Advertisement
ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಎಸ್.ಕೆ ಕೌಲ್, ಎಸ್.ಆರ್ ಭಟ್, ಹಿಮಾ ಕೊಹ್ಲಿ ಮತ್ತು ಪಿ.ಎಸ್ ನರಸಿಂಹ ಅವರನ್ನೊಳಗೊಂಡ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಪ್ರಕರಣದ ವಿಚಾರಣೆ ನಡೆಸುತ್ತಿದೆ. ಸಾಲಿಟರಿ ಜನರಲ್ ತುಷಾರ್ ಮೆಹ್ತಾ ಅವರು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದಾರೆ.
Related Articles
Advertisement
ವಾದದ ಸಮಯದಲ್ಲಿ, ಎಸ್ ಜಿ ತುಷಾರ್ ಮೆಹ್ತಾ ಅವರು ‘ಐದು ಕಲಿತ ವ್ಯಕ್ತಿಗಳು’ ಇಡೀ ರಾಷ್ಟ್ರದ ಅಭಿಪ್ರಾಯ ನಿರ್ಧರಿಸಲು ಸಾಧ್ಯವಿಲ್ಲ ಮತ್ತು ಮದುವೆಯ ವಿಚಾರದಲ್ಲಿ ‘ಹೊಸ ಸಾಮಾಜಿಕ-ಕಾನೂನು ಸಂಬಂಧ’ವನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಚಂದ್ರಚೂಡ್ ಅವರು ‘ನಾವು ಇಲ್ಲಿ ಉಸ್ತುವಾರಿ ವಹಿಸಿದ್ದೇವೆ’ ಮತ್ತು ‘ನ್ಯಾಯಮೂರ್ತಿಗಳಿಗೆ ನ್ಯಾಯಾಲಯದ ಕಲಾಪಗಳನ್ನು ಹೇಗೆ ನಡೆಸಬೇಕೆಂದು ಸರ್ಕಾರ ಹೇಳಲು ಸಾಧ್ಯವಿಲ್ಲ’ ಎಂದು ಹೇಳಿದರು.
ಪುರುಷ ಮತ್ತು ಮಹಿಳೆಯ ನಡುವೆ ಮಾತ್ರ ವಿವಾಹ ನಡೆಯಬಹುದು ಎಂಬ ಶಾಸನಬದ್ಧ ಉದ್ದೇಶವಿದೆ ಎಂದು ಮೆಹ್ತಾ ಹೇಳಿದರು.
ವಿವಾಹದ ಸಂಸ್ಥೆಯು ವೈಯಕ್ತಿಕ ಕಾನೂನುಗಳ ಮೇಲೆ ಪರಿಣಾಮ ಬೀರುತ್ತದೆ, ಹಿಂದೂ ವಿವಾಹ ಕಾಯಿದೆಯು ಕ್ರೋಡೀಕರಿಸಿದ ವೈಯಕ್ತಿಕ ಕಾನೂನು ಮತ್ತು ಇಸ್ಲಾಂ ತನ್ನದೇ ಆದ ವೈಯಕ್ತಿಕ ಕಾನೂನನ್ನು ಹೊಂದಿದೆ ಮತ್ತು ಅವುಗಳಲ್ಲಿ ಒಂದು ಭಾಗವನ್ನು ಕ್ರೋಡೀಕರಿಸಲಾಗಿಲ್ಲ ಎಂದು ಮೆಹ್ತಾ ಹೇಳಿದರು.