ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಸದ್ಯ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಅಲ್ಲದೆ ಪ್ರಚಾರ ಕಾರ್ಯ ಚುರುಕಿನಿಂದ ಸಾಗುತ್ತಿದೆ. ಆದ್ರೆ ಪ್ರಚಾರದ ವೇಳೆ ಟಿಎಂಸಿ ಶಾಸಕ ಹಮಿದುಲ್ ರಹಮನ್ ಮತದಾರರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಬಿಜೆಪಿಯು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಹಮಿದುಲ್ ರಹಮಾನ್ ಮಾರ್ಚ್ 2 ರಂದು ನಡೆದ ಪ್ರಚಾರದಲ್ಲಿ ಟಿಎಂಸಿಗೆ ಮತಹಾಕದವರನ್ನ ಚುನಾವಣೆಯ ನಂತರ ನೋಡಿಕೊಳ್ಳುತ್ತೇವೆ ಎಂಬ ದಾಟಿಯಲ್ಲಿ ಭಾಷಣ ಮಾಡಿದ್ದಾರೆ.
ಭಾಷಣೆದ ವೇಳೆ ಮಾತನಾಡಿರು ಹಮಿದುಲ್, ಉಪ್ಪನ್ನು ತಿಂದು ದ್ರೋಹ ಮಾಡಬಾರದು ಎಂದು ನಮ್ಮ ಪೂರ್ವಜರು ಹೇಳಿದ್ದಾರೆ. ಮತದಾನದ ನಂತ್ರ ನಮಗೆ ಮೋಸ ಮಾಡಿದವರನ್ನು ಭೇಟಿಯಾಗುತ್ತೇವೆ. ಅಪ್ರಾಮಾಣಿಕ ಮತದಾರರ ಜೊತೆ ಆಟ ಆಡಲಾಗುತ್ತದೆ ಎಂದಿದ್ದಾರೆ.
ಹಮಿದುಲ್ ಹೇಳಿಕೆಯನ್ನು ವಿರೋಧಿಸಿರುವ ಬಿಜೆಪಿ ದೆಹಲಿಯ ಚುನಾವಣಾ ಆಯೋಗಕ್ಕೆ ತೆರಳಿ ದೂರು ನೀಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ. ಬಂಗಾಳ ಬಿಜೆಪಿ ಉಸ್ತುವಾರಿ ಅಮಿತ್ ಮಾಳವಿಯ, ಟಿಎಂಸಿಯು ಚುನಾವಣೆಯ ಮುಂಚೆಯೇ ಮತದಾರರಿಗೆ ಬೆದರಿಕೆ ಹಾಕುತ್ತಿದೆ. ತಮಗೆ ಮತ ಹಾಕದಿದ್ದರೆ ನಿಮ್ಮ ಜೊತೆ ಆಟ ಆಡುತ್ತೇವೆ ಎಂದು ಹೇಳಿರುವುದು ಮುಂದಿನ ಹಿಂಸಾಚಾರದ ಮುನ್ಸೂಚನೆ ಎಂದಿದ್ದಾರೆ.