ಕ್ಯಾನ್ಸರ್ ಗೆದ್ದ ಬಳಿಕ ಎರಡನೇ ಗ್ರ್ಯಾನ್‌ಸ್ಲಾಮ್ ಕೂಟ ಆಡುತ್ತಿರುವ ಸ್ಪೇನಿನ ಕಾರ್ಲಾ ಸೂರೆಜ್ ನವಾರೊ ಮೊದಲ ಸೆಟ್ 6-1 ಅಂತರದಿಂದ ಸೋತರೂ ಟ್ರೈ ಬೇಕರ್‌ಗೆ ಸಾಗಿದ ದ್ವಿತೀಯ ಸೆಟ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಪ್ರಬಲ ಹೋರಾಟವೊಂದನ್ನು ಜಾರಿಯಲ್ಲಿರಿಸಿದರು. ಆದರೆ ನಿರ್ಣಾಯಕ ಸೆಟ್‌ನಲ್ಲಿ ಬಾರ್ಟಿ ಅವರ ಬಲಿಷ್ಠ ಸರ್ವ್‌ಗಳ ಮುಂದೆ ಸಂಪೂರ್ಣ ವಿಫಲರಾಗಿ ಶರಣಾದರು. ಬಾರ್ಟಿ ಗೆಲುವಿನ ಅಂತರ 6-1, 6-7(7-1), 6-1.
Advertisement
ಮತ್ತೂಂದು ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ವೀನಸ್ ವಿಲಿಯಮ್ಸ್ ಮತ್ತು ಗೀಸ್‌ನ ಮರಿಯಾ ಸಕ್ಕರಿ ಗೆಲುವಿನ ಮುನ್ನಡೆ ಸಾಧಿಸಿದ್ದಾರೆ.
Related Articles
ಕ್ಯಾರೊಲಿನಾ ಪ್ಲಿಸ್ಕೋವಾ ಸ್ಲೊವೇನಿಯಾದ ತಮಾರ ಜಿದನ್ಸೆಕ್ ಅವರನ್ನು 7-5, 6-4 ಅಂತರದಿಂದ ಮಣಿಸಿ ಮುಂದಿನ ಹಂತಕ್ಕೆ ಲಗ್ಗೆ ಇರಿಸಿದ್ದಾರೆ.
Advertisement
ಜ್ವೆರೇವ್ ಗೆಲುವುಪುರುಷರ ಸಿಂಗಲ್ಸ್ ವಿಭಾಗದಲ್ಲಿ 4ನೇ ಶ್ರೇಯಾಂಕದ ಅಲೆಕ್ಸಾಂಡರ್ ಜ್ವೆರೇವ್ ಶ್ರೇಯಾಂಕ ರಹಿತ ಆಟಗಾರನಾದ ಟಾಲನ್ ಗ್ರಿಕ್ಸ್ ಪೋರ್ ವಿರುದ್ಧ 6-3, 6-4, 6-1 ಅಂತರದ ನೇರ ಸೆಟ್‌ಗಳ ಸುಲಭ ಗೆಲುವು ಕಂಡಿದ್ದಾರೆ.