Advertisement

Wimbledon Tennis; ಸ್ವಿಟೋಲಿನಾ ಓಟ ಸೆಮಿಯಲ್ಲಿ ಅಂತ್ಯ

11:13 PM Jul 13, 2023 | Team Udayavani |

ಲಂಡನ್‌: ವಿಂಬಲ್ಡನ್‌ ಟೆನಿಸ್‌ ಕೂಟದ ಸೆಮಿಫೈನಲ್‌ನಲ್ಲಿ ಎಲೆನಾ ಸ್ವಿಟೋಲಿನಾ ಅವರ ಓಟ ಅಂತ್ಯಗೊಂಡಿದೆ. ಗುರುವಾರ ಸೆಂಟರ್‌ ಕೋರ್ಟ್‌ನಲ್ಲಿ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಸ್ವಿಟೋಲಿನಾ ಅವರನ್ನು ಜೆಕ್‌ ಗಣರಾಜ್ಯದ ತಾರೆ ಮಾರ್ಕೆಟಾ ವೋಂಡ್ರೂಸೋವಾ ಅವರು ನೇರ ಸೆಟ್‌ಗಳಿಂದ ಉರುಳಿಸಿ ಫೈನಲ್‌ ಹಂತಕ್ಕೇರಿದರು.

Advertisement

ಶನಿವಾರ ನಡೆಯುವ ಫೈನಲ್‌ ಹೋರಾಟದಲ್ಲಿ ವೋಂಡ್ರೂಸೋವಾ ಅವರು ಓನ್ಸ್‌ ಜೆಬ್ಯೂರ್‌ ಅವರನ್ನು ಎದುರಿಸಲಿದ್ದಾರೆ. ಜೆಬ್ಯೂರ್‌ ಇನ್ನೊಂದು ಸೆಮಿಫೈನಲ್‌ ಪಂದ್ಯದಲ್ಲಿ ಬೆಲರೂಸ್‌ನ ಅರಿನಾ ಸಬಲೆಂಕಾ ಅವರನ್ನು 6-7 (5-7), 6-4, 6-3 ಸೆಟ್‌ಗಳಿಂದ ಸೋಲಿಸಿದರು.
ಕಳೆದ ವರ್ಷ ಮಗುವಿನ ಜನ್ಮ ನೀಡಿದ ಬಳಿಕ ಮೂರು ತಿಂಗಳ ಹಿಂದೆ ಟೆನಿಸ್‌ ರಂಗಕ್ಕೆ ಮರಳಿದ್ದ ಸ್ವಿಟೋಲಿನಾ ಕ್ವಾರ್ಟರ್‌ಫೈನಲ್‌ನಲ್ಲಿ ವಿಶ್ವದ ನಂಬರ್‌ ಇಗಾ ಸ್ವಿಯಾಟೆಕ್‌ ಅವರನ್ನು ಸೋಲಿ ಸಿದ್ದರು. ಆದರೆ ಸ್ವಿಟೋಲಿನಾ ಸೆಮಿ ಫೈನಲ್‌ನಲ್ಲಿ 6-3, 6-3 ನೇರ ಸೆಟ್‌ಗಳಿಂದ ಸೋತರು.

Advertisement

Udayavani is now on Telegram. Click here to join our channel and stay updated with the latest news.

Next