Advertisement

ಈ ವರ್ಷ ಟೆನಿಸ್‌ ಡೌಟ್‌: ಲೂಯಿಸ್‌

10:45 PM Apr 03, 2020 | Sriram |

ಲಂಡನ್‌: 2020ರ ಇನ್ನುಳಿದ ಟೆನಿಸ್‌ ಋತುವಿನಲ್ಲಿ ನಡೆಯುವ ಟೆನಿಸ್‌ ಕೂಟಗಳು ರದ್ದಾಗುವ ಸಾಧ್ಯತೆಯಿದೆ ಎಂದು ವಿಂಬಲ್ಡನ್‌ ಮುಖ್ಯಸ್ಥ ರಿಚರ್ಡ್‌ ಲೂಯಿಸ್‌ ಹೇಳಿದ್ದಾರೆ.

Advertisement

ಕೋವಿಡ್ 19 ದಿಂದಾಗಿ ಜುಲೈ 13ರ ವರೆಗೆ ಮತ್ತು ಇದೀಗ ವಿಂಬಲ್ಡನ್‌ ಟೆನಿಸ್‌ ಕೂಟ ರದ್ದಾದ ಹಿನ್ನೆಲೆಯಲ್ಲಿ ಲೂಯಿಸ್‌ ಈ ಹೇಳಿಕೆ ನೀಡಿದ್ದಾರೆ. ಎರಡನೇ ವಿಶ್ವಯುದ್ಧದ ಬಳಿಕ ಇದೇ ಮೊದಲ ಬಾರಿ ವಿಂಬಲ್ಡನ್‌ ಕೂಟವನ್ನು ರದ್ದುಮಾಡಲಾಗಿದೆ.

ಕೋವಿಡ್ 19 ಉಂಟುಮಾಡುತ್ತಿರುವ ವ್ಯಾಪಕ ಹಾನಿಯಿಂದಾಗಿ ಈ ವರ್ಷದ ಆವೆ ಮತ್ತು ಹುಲ್ಲುಹಾಸಿನ ಟೆನಿಸ್‌ ಕೂಟಗಳು ರದ್ದಾಗುವ ಸಾಧ್ಯತೆಯಿದೆ. ಸದ್ಯದ ಸ್ಥಿತಿಯನ್ನು ಗಮನಿಸಿದರೆ ಈ ವರ್ಷ ಯಾವುದೇ ಟೆನಿಸ್‌ ಆಟ ನಡೆಯುವ ಸಾಧ್ಯತೆಯಿಲ್ಲ ಎಂದವರು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next