Advertisement
2014ರಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕನಕ ಭವನಕ್ಕೆ ಅಡಿಗಲ್ಲು ಕಾರ್ಯಕ್ರಮಕ್ಕೆ ಆಗಮಿಸುವ ಸಂಧರ್ಭದಲ್ಲಿ ಪಟ್ಟಣದ ಮುಖ್ಯ ರಸ್ತೆ ಅರೆ-ಬರೆ ಅಭಿವೃಧ್ಧಿಯಾಗಿತ್ತು. ಆಗ ಅಭಿವೃದ್ಧಿಗೊಂಡ ರಸ್ತೆ ಮತ್ತೆ ಅಭಿವೃದ್ದಿಯಾಗಿರಲಿಲ್ಲ. ಕಲ್ಯಾಣ ಕರ್ನಾಟಕ ಜನೋತ್ಸವ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬಪಮ್ಮಾಯಿ ಅವರು, ಅ.12ಕ್ಕೆ ಕುಷ್ಟಗಿಗೆ ಆಗಮಿಸುವ ದಿನಾಂಕ ನಿಗದಿಯಾಗಿದ್ದು ಈ ಕಾರಣದಿಂದಾರೂ ರಸ್ತೆಯ ಅಭಿವೃದ್ಧಿಯಾದೀತೆ? ಎನ್ನುವ ಪ್ರಶ್ನೆ ವ್ಯಕ್ತವಾಗಿದೆ.
Related Articles
Advertisement
ಸಾಮಾಜಿಕ ಜಾಲತಾಣದಲ್ಲಿ ಅಣಕಈ ಪರಿಸ್ಥಿತಿಯಲ್ಲಿ ಮುಖ್ಯ ರಸ್ತೆಯ ದುಸ್ಥಿತಿಯನ್ನು ಯಾರೂ ಕೇಳದಂತಾಗಿದೆ. ಈ ರಸ್ತೆಯ ದುಸ್ಥಿತಿಯ ಬಗ್ಗೆ ಸಂಘ ಸಂಸ್ಥೆಗಳು ರಸ್ತೆಗೆ ಇಳಿದು ಪ್ರತಿಭಟಿಸಿವೆ ಸಾಮಾಜಿಕ ಜಾಲತಾಣಗಳಲ್ಲಿ ರಸ್ತೆಯ ಅವಸ್ಥೆಯ ಬಗ್ಗೆ ಪ್ರಶ್ನಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ಶಿವಕುಮಾರ ಅರಾಳಗೌಡ್ರು ಎಂಬುವರು ಕುಷ್ಟಗಿ ನಾಗರೀಕರು ಕೃಷ್ಣಗಿರಿ ಕಾಲೋನಿಗೆ ಹೋಗುವವರು ಅಂಡರಪಾಸ್ ನಲ್ಲಿ ಜಲಮಾರ್ಗದ ಮೂಲಕ ಬಸ್ ನಿಲ್ದಾಣದಿಂದ ಬಸವೇಶ್ವರ ವೃತ್ತಕ್ಕೆ ವಾಯು ಮಾರ್ಗದ ಮೂಲಕ ಸಂಚರಿಸುವ (ಕರ್ಮ) ಸೌಭಾಗ್ಯ ಎಂದು ಪೋಸ್ಟ್ ಮಾಡಿ ಪ್ರಸ್ತುತ ರಸ್ತೆಯ ಅವ್ಯವಸ್ಥೆಯ ಅಣಕವಾಡಿರುವುದು ಚರ್ಚೆಗೆ ಗ್ರಾಸವಾಗಿದೆ.