ಹುಬ್ಬಳ್ಳಿ: ಮುಂಬರುವ ವಿಧಾನಸಭೆ ಕಾಂಗ್ರೆಸ್ ಮಾದರಿಯಲ್ಲಿ ಕೀಳುಮಟ್ಟದ ಹಾಗೂ ನಕಾರಾತ್ಮಕ ವಿಚಾರದೊಂದಿಗೆ ಪ್ರಚಾರಕ್ಕಿಳಿಯದೆ ರಾಜ್ಯ- ಕೇಂದ್ರ ಸರಕಾರಗಳ ಅಭಿವೃದ್ಧಿ ಯೋಜನೆಗಳ ಆಧಾರದಲ್ಲಿ ಚುನಾವಣೆಗೆ ಹೋಗುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ದಶಕಗಳಿಂದ ವಿಷಯಾಧಾರಿತ ಚುನಾವಣೆ ಪ್ರಚಾರ ಇಲ್ಲದಂತಾಗಿದೆ ಎಂಬುದು ನಿಜ. ಕಾಂಗ್ರೆಸ್ ನವರು ಸೋಲಿನ ಹತಾಶೆಯಿಂದ ನಕಾರಾತ್ಮಕ ವಿಷಯಗಳ ಪ್ರಚಾರಕ್ಕಿಳಿದಿದ್ದಾರೆ. ನನ್ನ ವಿರುದ್ಧ ಕೀಳುಮಟ್ಟದ ಆರೋಪಗಳನ್ನು ಮಾಡಿದಾಗಲು ನಾನು ಅವರ ಮಟ್ಡಕ್ಕೆ ಹೋಗಿ ಪ್ರತಿಕ್ರಿಯೆ ನೀಡಿಲ್ಲ. ಕಾಂಗ್ರೆಸ್ ನವರು ಇನ್ನೇನು ಅಧಿಕಾರಕ್ಕೆ ಬಂದೇ ಬಿಟ್ಟೆವು ಎಂಬ ಮನೋಸ್ಥಿತಿಯಲ್ಲಿದ್ದಾರೆ ಆದರೆ, ವಾಸ್ತವ ಬೇರೆ ಇದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದರಲ್ಲಿ ಯಾವ ಸಂದೇಹ ಇಲ್ಲ ಎಂದರು.
ಇದನ್ನೂ ಓದಿ:ಪಡುಮಲೆಯಲ್ಲೊಂದು ಕೌತುಕ; ತೆಂಗಿನ ನೀರು ಬಿದ್ದರೂ ಪ್ರಜ್ವಲಿಸಿದ ಆರತಿ!
ಕಾಂಗ್ರೆಸ್ ಪಕ್ಷ ಅತ್ಯಂತ ಕೀಳುಮಟ್ಟದ ಭಾಷೆ ಬಳಕೆ ನೋವು ತರಿಸುತ್ತಿದೆ ಕರ್ನಾಟಕ ಚುನಾವಣೆ ಇತಿಹಾಸಕ್ಕೆ ಅದರದ್ದೆ ಮಹತ್ವವಿದೆ, ಅದಕ್ಕೆ ಚ್ಯುತಿ ತರುವ ಕಾರ್ಯಕ್ಕೆ ಕಾಂಗ್ರೆಸ್ ಮುಂದಾಗಿದೆ ಎಂದರು.
ಅಮಿತ್ ಶಾ ಬಂದಿದ್ದು ಕಾರ್ಯಕರ್ತರಿಗೆ ದೊಡ್ಡ ಹುಮ್ಮಸ್ಸು ತಂದಿದೆ. ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದೆ ಎಂಬುದು ನಮ್ಮ ಕಾರ್ಯಕ್ರಮಗಳಿಗೆ ಜನ ಸೇರುತ್ತಿರುವುದೇ ಸಾಕ್ಷಿ ಎಂದರು.