Advertisement

ಗೋವಾವನ್ನು ಭಾರತದ ಪ್ರವಾಸಿ ರಾಜಧಾನಿಯನ್ನಾಗಿ ಮಾಡಲು ಸರ್ಕಾರದಿಂದ ಹೆಚ್ಚಿನ ಪ್ರಯತ್ನ: ಸಾವಂತ್

05:43 PM Apr 05, 2022 | Team Udayavani |

ಪಣಜಿ: ದೇಶ-ವಿದೇಶಿ ಪ್ರವಾಸಿಗರು ಇಷ್ಟಪಡುವ ಗೋವಾ ರಾಜ್ಯವನ್ನು ಭಾರತದ ಪ್ರವಾಸಿ ರಾಜಧಾನಿಯನ್ನಾಗಿ ಮಾಡಲಾಗುವುದು. ಈ ಕುರಿತು ಸರ್ಕಾರವು ರಾಜ್ಯದಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದರು.

Advertisement

ಪಣಜಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಉಪಸ್ಥಿತರಿದ್ದು ಮಾತನಾಡಿದ ಅವರು- ಭಾರತದ ಪ್ರವಾಸಿ ರಾಜಧಾನಿಯಾಗುವ ಎಲ್ಲ ಗುಣಲಕ್ಷಣಗಳು ಗೋವಾದಲ್ಲಿವೆ. ಆದರೆ ಈ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಪ್ರಯತ್ನ ನಡೆಸಲಿದೆ. ಗೋವಾದಲ್ಲಿ ಪ್ರವಾಸಿ ಕ್ಷೇತ್ರವು ಭಾರಿ ದೊಡ್ಡದಿದೆ. ಇಲ್ಲಿ ಪ್ರವಾಸೋದ್ಯಮ ಸಂಬಂಧಿತ ವಿವಿಧ ಉತ್ಸವಗಳನ್ನು ನಡೆಸಲಾಗುತ್ತದೆ. ಗೋವಾದಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಹಲವು ಮೂಲಭೂತ ಸೌಲಭ್ಯಗಳಿದ್ದು, ಇನ್ನೂ ಹೆಚ್ಚಿನ ಸೌಲಭ್ಯ ಕಲ್ಪಿಸಿ ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಸಾವಂತ್ ನುಡಿದರು.

ಈ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಪ್ರಯತ್ನ ನಡೆಸಲಿದೆ. ಗೋವಾದ ಪ್ರವಾಸೋದ್ಯಮ ದೃಷ್ಠಿಯಲ್ಲಿ ಹೆಚ್ಚು ಪ್ರಮೋಟ ಮಾಡುವ ಅಗತ್ಯವಿದೆ. ಇದಕ್ಕಾಗಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next