ಬೆಂಗಳೂರು: ಹುಕ್ಕೇರಿಯಲ್ಲಿ ಅ.21 ರಂದು ಲಿಂಗಾಯಿತ ಪಂಚಮಸಾಲಿ ಬೃಹತ್ ಸಮಾವೇಶ ನಡೆಯಲ್ಲಿದ್ದು ಅಷ್ಟರೊಳಗೆ ಸರ್ಕಾರ ಸರ್ವ ಪಕ್ಷಗಳ ಸಭೆ ಕರೆದು ಲಿಂಗಾಯತ ಪಂಚಮಸಾಲಿಗೆ 2ಎ ಮೀಸಲಾತಿ ಸಂಬಂಧ ಅಂತಿಮ ತೀರ್ಮಾನ ಕೈಗೊಳ್ಳಬೇಕು. ಇಲ್ಲದೆ ಇದ್ದರೆ ಹುಕ್ಕೇರಿ ಸಮಾವೇಶದಲ್ಲಿ ವಿಧಾನಸೌಧ ಮುತ್ತಿಗೆಗೆ ಕರೆ ನೀಡುವುದಾಗಿ ಪಂಚಮಸಾಲಿ ಮಠದ ಪೀಠಾಧ್ಯಕ್ಷ ಬಸವ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದ್ದಾರೆ
ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಮಾಡುತ್ತಿರುವ ಹೋರಾಟ 2 ವರ್ಷ ತಲುಪಿದೆ. ಆದರೂ ಸರ್ಕಾರ ಯಾವುದೇ ತೀರ್ಮಾನ ಕೈಗೊಳ್ಳದೆ ನುಣಿಚಿಕೊಳ್ಳುತ್ತಿದೆ ಎಂದರು.
ಇದನ್ನೂ ಓದಿ:ಬಿಜೆಪಿಯವರದ್ದು ಸುಳ್ಳು ಹೇಳುವ ಸಂಕಲ್ಪ ಯಾತ್ರೆ: ಸಿದ್ದರಾಮಯ್ಯ ಟೀಕೆ
ಈಗಾಗಲೇ ಸರ್ಕಾರ ಲಿಂಗಾಯತ ಸಮುದಾಯದ 31 ಉಪ ಪಂಗಡಗಳಿಗೆ 2 ಎ ಮೀಸಲಾತಿ ಸ್ಥಾನ ನೀಡಿದೆ. ಅದೇ ರೀತಿಯಲ್ಲಿ ಸರ್ಕಾರ ನಮ್ಮ ಸಮುದಾಯಕ್ಕೂ ನೀಡಲಿ ಎಂಬುವುದು ನಮ್ಮ ಹಕ್ಕೊತ್ತಾಯವಾಗಿದೆ ಎಂದು ಹೇಳಿದರು.
ಹುಕ್ಕೇರಿ ಸಮಾವೇಶದಲ್ಲಿ ಸುಮಾರು 1 ಲಕ್ಷ ಜನ ಸೇರಲಿದ್ದಾರೆ. ಸರ್ಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳದೆ ಹೋದರೆ, ವಿಧಾನಸೌಧದ ಮುಂದೆ 25 ಲಕ್ಷ ಪಂಚಮಸಾಲಿ ಲಿಂಗಾಯತರನ್ನು ಸೇರಿಸಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.