Advertisement

ಸ್ವಾತಂತ್ರ್ಯೋತ್ಸವ- ಒಂದು ಲಕ್ಷ ಸಣ್ಣ ಪ್ರಕರಣಗಳನ್ನು ಹಿಂಪಡೆದ ಅಸ್ಸಾಂ ಸರ್ಕಾರ: ಸಿಎಂ ಶರ್ಮಾ

02:44 PM Aug 15, 2022 | Team Udayavani |

ಅಸ್ಸಾಂ: ಕೆಳಸ್ತರದ ನ್ಯಾಯಾಲಯದಲ್ಲಿನ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ಸೋಮವಾರ (ಆಗಸ್ಟ್ 15) ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸೋಶಿಯಲ್ ಮೀಡಿಯಾ ಪೋಸ್ಟ್ ಸೇರಿದಂತೆ ಸುಮಾರು ಒಂದು ಲಕ್ಷ ಸಣ್ಣ ಪ್ರಕರಣಗಳನ್ನು ಹಿಂಪಡೆಯಲಾಗುವುದು ಎಂದು ಘೋಷಿಸಿದ್ದಾರೆ.

Advertisement

ಇದನ್ನೂ ಓದಿ:ಕಲಬುರಗಿ ವಿಮಾನ ನಿಲ್ದಾಣ ಬಳಿ 1000 ಎಕರೆ ಜಮೀನು ಭೂಸ್ವಾಧೀನ: ಸಚಿವ ನಿರಾಣಿ

ರಾಜಧಾನಿ ಗುವಾಹಟಿಯಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶರ್ಮಾ ಅವರು, ರಾಜ್ಯದ ಕೆಳಸ್ತರದ ನ್ಯಾಯಾಲಯದಲ್ಲಿ ಸುಮಾರು 4 ಲಕ್ಷ ಪ್ರಕರಣಗಳು ವಿಚಾರಣೆಗೆ ಬಾಕಿ ಇದೆ. ಈ ಹಿನ್ನೆಲೆಯಲ್ಲಿ 2021ರ ಆಗಸ್ಟ್ 14ರ ಮಧ್ಯರಾತ್ರಿಯ ಮೊದಲು ದಾಖಲಾದ ಸಣ್ಣ ಪ್ರಕರಣಗಳನ್ನು ಹಿಂಪಡೆಯಲು ನಿರ್ಧರಿಸಿರುವುದಾಗಿ ಮಾಹಿತಿ ನೀಡಿದ್ದಾರೆ.

ಸುಮಾರು ಒಂದು ಲಕ್ಷ ಸಣ್ಣ ಪ್ರಕರಣಗಳನ್ನು ಹಿಂಪಡೆಯುವ ಮೂಲಕ  ಅತ್ಯಾಚಾರ,  ಕೊಲೆ ಸೇರಿದಂತೆ ಬಾಕಿ ಉಳಿದಿರುವ ಗಂಭೀರ ಅಪರಾಧ ಪ್ರಕರಣಗಳ ವಿಚಾರಣೆ ನಡೆಸಲು ನ್ಯಾಯಾಲಯಗಳಿಗೆ ಸಹಾಯಕವಾಗಲಿದೆ ಎಂದು ಶರ್ಮಾ ಹೇಳಿದರು.

ಈ ಸಂದರ್ಭದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಮಹನೀಯರಿಗೆ ಮುಖ್ಯಮಂತ್ರಿ ಶರ್ಮಾ ಗೌರವ ಸಲ್ಲಿಸಿದರು. ಮುಂದಿನ ಪೀಳಿಗೆಗೆ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದ ಮಹತ್ವ ಸಾರುವ ನೆಲೆಯಲ್ಲಿ ಸುಮಾರು ಒಂದು ಸಾವಿರ ಯುವಕರು ಅಂಡಮಾನ್ ನಲ್ಲಿರುವ ಸೆಲ್ಯೂಲರ್ ಜೈಲಿಗೆ ಭೇಟಿ ನೀಡಿರುವುದಾಗಿ ತಿಳಿಸಿದರು.

Advertisement

ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಈ ವರ್ಷ ಶೈಕ್ಷಣಿಕ ಪ್ರವಾಸದಲ್ಲಿ ರಾಜ್ಯ ಸರ್ಕಾರ ಒಂದು ಸಾವಿರ ಯುವಕರನ್ನು ಅಂಡಮಾನ್ ಜೈಲು ವೀಕ್ಷಣೆ ಮಾಡುವ ಅವಕಾಶ ಕಲ್ಪಿಸಿಕೊಟ್ಟಿರುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next