Advertisement
ಇದು ಪ್ಯಾಟೆನ್-ಹೆಲಿಯೋವಾರ ಜೋಡಿಗೆ ಒಲಿದ ಮೊದಲ ಗ್ರ್ಯಾನ್ಸ್ಲಾಮ್ ಪ್ರಶಸ್ತಿಯಾಗಿದೆ. ಈ ಪಂದ್ಯಾವಳಿಯಲ್ಲಿ ಇವರಿಗೆ ಯಾವುದೇ ಶ್ರೇಯಾಂಕ ಲಭಿಸಿರ ಲಿಲ್ಲ. 3 ಗಂಟೆಗಳ ಕಾಲ ನಡೆದ ಪಂದ್ಯದ ವೇಳೆ ಮೂರೂ ಸೆಟ್ ಟೈ-ಬ್ರೇಕರ್ಗೆ ವಿಸ್ತರಿಸಲ್ಪಟ್ಟದ್ದು ಫೈನಲ್ ತೀವ್ರತೆಗೆ ಸಾಕ್ಷಿ.
ವನಿತಾ ಡಬಲ್ಸ್ ಪ್ರಶಸ್ತಿ ಅಮೆರಿಕದ ಟೇಲರ್ ಟೌನ್ಸೆಂಡ್-ಜೆಕ್ ಗಣರಾಜ್ಯದ ಕ್ಯಾಥರಿನಾ ಸಿನಿಯಕೋವಾ ಪಾಲಾಯಿತು. ಇವರು ಕೆನಡಾದ ಗ್ಯಾಬ್ರಿಯೇಲಾ ಡಾಬ್ರೋವ್ಸ್ಕಿ-ನ್ಯೂಜಿಲ್ಯಾಂಡ್ನ ಎರಿನ್ ರೌಟಿÉಫ್ ವಿರುದ್ಧ 7-6 (5), 7-6 (1) ಅಂತರದಿಂದ ಗೆದ್ದರು. ಇಲ್ಲಿ ಟೌನ್ಸೆಂಡ್ “ಥರ್ಡ್ ಟೈಮ್ ಲಕ್ಕಿ’ ಎನಿಸಿದರು. 2022ರ ಯುಎಸ್ ಓಪನ್ ಡಬಲ್ಸ್ ಹಾಗೂ ಕಳೆದ ವರ್ಷದ ಫ್ರೆಂಚ್ ಓಪನ್ ಡಬಲ್ಸ್ ಫೈನಲ್ನಲ್ಲಿ ಇವರು ಸೋಲನುಭವಿಸಿದ್ದರು. ಇದೇ ವೇಳೆ ಸಿನಿಯಕೋವಾ 9ನೇ ಡಬಲ್ಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.