ರವಿವಾರದ ಮುಖಾಮುಖಿಯಲ್ಲಿ ಅಮೆರಿಕದ ಮ್ಯಾಡಿಸನ್ ಕೀಸ್ 3ನೇ ಸೆಟ್ ವೇಳೆ ಗಾಯಳಾಗಿ ಹಿಂದೆ ಸರಿದ ಕಾರಣ ಪೌಲಿನಿಗೆ ಅದೃಷ್ಟ ಒಲಿಯಿತು. ಆಗ ಸ್ಪರ್ಧೆ 6-3, 6-7 (6-8), 5-5 ಸಮಬಲದಲ್ಲಿ ನೆಲೆಸಿತ್ತು. ಪೌಲಿನಿ ಮೊದಲ ಸೆಟ್, ಕೀಸ್ ದ್ವಿತೀಯ ಸೆಟ್ ಜಯಿಸಿದ್ದರು.
Advertisement
ಅಲ್ಕರಾಜ್ ಗೆಲುವುಕಾರ್ಲೋಸ್ ಅಲ್ಕರಾಜ್ ಫ್ರಾನ್ಸ್‌ನ ಯುಗೊ ಹಂಬರ್ಟ್ ಅವರನ್ನು 6-3, 6-4, 1-6, 7-5 ಅಂತರ ದಿಂದ ಮಣಿಸಿ ಪುರುಷರ ವಿಭಾಗದಿಂದ ಮೊದಲಿಗರಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ವಿಶ್ವದ ನಂ.1 ಆಟಗಾರ್ತಿ, ಪೋಲೆಂಡ್‌ನ ಇಗಾ ಸ್ವಿಯಾಟೆಕ್ ಅವರ ವಿಂಬಲ್ಡನ್ ಆಟ 3ನೇ ಸುತ್ತಿನಲ್ಲಿ ಕೊನೆಗೊಂಡಿದೆ. 35ನೇ ರ್‍ಯಾಂಕ್‌ನ ಕಜಾಕ್ ಆಟಗಾರ್ತಿ ಯುಲಿಯಾ ಪುಟಿನ್ಸೇವಾ ವಿರುದ್ಧ ಮೊದಲ ಸೆಟ್ ಜಯಿಸಿದ ಹೊರತಾಗಿಯೂ ಸ್ವಿಯಾಟೆಕ್ ಮೇಲುಗೈ ಸಾಧಿಸಲು ವಿಫಲರಾದರು. ಪುಟಿನ್ಸೇವಾ ಗೆಲುವಿನ ಅಂತರ 3-6, 6-1, 6-2. ವನಿತಾ ಸಿಂಗಲ್ಸ್‌ನ ಮತ್ತೂಂದು ಪಂದ್ಯದಲ್ಲಿ ಚೀನದ ಕ್ಸಿನ್ಯೂ ವಾಂಗ್ ಆತಿಥೇಯ ಬ್ರಿಟನ್‌ನ ಹ್ಯಾರೀಟ್ ಡಾರ್ಟ್ ಅವರನ್ನು ಭಾರೀ ಹೋರಾಟದ ಬಳಿಕ 2-6, 7-5, 6-3ರಿಂದ ಮಣಿಸುವಲ್ಲಿ ಯಶಸ್ವಿಯಾದರು. ಇವರ ಪ್ರಿ ಕ್ವಾರ್ಟರ್ ಫೈನಲ್ ಎದುರಾಳಿ ಉಕ್ರೇನ್‌ನ ಎಲೆನಾ ಸ್ವಿಟೋಲಿನಾ. ಇವರು ಓನ್ಸ್ ಜೆಬ್ಯೂರ್ ವಿರುದ್ಧ 6-1, 7-6 (7-4) ಅಂತರದ ಜಯ ಸಾಧಿಸಿದರು.
Related Articles
Advertisement
ಜೊಕೋವಿಕ್ ಜಯಪುರುಷರ ಸಿಂಗಲ್ಸ್‌ನಲ್ಲಿ ನೊವಾಕ್ ಜೊಕೋವಿಕ್ 3ನೇ ಸುತ್ತು ದಾಟಿದ್ದಾರೆ. ಅವರು ಆಸ್ಟ್ರೇಲಿಯದ ಅಲೆಕ್ಸಿ ಪೋಪಿರಿನ್ ವಿರುದ್ಧ ಮೊದಲ ಸೆಟ್ ಕಳೆದುಕೊಂಡ ಬಳಿಕ ನೈಜ ಸಾಮರ್ಥ್ಯ ಪ್ರದರ್ಶಿಸಿದರು. ಗೆಲುವಿನ ಅಂತರ 4-6, 6-3, 6-4, 7-6 (7-3). ಸೋಮವಾರದ ಮುಖಾ ಮುಖೀ ಯಲ್ಲಿ ಡೆನ್ಮಾರ್ಕ್‌ನ ಹೋಲ್ಜರ್ ರುನೆ ವಿರುದ್ಧ ಆಡಲಿದ್ದಾರೆ. ರುನೆ ಫ್ರಾನ್ಸ್‌ನ ಕ್ವಿಂಟಿನ್ ಹ್ಯಾಲಿಸ್ ವಿರುದ್ಧ 5 ಸೆಟ್‌ಗಳ ಜಿದ್ದಾಜಿದ್ದಿ ಹೋರಾಟದಲ್ಲಿ ಮೇಲುಗೈ ಸಾಧಿಸಿದರು.