Advertisement
ದಿನದ ಇನ್ನೊಂದು ಪಂದ್ಯದಲ್ಲಿ ಸ್ಟಾನ್ ವಾವ್ರಿಂಕ ಅವರು ಗಾಲ್ ಮೊನ್‌ಫಿಲ್ಸ್ ಅವರ ವಿರುದ್ಧ 7-6 (5), 6-4, 7-6 (3) ಸೆಟ್‌ಗಳಿಂದ ಸೋತು ಹೊರಬಿದ್ದರು.
ನಾಲ್ಕು ಬಾರಿಯ ಗ್ರ್ಯಾನ್ ಸ್ಲಾಮ್ ನವೋಮಿ ಒಸಾಕಾ ಅವರು ದ್ವಿತೀಯ ಸುತ್ತಿನ ಹೋರಾಟದಲ್ಲಿ 19ನೇ ಶ್ರೇಯಾಂಕದ ಎಮ್ಮಾ ನವಾರೊ ಅವರ ಕೈಯಲ್ಲಿ ನೇರ ಸೆಟ್‌ಗಳಿಂದ ಸೋತು ಹೊರಬಿದ್ದಿದ್ದಾರೆ. ಸೆಂಟರ್ ಕೋರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ವಿಶ್ವದ ನಂಬರ್ ವನ್ ಜಾನ್ನಿಕ್ ಸಿನ್ನರ್ ನಾಲ್ಕು ಸೆಟ್‌ಗಳ ಕಠಿನ ಸೆಣಸಾಟದಲ್ಲಿ 2021ರ ರನ್ನರ್ ಅಪ್ ಮಾಟೆಯೊ ಬರೆಟಿನಿ ಅವರನ್ನು ಸೋಲಿಸಿ ಮುನ್ನಡೆದಿದ್ದಾರೆ.
15 ತಿಂಗಳ ವಿಶ್ರಾಂತಿ ಬಳಿಕ ಕಳೆದ ಜನವರಿನಲ್ಲಿ ಟೆನಿಸ್ ರಂಗಕ್ಕೆ ಮರಳಿದ್ದ ಒಸಾಕಾ 4-6, 1-6 ಸೆಟ್‌ಗಳಿಂದ ನವಾರೊ ಅವರಿಗೆ ಶರಣಾಗಿ ಹೊರಬಿದ್ದರು. ಈ ಗೆಲುವಿನ ಮೂಲಕ ನವಾರೊ ಮೊದಲ ಬಾರಿ ಇಲ್ಲಿ ಮೂರನೇ ಸುತ್ತಿಗೇರಿದರು. ರಾಡುಕಾನು 3ನೇ ಸುತ್ತಿಗೆ
ದಿನದ ಇನ್ನೊಂದು ಪಂದ್ಯದಲ್ಲಿ ಎಮ್ಮಾ ರಾಡುಕಾನು ಅವರು ಬೆಲ್ಜಿಯಂದ ಎಲಿಸೆ ಮಾರ್ಟೆನ್ಸ್ ಅವರನ್ನು 6-1, 6-2 ಸೆಟ್‌ಗಳಿಂದ ಸೋಲಿಸಿ ಮೂರನೇ ಸುತ್ತು ತಲುಪಿದರು.
Related Articles
ಇಟಲಿ ಆಟಗಾರರ ನಡುವಣ ಹೋರಾ ಟದಲ್ಲಿ ಸಿನ್ನರ್ 2021ರ ರನ್ನರ್ ಅಪ್ ಮಾಟೆಯೊ ಬರೆಟನಿ ಅವರನ್ನು 7-6 (3), 7-6 (4), 2-6, 7-6 (4) ಸೆಟ್‌ಗಳಿಂದ ಸೋಲಿಸಿ ಮೂರನೇ ಸುತ್ತು ತಲುಪಿದರು. ಎದುರಾಳಿಯ ಆಟದ ತೀವ್ರತೆಯನ್ನು ಗಮನಿಸಿದಾಗ ನಾನಿಂದು ಆಟದ ಮಟ್ಟವನ್ನು ಏರಿಸಲೇಬೇ ಕಿತ್ತು ಎಂದು ಗೆಲುವಿನ ಬಳಿಕ ಸಿನ್ನರ್ ಹೇಳಿದರು.
Advertisement
ರೂಡ್‌ಗೆ ಸೋಲುಇಟಲಿಯ ಫ್ಯಾಬಿಯೊ ಫಾಗ್ನಿನಿ ಅಮೋಘ ಆಟ ಪ್ರದರ್ಶಿಸಿ ಎಂಟನೇ ಶ್ರೇಯಾಂಕದ ಕ್ಯಾಸ್ಪರ್ ರೂಡ್ ಅವರನ್ನು 6-4, 7-5, 6-7 (1), 6-3 ಸೆಟ್‌ಗಳಿಂದ ಸೋಲಿಸಿ ಮುರನೇ ಸುತ್ತು ತಲುಪಿದರು. ಇನ್ನೊಂದು ಪಂದ್ಯದಲ್ಲಿ ಐದನೇ ಶ್ರೇಯಾಂಕದ ಡ್ಯಾನಿಲ್ ಮೆಡ್ವೆಡೇವ್ 6-7 (3), 7-6 (4), 6-4, 7-5 ಸೆಟ್‌ಗಳಿಂದ ಅಲೆಕ್ಸಾಂಡ್ರೆ ಮುಲ್ಲರ್ ಅವರನ್ನು ಸೋಲಿಸಿ ಮೂರನೇ ಸುತ್ತು ತಲುಪಿದರು.