Advertisement

2019ರ ಲೋಕಸಭೆಗೆ ಸ್ಪರ್ಧಿಸುವುದಿಲ್ಲ : ರಾಹುಲ್‌ಗೆ ಪ್ರಿಯಾ ದತ್‌ ಪತ್ರ

06:37 AM Jan 07, 2019 | Team Udayavani |

ಮುಂಬಯಿ : ‘2019ರ ಲೋಕಸಭಾ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ’ ಎಂದು ಮಾಜಿ ಸಂಸದೆ ಪ್ರಿಯಾ ದತ್‌ ಅವರು ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿಗೆ ತಿಳಿಸಿದ್ದು ಕಾಂಗ್ರೆಸ್‌ ಪಕ್ಷಕ್ಕೆ ಇದೊಂದು ಭಾರೀ ಹೊಡೆತವೆಂದು ತಿಳಿಯಲಾಗಿದೆ.

Advertisement

‘ಕಾಂಗ್ರೆಸ್‌ ಪಕ್ಷದ ಮುಂಬಯಿ ಘಟಕದೊಳಗೆ ಪರಸ್ಪರ ವಿರೋಧಿ ಬಣಗಳ ನಡುವಿನ ಕಚ್ಚಾಟಕ್ಕೆ ಬೇಸತ್ತು ನಾನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ’ ಎಂದು ಪ್ರಿಯಾ ದತ್‌ ಅವರು ರಾಹುಲ್‌ ಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

ಬಾಲಿವುಡ್‌ ಹಿರಿಯ ನಟನಾಗಿ, ರಾಜಕಾರಣಿಯಾಗಿ ಪರಿವರ್ತಿತರಾಗಿದ್ದ ದಿವಂತ ಸುನೀಲ್‌ ದತ್‌ ಅವರ ಪುತ್ರಿಯಾಗಿರುವ ಪ್ರಿಯಾ ದತ್‌, ಕಾಂಗ್ರೆಸ್‌ ಪಕ್ಷದೊಳಗಿನ ಬಣ ಸಂಘರ್ಷವನ್ನು ಪ್ರಶ್ನಿಸಿರುವ ಮೊದಲ ಮಾಜಿ ಕಾಂಗ್ರೆಸ್‌ ಸಂಸದೆಯಾಗಿದ್ದಾರೆ. 

2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ  ಸೋಲನುಭವಿಸಿದ್ದ ಸಂದರ್ಭದಲ್ಲಿ ‘ಪಕ್ಷದ ಸೋಲಿಗೆ ಆಂತರಿಕ ವ್ಯಾದಿಯೇ ಕಾರಣ’ ಎಂದು ಟೀಕಿಸಿದ್ದರು. 

‘ಕಾಂಗ್ರೆಸ್‌ ಪಕ್ಷದ ನಿರಂತರ ಸೋಲುಗಳಿಗೆ ಅದರ ಅಂತರಿಕ ವ್ಯಾದಿಯೇ ಕಾರಣ. ಅದಕ್ಕೆ ಸೂಕ್ತ ಚಿಕಿತ್ಸೆ ನೀಡುವ ಅಗತ್ಯವಿದೆ. ಇಲ್ಲದಿದ್ದರೆ ಈ ರೀತಿಯ ಸೋಲುಗಳು ಹೀಗೆಯೇ ಮುಂದವರಿಯಲಿವೆ’ ಎಂದು ಪ್ರಿಯಾ ದತ್‌ ಟ್ವಿಟರ್‌ನಲ್ಲಿ ಅಂದಿನ ದಿನಗಳಲ್ಲಿ ಬರೆದಿದ್ದರು.

Advertisement

ಹಾಗಿದ್ದರೂ ಪ್ರಿಯಾ ದತ್‌ ಅವರು ಅಂದಿನ ದಿನಗಳಲ್ಲಿ ಕಾಂಗ್ರೆಸ್‌ ಉಪಾಧ್ಯಕ್ಷರಾಗಿದ್ದ ರಾಹುಲ್‌ ಗಾಂಧಿ ಅವರನ್ನು “ಉತ್ತಮ ನಾಯಕ’ ಎಂದು ಹೊಗಳಿದ್ದರಲ್ಲದೆ, “ಪಕ್ಷವನ್ನು ನಿರ್ದಿಷ್ಟ ದಿಕ್ಕಿನೆಡೆಗೆ ಒಯ್ಯುವಲ್ಲಿ ಅವರು ಪ್ರಯತ್ನಶೀಲರಾಗಿದ್ದಾರೆ” ಎಂದು ಪ್ರಶಂಸಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next