Advertisement

2019ರ ವಿಶ್ವಕಪ್‌ ಬಳಿಕ ಯುವರಾಜ್‌ ನಿವೃತ್ತಿ

07:25 AM Apr 24, 2018 | Team Udayavani |

ಹೊಸದಿಲ್ಲಿ: ಇಂಗ್ಲೆಂಡ್‌ ಮತ್ತು ವೇಲ್ಸ್‌ನಲ್ಲಿ 2019ರಲ್ಲಿ ನಡೆಯುವ ವಿಶ್ವಕಪ್‌ ಬಳಿಕ ಕ್ರಿಕೆಟ್‌ ಬಾಳ್ವೆಯಿಂದ ನಿವೃತ್ತಿಯಾಗುವೆ ಎಂದು ಯುವರಾಜ್‌ ಸಿಂಗ್‌ ಹೇಳಿದ್ದಾರೆ. ಅವರು 2017ರ ಜೂನ್‌ನಲ್ಲಿ ದೇಶದ ಪರ ತನ್ನ ಈ ಹಿಂದಿನ ಏಕದಿನ ಪಂದ್ಯವನ್ನಾಡಿದ್ದರು.

Advertisement

2019ರ ತನಕ ಯಾವುದೇ ಕ್ರಿಕೆಟ್‌ ಆಟ ಆಡಲು ಸಿಕ್ಕಿದರೆ ಆಡುತ್ತೇನೆ. 2019ರ ವರ್ಷ ಮುಗಿಯುತ್ತಲೇ ನಿವೃತ್ತಿಯ ನಿರ್ಧಾರ ಮಾಡಲಿದ್ದೇನೆ ಎಂದು 36ರ ಹರೆಯದ ಯುವರಾಜ್‌ ತಿಳಿಸಿದ್ದಾರೆ.

ಪ್ರತಿಯೊಬ್ಬರೂ ಕೂಡ ಒಂದು ಹಂತದಲ್ಲಿ ನಿವೃತ್ತಿ ಪ್ರಕಟಿಸಲೇಬೇಕಾಗುತ್ತದೆ. 2000ದಿಂದ ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡುತ್ತಿದ್ದೇನೆ. ಸುಮಾರು 17ರಿಂದ 18 ವರ್ಷ ಸಾಗಿದೆ. ಹಾಗಾಗಿ 2019ರ ಬಳಿಕ ಖಂಡಿತವಾಗಿಯೂ ನಿವೃತ್ತಿ ಘೋಷಿಸಲಿದ್ದೇನೆ ಎಂದು ಹೇಳಿದರು.

ಐಪಿಎಲ್‌ನಲ್ಲಿ ಪ್ಲೇ ಆಫ್ಗೆ ತೇರ್ಗಡೆಯಾಗುವುದು ನಮ್ಮ ತತ್‌ಕ್ಷಣದ ಗುರಿಯಾಗಿದೆ. ಈ ವರ್ಷ ನಮಗೆ ಶ್ರೇಷ್ಠ ತಂಡವೇ ಸಿಕ್ಕಿದೆ. ಶಕ್ತಿಶಾಲಿಯಾಗಿ ಬ್ಯಾಟಿಂಗ್‌ ಮಾಡುವ ಆಟಗಾರರು ನಮ್ಮಲ್ಲಿದ್ದಾರೆ. ಹಾಗಾಗಿ ಅಂತಿಮ ನಾಲ್ಕರ ಸುತ್ತಿಗೇರುವ ಆತ್ಮವಿಶ್ವಾಸವಿದೆ. ಒಂದು ವೇಳೆ ತೇರ್ಗಡೆಯಾದರೆ ಪ್ರಶಸ್ತಿ ಗೆಲ್ಲಲು ಪ್ರಯತ್ನಿಸಲಿದ್ದೇವೆ ಎಂದು ಯುವರಾಜ್‌ ಹೇಳಿದರು.

ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಪಂಜಾಬ್‌ ತಂಡ ಒಟ್ಟು ಎಂಟಂಕ ಗಳಿಸಿದ್ದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಚೆನ್ನೈ ಕೂಡ ಎಂಟಂಕ ಹೊಂದಿದೆ. ಆದರೆ ರನ್‌ಧಾರಣೆಯ ಆಧಾರದಲ್ಲಿ ಚೆನ್ನೈ ಅಗ್ರಸ್ಥಾನದಲ್ಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next