Advertisement

ಕೋಮು ಸೌಹಾರ್ದತೆ ಹಾಳು ಮಾಡುವವರ ಮೇಲೆ ಉಗ್ರ ಕ್ರಮ: ಮಾಜಿ ಸಿಎಂ ಯಡಿಯೂರಪ್ಪ

01:55 PM Apr 18, 2022 | Team Udayavani |

ಶಿವಮೊಗ್ಗ: ಹುಬ್ಬಳ್ಳಿ ಗಲಭೆಗೆ ಕಾರಣರಾದವರ ಬಹುತೇಕರ ಬಂಧನವಾಗಿದೆ. ಸಮಗ್ರವಾಗಿ ತನಿಖೆ ಆಗಬೇಕು. ಗಲಭೆ ಉಂಟು ಮಾಡುತವವರು, ಕೋಮು ಸೌಹಾರ್ದತೆ ಹಾಳು ಮಾಡಲು ಪ್ರಯತ್ನ ಮಾಡುವವರ ಮೇಲೆ ಉಗ್ರವಾದ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದರು.

Advertisement

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಗಳು ಸೂಕ್ತವಾದ ಬಿಗಿಯಾದ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಮುಂದೆ ಇಂತಹ ಘಟನೆಗಳು ನಡೆಯಬಾರದು. ಆ ರೀತಿಯ ಬಿಗಿ ಕ್ರಮ ಕೈಗೊಂಡು, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು ಎಂದರು.

ಇದನ್ನೂ ಓದಿ:ರಾಮನ ಹೆಸರಲ್ಲಿ ರಾವಣ ರಾಜ್ಯ ಮಾಡಲು ಹೊರಟವರಿಂದ ನಾನೇನು ಕಲಿಯಬೇಕಿಲ್ಲ: ಹೆಚ್ ಡಿಕೆ

ಪೊಲೀಸರ ಮೇಲೆ, ಪೊಲೀಸ್ ವಾಹನದ ಮೇಲೆ ಹಲ್ಲೆ ಮಾಡಿದ್ದಾರೆಂದರೆ ಗೂಂಡಾ ಪ್ರವೃತ್ತಿ ಯಾವ ಮಟ್ಟಕ್ಕಿದೆ ಎಂದು ತಿಳಿಯುತ್ತದೆ. ನಮ್ಮ ರಕ್ಷಣೆ ಮಾಡುವ ಪೊಲೀಸರ ಮೇಲೆ ಕೈ ಮಾಡುವುದು, ಠಾಣೆಗೆ ನುಗ್ಗುವ ಪ್ರಯತ್ನ ಮಾಡುವುದು ಅಕ್ಷಮ್ಯ ಅಪರಾಧ. ಅದಕ್ಕೆ ತಕ್ಕ ಶಿಕ್ಷೆಯಾಗುತ್ತದೆ. ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಬಿಎಸ್ ವೈ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next