Advertisement
ಮುಗುರುಜಾ ಹಾಗೂ ಮ್ಯಾಡಿಸನ್ ಕೀಸ್ ನಿರ್ಗಮನದೊಂದಿಗೆ ವನಿತಾ ಟಾಪ್-10 ಹಂತದ ಇಬ್ಬರು ಆಟಗಾರ್ತಿಯರಷ್ಟೇ ಸ್ಪರ್ಧೆ ಯಲ್ಲಿ ಉಳಿದುಕೊಂಡಂತಾಗಿದೆ. ಇವರೆಂದರೆ ಸಿಮೋನಾ ಹಾಲೆಪ್ (1) ಮತ್ತು ಕ್ಯಾರೋಲಿನಾ ಪ್ಲಿಸ್ಕೋವಾ (7).
ರೋಹನ್ ಬೋಪಣ್ಣ-ಫ್ರಾನ್ಸ್‌ನ ಎಡ್ವರ್ಡ್ ರೋಜರ್ ವೆಸಲಿನ್ ಪುರುಷರ ಡಬಲ್ಸ್ ದ್ವಿತೀಯ ಸುತ್ತಿನ ಮುಖಾಮುಖೀಯ ನಡು ವಲ್ಲೇ ಪಂದ್ಯ ತ್ಯಜಿಸಿದ್ದಾರೆ. ಬೋಪಣ್ಣ ಗಾಯಾಳಾದುದೇ ಇದಕ್ಕೆ ಕಾರಣ. ಆಗ ಫ್ರೆಡ್ರಿಕ್ ನೀಲ್ಸೆನ್-ಜೋ ಸ್ಯಾಲಿಸ್‌ಬರಿ ವಿರುದ್ಧ ಬೋಪಣ್ಣ ಜೋಡಿ 4-6, 6-7 (4), 1-2 ಅಂತರದ ಹಿನ್ನಡೆಯಲ್ಲಿತ್ತು. ಇದೇ ಮೊದಲ ಸಲ ವಿಂಬಲ್ಡನ್ ಡಬಲ್ಸ್ ಆಡುತ್ತಿರುವ ಭಾರತದ ವಿಷ್ಣುವರ್ಧನ್-ಎನ್. ಶ್ರೀರಾಮ್ ಬಾಲಾಜಿ 2ನೇ ಸುತ್ತು ತಲುಪಿದ್ದಾರೆ.