Advertisement
ವಿಂಬಲ್ಡನ್ ಡ್ರಾ ಪ್ರಕಾರ ನೊವಾಕ್ ಜೊಕೋವಿಕ್ ಆರ್ಜೆಂಟೀನಾದ ಪೆಡ್ರೊ ಕ್ಯಾಶಿನ್ ವಿರುದ್ಧ ಆಟ ಆರಂಭಿಸಲಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ರಷ್ಯಾದ ಆ್ಯಂಡ್ರೆ ರುಬ್ಲೇವ್ ಎದುರಾಗಬಹುದು. ಮತ್ತೆರಡು ಕ್ವಾರ್ಟರ್ ಫೈನಲ್ ಸಾಧ್ಯತೆಗಳೆಂದರೆ ಡ್ಯಾನಿಲ್ ಮೆಡ್ವೆಡೇವ್-ಸ್ಟೆಫನಸ್ ಸಿಸಿಪಸ್ ಹಾಗೂ ಕ್ಯಾಸ್ಪರ್ ರೂಡ್-ಜಾನಿಕ್ ಸಿನ್ನರ್.
ನೊವಾಕ್ ಜೊಕೋವಿಕ್ ಈಗಾ ಗಲೇ ವರ್ಷದ ಮೊದಲೆರಡೂ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದಾರೆ. ಆಸ್ಟ್ರೇಲಿ ಯನ್ ಓಪನ್ ಮತ್ತು ಫ್ರೆಂಚ್ ಓಪನ್‌ನಲ್ಲಿ ಪ್ರಭುತ್ವ ಸಾಧಿಸಿದ್ದಾರೆ. ವಿಂಬಲ್ಡನ್‌ನತ್ತ ಬಂದಾಗ ಅವರು ಹಾಲಿ ಚಾಂಪಿಯನ್. 2011ರಿಂದ ಈವರೆಗೆ 7 ವಿಂಬಲ್ಡನ್ ಟ್ರೋಫಿಗಳನ್ನು ಎತ್ತಿಹಿಡಿದಿದ್ದಾರೆ. ವಿಶ್ವದ ನಂ.1 ಆಟಗಾರನಾಗಿರುವ ಕಾರ್ಲೋಸ್ ಅಲ್ಕರಾಜ್ ಅವರಿಂದ ಜೊಕೋಗೆ ಒಂದಿಷ್ಟು ಪೈಪೋಟಿ ಎದುರಾಗ ಬಹುದು. ಅಲ್ಕರಾಜ್ ಫ್ರಾನ್ಸ್‌ನ ಜೆರೆಮಿ ಚಾರ್ಡಿ ವಿರುದ್ಧ ಆಡಲಿದ್ದಾರೆ. ಗೆಲ್ಲುತ್ತ ಹೋದರೆ ಕ್ವಾರ್ಟರ್ ಫೈನಲ್‌ನಲ್ಲಿ ಹೋಲ್ಜರ್ ರುನೆ ಎದುರಾಗುವ ಸಾಧ್ಯತೆ ಇದೆ. ವಿಶ್ವದ ನಂ.6 ಆಟಗಾರನಾಗಿರುವ ರುನೆ ಪ್ರಥಮ ಸುತ್ತಿನಲ್ಲಿ ಇಂಗ್ಲೆಂಡ್‌ನ ವೈಲ್ಡ್‌ಕಾರ್ಡ್ ಆಟಗಾರ ಜಾರ್ಜ್ ಲೊಫಾಜೆನ್ ವಿರುದ್ಧ ಸೆಣಸುವರು.
Related Articles
5ನೇ ಶ್ರೇಯಾಂಕದ ಗ್ರೀಕ್ ಟೆನಿಸಿಗ ಸಿಸಿಪಸ್ ಅವರ ಮೊದಲ ಸುತ್ತಿನ ಸವಾಲು ಸುಲಭದ್ದಲ್ಲ. ಅವರಿಲ್ಲಿ 2020ರ ಯುಎಸ್ ಓಪನ್ ಚಾಂಪಿಯನ್ ಡೊಮಿನಿಕ್ ಥೀಮ್ ವಿರುದ್ಧ ಆಡಲಿದ್ದಾರೆ. ಗೆದ್ದರೆ 2 ಬಾರಿಯ ವಿಂಬಲ್ಡನ್ ಚಾಂಪಿಯನ್ ಆ್ಯಂಡಿ ಮರ್ರೆ ಅವರನ್ನು ಎದುರಿಸಬೇಕಾಗುತ್ತದೆ. ಮರ್ರೆ ವೈಲ್ಡ್ ಕಾರ್ಡ್ ಮೂಲಕ ಆಡಲಿಳಿದ ರಿಯಾನ್ ಪೆನಿಸ್ಟನ್ ಅವರನ್ನು ಮೊದಲ ಸುತ್ತಿನಲ್ಲಿ ಎದುರಿಸುವರು.
Advertisement
ಡ್ಯಾನಿಲ್ ಮೆಡ್ವೆಡೇವ್ ಅವರಿಗೆ ಸುಲಭ ಸವಾಲು ಕಾದಿದೆ. ಮೊದಲ ಸುತ್ತಿನಲ್ಲಿ ಇಂಗ್ಲೆಂಡ್‌ನ ಆರ್ಥರ್ ಫೆರ್ರಿ ವಿರುದ್ಧ ಆಡುವರು. ಫೆರ್ರಿ ಅವರಿಗೆ ವೈಲ್ಡ್‌ಕಾರ್ಡ್ ಪ್ರವೇಶ ಲಭಿಸಿದೆ. ಹಾಗೆಯೇ ಫ್ರೆಂಚ್ ಓಪನ್ ರನ್ನರ್ ಅಪ್ ಕ್ಯಾಸ್ಪರ್ ರೂಡ್ ಫ್ರಾನ್ಸ್‌ನಅರ್ಹತಾ ಆಟಗಾರ ಲಾರೆಂಟ್ ಲೊಕೊಲಿ ವಿರುದ್ಧ ಸೆಣಸುವರು.ಕಳೆದ ವರ್ಷದ ಫೈನಲಿಸ್ಟ್ ನಿಕ್ ಕಿರ್ಗಿಯೋಸ್ ಬೆಲ್ಜಿಯಂನ ಡೇವಿಡ್ ಗೊಫಿನ್ ಅವರನ್ನು ಆರಂಭಿಕ ಪಂದ್ಯದಲ್ಲಿ ಎದುರಿಸುವರು.
ವನಿತಾ ವಿಭಾಗ: ಸ್ವಿಯಾಟೆಕ್-ಗಾಫ್ಮೊದಲ ವಿಂಬಲ್ಡನ್ ಪ್ರಶಸ್ತಿಯ ಹುಡುಕಾಟದಲ್ಲಿರುವ ನಂ.1 ಆಟಗಾರ್ತಿ ಇಗಾ ಸ್ವಿಯಾಟೆಕ್ ಚೀನದ ಝು ಲಿನ್ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡು ವರು. ಕ್ವಾರ್ಟರ್ ಫೈನಲ್‌ನಲ್ಲಿ ಕೊಕೊ ಗಾಫ್ ಎದುರಾಗುವ ಸಾಧ್ಯತೆ ಇದೆ. ಹಾಲಿ ಚಾಂಪಿಯನ್ ಎಲೆನಾ ರಿಬಾಕಿನಾ-ಓನ್ಸ್ ಜೆಬ್ಯೂರ್ ನಡುವೆ ಕ್ವಾರ್ಟರ್ ಫೈನಲ್ ಮುಖಾಮುಖೀಯೊಂದು ಗೋಚರಿಸುತ್ತಿದೆ. ಆಗ ಇದು ಕಳೆದ ವರ್ಷದ ಫೈನಲ್‌ನ ಪುನರಾವರ್ತನೆ ಆಗಲಿದೆ. ಇವರಿಬ್ಬರು ಪ್ರಥಮ ಸುತ್ತಿನಲ್ಲಿ ಕ್ರಮವಾಗಿ ಶೆಲ್ಬಿ ರೋಜರ್ ಮತ್ತು ಮ್ಯಾಗ್ಡಲೆನಾ ಫ್ರೆಂಚ್ ವಿರುದ್ಧ ಆಡಲಿದ್ದಾರೆ. ವಿಶ್ವದ ನಂ.2 ಆಟಗಾರ್ತಿ, ಹಾಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಅರಿನಾ ಸಬಲೆಂಕಾ ಹಂಗೇರಿಯ ಪನ್ನಾ ಯುಡ್ವಾರ್ಡಿ ವಿರುದ್ಧ ಸ್ಪರ್ಧೆ ಆರಂಭಿಸಲಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಮರಿನಾ ಸಕ್ಕರಿ ಎದುರಾಗಬಹುದು. 5 ಬಾರಿಯ ಚಾಂಪಿಯನ್ ವೀನಸ್ ವಿಲಿಯಮ್ಸ್ ಕೂಡ ಸ್ಪರ್ಧೆಯಲ್ಲಿದ್ದಾರೆ. ಆದರೆ ಮೊದಲ ಸುತ್ತಿನಲ್ಲೇ ಅವರಿಗೆ ಕಠಿನ ಸವಾಲು ಎದುರಾಗಿದೆ. ಅವರಿಲ್ಲಿ ಎಲಿನಾ ಸ್ವಿಟೋಲಿನಾ ವಿರುದ್ಧ ಸೆಣಸಬೇಕಿದೆ.