Advertisement

ವಿಂಬಲ್ಡನ್‌: ಸೆಮಿಫೈನಲ್‌ ಪ್ರವೇಶಿಸಿದ ಜೊಕೋ, ಆ್ಯಶ್ಲಿ ಬಾರ್ಟಿ

12:35 AM Jul 08, 2021 | Team Udayavani |

ಲಂಡನ್‌: ಕಳೆದೆರಡು ಬಾರಿಯ ಹಾಲಿ ಚಾಂಪಿಯನ್‌, ವಿಶ್ವದ ನಂ.1 ಟೆನಿಸಿಗ ನೊವಾಕ್‌ ಜೊಕೋವಿಕ್‌ ವಿಂಬಲ್ಡನ್‌ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಹಾದಿಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಸುಲಭ ಜಯದೊಂದಿಗೆ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

Advertisement

ಬುಧವಾರ ನಡೆದ ಪುರುಷರ ಮೊದಲ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಜೊಕೋವಿಕ್‌ 6-3, 6-4, 6-4 ನೇರ ಸೆಟ್‌ಗಳಿಂದ ಹಂಗೇರಿಯ ಮಾರ್ಟನ್‌ ಫ‌ುಕೊÕàವಿಕ್ಸ್‌ ಅವರನ್ನು ಪರಾಭವಗೊಳಿಸಿದರು.

ರಶ್ಯದ ಕರೆನ್‌ ಕಶನೋವ್‌ ಮತ್ತು ಕೆನಡಾದ ಡೆನ್ನಿಸ್‌ ಶಪೊವಲೋವ್‌ ನಡುವಿನ ಮತ್ತೂಂದು ಕ್ವಾರ್ಟರ್‌ ಫೈನಲ್‌ 5 ಸೆಟ್‌ಗಳಿಗೆ ವಿಸ್ತರಿಸಲ್ಪಟ್ಟಿತು. ಇದನ್ನು ಶಪೊವಲೋವ್‌ 6-4, 3-6, 5-7, 6-1, 6-4 ಅಂತರದಿಂದ ಗೆದ್ದರು.

ಆಸೀಸ್‌ ಕದನ ಗೆದ್ದ ಆ್ಯಶ್ಲಿ ಬಾರ್ಟಿ
ವಿಶ್ವದ ನಂ.1 ಆಟಗಾರ್ತಿ ಆ್ಯಶ್ಲಿ ಬಾರ್ಟಿ “ಆಲ್‌ ಆಸ್ಟ್ರೇಲಿಯನ್‌’ ಹೋರಾಟದಲ್ಲಿ ಗೆದ್ದು ವಿಂಬಲ್ಡನ್‌ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಅಂತಿಮ ಕ್ವಾರ್ಟರ್‌ ಫೈನಲ್‌ನಲ್ಲಿ ಅವರು ತಮ್ಮದೇ ದೇಶದ ಅಜ್ಲಾ ಟೊಮ್ಲಾ ನೊವಿಕ್‌ ವಿರುದ್ಧ 6-1, 6-3 ಅಂತರದ ಸುಲಭ ಜಯ ಸಾಧಿಸಿದರು.

1980ರ ಬಳಿಕ ವಿಂಬಲ್ಡನ್‌ನಲ್ಲಿ ಏರ್ಪಟ್ಟ “ಆಲ್‌ ಆಸ್ಟ್ರೇಲಿಯನ್‌ ಕ್ವಾರ್ಟರ್‌ ಫೈನಲ್‌’ ಪಂದ್ಯ ಇದಾಗಿತ್ತು. ಹಾಗೆಯೇ ಇದು ಟೊಮ್ಲಾನೊವಿಕ್‌ ಕಂಡ ಮೊದಲ ಗ್ರ್ಯಾನ್‌ಸ್ಲಾಮ್‌ ಕ್ವಾರ್ಟರ್‌ ಫೈನಲ್‌ ಕೂಡ ಆಗಿತ್ತು.

Advertisement

ಗುರುವಾರದ ಸೆಮಿಫೈನಲ್‌ನಲ್ಲಿ ಆ್ಯಶ್ಲಿ ಬಾರ್ಟಿ 2018ರ ಚಾಂಪಿಯನ್‌, ಜರ್ಮನಿಯ ಆ್ಯಂಜೆಲಿಕ್‌ ಕೆರ್ಬರ್‌ ಸವಾಲನ್ನು ಎದುರಿಸಬೇಕಿದೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಬೆಲರೂಸ್‌ನ ಅರಿನಾ ಸಬಲೆಂಕಾ ಮತ್ತು ಜೆಕ್‌ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ ಮುಖಾಮುಖೀ ಆಗಲಿದ್ದಾರೆ.

ಆ್ಯಶ್ಲಿ ಬಾರ್ಟಿ 2011ರಲ್ಲಿ ವಿಂಬಲ್ಡನ್‌ ಬಾಲಕಿಯರ ಚಾಂಪಿಯನ್‌ ಆಗಿದ್ದರು. ಅನಂತರ “ಲಂಡನ್‌ ಲಾನ್ಸ್‌’ನಲ್ಲಿ ಅವರಿಂದ ಗಮನಾರ್ಹ ಪ್ರದರ್ಶನವೇನೂ ಕಂಡುಬಂದಿಲ್ಲ. ಈ ಬಾರಿ ಕೂಟದ ನೆಚ್ಚಿನ ಆಟಗಾರ್ತಿಯಾಗಿ ಮೂಡಿಬಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next