಿದ್ಯುತ್‌, ಶಿಕ್ಷಣ ಕ್ಷೇತ್ರದಲ್ಲಿ ಅವರು ಅಮೂಲಾಗ್ರ ಬದಲಾವಣೆ ತಂದಿದ್ದಾರೆ. ಸಚಿವರಾಗಿ ರಾಜ್ಯದ ಕೈಗಾರಿಕಾ ರಂಗಕ್ಕೆ ಶಕ್ತಿ ತುಂಬಿದ್ದಾರೆ. ಅವರನ್ನು ಈ ಬಾರಿ ಮತ್ತೂಮ್ಮೆ ಗೆಲ್ಲಿಸುವ ಮೂಲಕ ಬೀಳಗಿಗೆ ಹಾಗೂ ರಾಜ್ಯಕ್ಕೆ ಇನ್ನಷ್ಟು ಕೊಡುಗೆ ದೊರೆಯುವಂತೆ ಮಾಡಬೇಕು. ದೇಶವು ಬಿಜೆಪಿ ನೇತೃತ್ವದಲ್ಲಿ ಸುಭದ್ರವಾಗಿದೆ. ನರೇಂದ್ರ ಮೋದಿಜಿ ನೇತೃತ್ವದಲ್ಲಿ ಭಾರತ ವಿಶ್ವದ ಸೂಪರ್‌ ಪವರ್‌ ರಾಷ್ಟ್ರವಾಗಿದೆ ಎಂದರು.

ಬೀಳಗಿ ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿ ಮಾತನಾಡಿ, ಅನ್ನ, ಆರೋಗ್ಯ, ಅಕ್ಷರ, ಆಶ್ರಯಕ್ಕೆ ಮೊದಲು ಅದ್ಯತೆ ನೀಡಿದ ಸ್ವಾವಲಂಬನೆಯ ಬೀಜ ಬಿತ್ತಿದರು. ನೀರು, ರಸ್ತೆ, ವಿದ್ಯುತ್‌ ಎಲ್ಲರಿಗೂ, ಎಲ್ಲಡೆಯೂ ದೊರೆಯುವಂತೆ ಮಾಡಿದ ಪರಿಣಾಮ ಜನರ ಜೀವನಮಟ್ಟ ಸುಧಾರಣೆಯ ಗ್ರಾಫ್‌ ಬಹುಬೇಗನೇ ಏರಿಕೆ ಕಂಡಿದೆ. ಆಲಮಟ್ಟಿ ಹಿನ್ನಿರು, ಘಟಪ್ರಭಾ ನದಿಯ ಸಮರ್ಪಕ ಬಳಕೆ ರೈತರ ಜಮೀನನ್ನು ಸಮೃದ್ಧಗೊಳಿಸಿವೆ. ಅವರೇ ಕೃಷಿ ಆಧಾರಿತ ಉದ್ಯಮಿಯಾಗಿ ತಮ್ಮ ಸಾಮಾಜಿಕ ಜವಾಬ್ದಾರಿ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ ಫಲವಾಗಿ ರೈತರು ಬೆಳೆದ ಬೆಳೆಗೆ ನಿಶ್ಚಿತ ಮಾರುಕಟ್ಟೆ ದೊರೆತು ನಮ್ಮ ಬೀಳಗಿ ಮತಕ್ಷೇತ್ರದ ರೈತ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದಾನೆ. ಇದರಿಂದ ನಮ್ಮ ಬೀಳಗಿ ಆರ್ಥಿಕವಾಗಿ ಸದೃಢವಾಗಿದೆ ಎಂದರು.

ಮುಖಂಡರಾದ ಕೃಷ್ಣಗೌಡ ಪಾಟೀಲ, ಮಿಥುನ ದೇಸಾಯಿ, ಪಾಂಡು ಕನಸಗೇರಿ, ಹರೀಶಗೌಡ ಮುಂತಾದವರು ಪಾಲ್ಗೊಂಡಿದ್ದರು.

Advertisement

ಗಾಳಿ ಮಾತಿಗೆ ಕಿವಿಗೊಡಬೇಡಿ: ಬೀಳಗಿ ಮತಕ್ಷೇತ್ರಕ್ಕೆ ಕಳೆದ 5 ವರ್ಷಗಳಲ್ಲಿ ಮುರುಗೇಶ ನಿರಾಣಿಯವರು ದಾಖಲೆಯ ಪ್ರಮಾಣದಲ್ಲಿ ಅನುದಾನ ತಂದು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಪ್ರತಿಗ್ರಾಮಕ್ಕೂ ನಿಶ್ಚಿತ ಮೂಲಭೂತ ಸೌಕರ್ಯ ನೀಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ನಮ್ಮ ಕಾರ್ಯ ವೈಖರಿ ಬಗ್ಗೆ ಜನತೆಗೆ ತೃಪ್ತಿ ಇದೆ ಎಂದು ವಿಧಾನಪರಿಷತ್‌ ಸದಸ್ಯ ಹಣಮಂತ ನಿರಾಣಿ ಹೇಳಿದರು.

ಬೀಳಗಿ ಕ್ಷೇತ್ರದ ಬಿಸನಾಳ, ಗುಳಬಾಳ, ಸಿದ್ದಾಪೂರ ಹಾಗೂ ಸೂಳಿಕೇರಿ ತಾಂಡಾಗಳಲ್ಲಿ ಸಹೋದರ ಹಾಗೂ ಬೀಳಗಿ ಬಿಜೆಪಿ ಅಭ್ಯರ್ಥಿಮುರುಗೇಶ ನಿರಾಣಿ ಪರವಾಗಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ ಮಾತನಾಡಿದರು.

ಪ್ರತಿ ಹಳ್ಳಿಗಳಲ್ಲೂ ಅಭಿವೃದ್ಧಿ ಕಾರ್ಯಗಳನ್ನು ಹುಡುಕಿ-ಹುಡುಕಿ ಮಾಡಿದ್ದೇವೆ. ಗ್ರಾಮದ ಪ್ರಮುಖರು ಅಭಿವೃದ್ಧಿ ವಿಷಯದಲ್ಲಿ ಹೇಳಿದ ಎಲ್ಲ ಅಹವಾಲುಗಳನ್ನು ಸ್ವೀಕರಿಸಿ ಸಕಾರಾತ್ಮಕವಾಗಿ ಸ್ಪಂದಿಸಿದ್ದೇವೆ. ಈ 5 ವರ್ಷಗಳಲ್ಲಿ ನಡೆದ ಕೆಲಸಗಳ ಬಗ್ಗೆ ಜನತೆ ಸಂತುಷ್ಠರಾಗಿದ್ದಾರೆ. ಸರ್ಕಾರದ ವೈಯಕ್ತಿಕಕಲ್ಯಾಣದ ಯೋಜನೆಗಳನ್ನು ಯೋಗ್ಯ ಫಲಾನುಭವಿಗಳನ್ನು ಹುಡುಕಿ ನೀಡಲಾಗಿದೆ. ಇದರಿಂದಾಗಿ ಅರ್ಹತೆ ಅನುಗುಣವಾಗಿ ಸರ್ಕಾರದ ಸೌಲಭ್ಯಗಳು ನೇರವಾಗಿ ಫಲಾನುಭವಿಗಳ ಮನೆ ಬಾಗಿಲಿಗೆ ದೊರಕಿವೆ. ನಿರಾಣಿ ಕುಟುಂಬ ಅಭಿವೃದ್ಧಿ ವಿಷಯದಲ್ಲಿ ಎಂದಿಗೂ ರಾಜಕಾರಣ ಮಾಡಿಲ್ಲ ಎಂದು ಅವರು ಹೇಳಿದರು.

ಬಸವರಾಜ ಬೊಮ್ಮಾಯಿ ನೇತೃತ್ವದ ನಮ್ಮ ಸರ್ಕಾರವು ಮೀಸಾಲಾತಿ ವಿಷಯದಲ್ಲಿ ಯಾವುದೇ ಸಮಾಜಕ್ಕೆ ಅನ್ಯಾಯ ಮಾಡಿಲ್ಲ. ಕಾಂಗ್ರೆಸ್‌ ಪಕ್ಷವು ರಾಜಕೀಯ ದುರುದ್ದೇಶದಿಂದ ಅವೈಜ್ಞಾನಿಕ ಸಲಹೆಗಳನ್ನು ಜನರ ತಲೆಯಲ್ಲಿ ತುಂಬುತ್ತಿದೆ. ಇಷ್ಟು ವರ್ಷ ಮತಬ್ಯಾಂಕ್‌ ಆಗಿ ಬಳಸಿಕೊಂಡವರಿಂದ ಬಂಜಾರರು, ದಲಿತರು ಸೇರಿದಂತೆ ಯಾರಿಗೂ ಕಾಂಗ್ರೆಸ್‌ನಿಂದ ನಯಾಪೈಸೆ ಉಪಯೋಗವಾಗಿಲ್ಲ. ಬಿಜೆಪಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸವಲತ್ತುಗಳನ್ನು ನೀಡುವ ಜೊತೆಗೆ ರಾಜಕೀಯವಾಗಿ ಪ್ರಾತಿನಿಧ್ಯ ನೀಡುವಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ಹೀಗಾಗಿ ಗಾಳಿಮಾತಿಗೆ ಕಿವಿಗೊಡದೇ ಎಲ್ಲರೂ ಬಿಜೆಪಿಯೊಂದಿಗೆ ಗಟ್ಟಿಯಾಗಿ ನಿಂತು ಆಶೀರ್ವದಿಸಿ ಎಂದು ಕೇಳಿಕೊಂಡರು. ಈ ಸಂದರ್ಭದಲ್ಲಿ ಸಂಗಪ್ಪ ಉಳ್ಳಾಗಡ್ಡಿ, ವೆಂಕಣ್ಣ ಗಿಡ್ಡಪಗೋಳ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next