Advertisement

ಭಾರತದಲ್ಲಿ ನ್ಯಾಯೋಚಿತ ಚುನಾವಣೆಗೆ ಸಕಲ ಯತ್ನ: ಝುಕರ್‌ಬರ್ಗ್‌

03:45 PM Apr 11, 2018 | udayavani editorial |

ವಾಷಿಂಗ್ಟನ್‌ : ಭಾರತ ಮತ್ತು ಇತರ ದೇಶಗಳಲ್ಲಿ ನ್ಯಾಯೋಚಿತ ಚುನಾವಣೆಗಳು ನಡೆಯುವಂತಾಗಲು ತನ್ನ ಕಂಪೆನಿ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಿದೆ ಎಂದು 33ರ ಹರೆಯದ ಫೇಸ್‌ ಬುಕ್‌ ಸ್ಥಾಪಕ ಮಾರ್ಕ್‌ ಝುಕರ್‌ಬರ್ಗ್‌ ಹೇಳಿದ್ದಾರೆ. 

Advertisement

ಇಡಿಯ ಜಗತ್ತಿಗೆ 2018 ಬಹಳ ಮುಖ್ಯವಾದ ವರ್ಷ. ಏಕೆಂದರೆ ಈ ವರ್ಷ ಭಾರತ, ಪಾಕಿಸ್ಥಾನ ಮತ್ತು ಇತರ ಅನೇಕ ದೇಶಗಳಲ್ಲಿ ಚುನಾವಣೆಗಳು ನಡೆಯಲಿಕ್ಕಿವೆ. ಈ ಚುನಾವಣೆಗಳು ನ್ಯಾಯೋಚಿತವಾಗಿ ಮತ್ತು ಸುರಕ್ಷಿತವಾಗಿ ನಡೆಯುವಂತಾಗಲು ನಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ನಾವು ಮಾಡುತ್ತೇವೆ ಎಂದು ಝುಕರ್‌ಬರ್ಗ್‌ ಅಮೆರಿಕದ ಕ್ಯಾಪಿಟೋಲ್‌ ಹಿಲ್‌ನಲ್ಲಿ  ನ್ಯಾಯಾಂಗ ಮತ್ತು ವಾಣಿಜ್ಯ ಸೆನೆಟ್‌ ಸಮಿತಿಯ ಜಂಟಿ ಸಭೆಯಲ್ಲಿ ಹೇಳಿದರು. 

ಭಾರತ, ಹಂಗರಿ ಮತ್ತು ಬ್ರಝಿಲ್‌ ಸೇರಿದಂತೆ ಹಲವು ದೇಶಗಳಲ್ಲಿ ನಡೆಯುವ ಚುನಾವಣೆಗಳ ಮಹತ್ವವನ್ನು ನಾವು ಚೆನ್ನಾಗಿ ಅರಿತಿದ್ದೇವೆ ಎಂದು ಝುಕರ್‌ಬರ್ಗ್‌ ಹೇಳಿದರು. 

ಕೋಟ್ಯಂತರ ಫೇಸ್‌ ಬುಕ್‌ ಬಳಕೆದಾರರ ಖಾಸಗಿ ಮಾಹಿತಿಗಳನ್ನು ಬ್ರಿಟನ್‌ನ ಕೇಂಬ್ರಿಜ್‌ ಅನಾಲಿಟಿಕಾ ಸಂಸ್ಥೆ ಕದ್ದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅಮೆರಿಕಕ್ಕೆ ಉತ್ತರದಾಯಿಯಾಗಿ ಝುಕರ್‌ಬರ್ಗ್‌ ಪ್ರಮಾಣೀಕೃತ ಹೇಳಿಕೆ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next